
ನಾಪೋಕ್ಲು ಫೆ.19 NEWS DESK : ಮೂರ್ನಾಡು ಅನುದಾನಿತ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳಿಂದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮೂರ್ನಾಡು ಅನುದಾನಿತ ಪ್ರೌಢಶಾಲೆಯ 1999-2002 ಸಾಲಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಕನ್ನಡ ಅಧ್ಯಾಪಕರಾಗಿದ್ದ ಎಸ್.ಡಿ.ಪ್ರಶಾಂತ್ ಹಾಗೂ ಶಿಕ್ಷಕರಾದ ಕೃಷ್ಣಪ್ಪ, ಗೀತಾ ಹಾಗೂ ಸುಜಾತ ಅವರನ್ನು ಸನ್ಮಾನಿಸಿ, ಗೌರವಿಸಿದರು. ಕಾರ್ಯಕ್ರಮದಲ್ಲಿ ತಮ್ಮ ಶಾಲಾ ದಿನದ ಘಟನೆಗಳನ್ನು ಮೆಲುಕು ಹಾಕುತ್ತಾ ಭಾವುಕರಾದ ಹಳೆಯ ವಿದ್ಯಾರ್ಥಿಗಳು, ಗುರುಗಳ ಸ್ಪೂರ್ತಿದಾಯಕ ಮಾತುಗಳಿಗೆ ಕಿವಿಯಾದರು. ಶಾಲಾ ಮಕ್ಕಳಿಗೆ ಸಿಹಿವಿತರಿಸಿ ಸಂಭ್ರಮಿಸಿದರು. ಈ ಸಂದರ್ಭ ಶಿಕ್ಷಕ ವರ್ಗ, ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









