Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕೊಡಗಿನಲ್ಲಿ ಜನಜಾಗೃತಿ : 50 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಹನ ಜಾಥಾ*
  • *ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ*
  • *ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ : ಮಡಿಕೇರಿಯಲ್ಲಿ ಪ್ರತಿಭಟನೆ*
  • *ಕಡಿಯತನಾಡ್‌ನ ಕುರಿತು ಬೃಹತ್ ಅಧ್ಯಯನ ಕೃತಿ ಬಿಡುಗಡೆ : ಮೊದಲ ಬಾರಿಗೆ ನಾಡಿನ ಸಮಗ್ರ ಅಧ್ಯಯನ : ಬೆಂಗಳೂರಿನಲ್ಲಿ ಸೆ.27 ರಂದು ಲೋಕಾರ್ಪಣೆ*
  • *ಸೆ.27ರಂದು ಸ್ವಚ್ಛತಾ ಕಾರ್ಯಕ್ರಮ*
  • *ಸುಂದರನಗರದಲ್ಲಿ ಬೀದಿ ನಾಯಿಗಳ ಹಾವಳಿ : ವೃದ್ಧರ ಮೇಲೆ ದಾಳಿ : ಕ್ರಮಕ್ಕೆ ಒತ್ತಾಯ*
  • *ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಮಗ್ರ ಉಚಿತ ಆರೋಗ್ಯ ಶಿಬಿರ*
  • *ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆ ಆರಂಭ*
  • *ಮಡಿಕೇರಿ ನಗರ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ*
  • *ವಿರಾಜಪೇಟೆ ಅರಣ್ಯ ಇಲಾಖೆಗೆ ನೂತನ ಬೊಲೆರೋ ವಾಹನ ಹಸ್ತಾಂತರ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ : ಯುವಜನಾಂಗದಲ್ಲಿ ಉತ್ತಮ ನಾಯಕತ್ವಗುಣ, ವ್ಯಕ್ತಿತ್ವ ವಿಕಸನ ಬೆಳೆಸಲು ಜೆಸಿಐ ಸಹಕಾರಿ : ಪ್ರಜ್ವಲ್ ಎಸ್.ಜೈನ್* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ : ಯುವಜನಾಂಗದಲ್ಲಿ ಉತ್ತಮ ನಾಯಕತ್ವಗುಣ, ವ್ಯಕ್ತಿತ್ವ ವಿಕಸನ ಬೆಳೆಸಲು ಜೆಸಿಐ ಸಹಕಾರಿ : ಪ್ರಜ್ವಲ್ ಎಸ್.ಜೈನ್* 

ಫೆಬ್ರವರಿ 23, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಸುಂಟಿಕೊಪ್ಪ ಫೆ.22 NEWS DESK :  ಸಮಾಜಕ್ಕೆ ಸೇವೆ ಸಲ್ಲಿಸಲು ಯುವ ಸಂಘಟನೆಗಳು ಬೆಳೆದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ. ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ ಸಮಾಜದ ಕಟ್ಟಕಡೆಯ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಅವಕಾಶಕ್ಕೆ ಜೆಸಿಐ ಸಂಸ್ಥೆಯು ನಿರಂತರ ವೇದಿಕೆ ಕಲ್ಪಿಸಿದೆ’ ಎಂದು ಜೆಸಿಐ ವಲಯ-14ರ ನೂತನ ಅಧ್ಯಕ್ಷ ಪ್ರಜ್ವಲ್ ಎಸ್.ಜೈನ್ ಹೇಳಿದರು. ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ ಸಮೀಪದ ಕೆದಕಲ್ ನ ಚೆರ್ರಿ ಲಾಫ್ಟ್ ವಿಹಾರಧಾಮದ ಸಭಾಂಗಣದಲ್ಲಿ ಏರ್ಪಡಿಸಿದ್ದ  ಸುಂಟಿಕೊಪ್ಪ ಜೆಸಿಐ ಸಂಸ್ಥೆಯ 25 ನೇ ವರ್ಷದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಜೆಸಿಐ ಪದಾಧಿಕಾರಿಗಳಿಗೆ ಅಧಿಕಾರ ಪ್ರಮಾಣ ಬೋಧಿಸಿ ಅವರು ಮಾತನಾಡಿದರು. ಜೆಸಿಐ ಸಂಸ್ಥೆಯು ತನ್ನ ಸಾಮಾಜಿಕ ಕಾರ್ಯಗಳೊಂದಿಗೆ ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿಗೆ ಪೂರಕವಾದ ಕಾರ್ಯಗಳನ್ನು ಕೈಗೊಳ್ಳಬೇಕು. ಹಾಗೆಯೇ, ಯುವಜನಾಂಗವನ್ನು ಉತ್ತಮ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಜೆಸಿಐ ಸದಸ್ಯರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಉತ್ತಮ ಪರಿಸರ ಕಾಪಾಡುವ ದಿಸೆಯಲ್ಲಿ ನಾವು ನೆಲ- ಜಲ ಸಂರಕ್ಷಣೆ ಜತೆಗೆ ಶುದ್ಧ ಗಾಳಿ, ನೀರು ಕಲುಷಿತಗೊಳ್ಳದಂತೆ ಜಾಗೃತ ವಹಿಸಬೇಕು‘ ಎಂದು ಜೈನ್ ಹೇಳಿದರು. 25 ವರ್ಷಗಳನ್ನು ಪೂರೈಸುತ್ತಿರುವ ಸುಂಟಿಕೊಪ್ಪ ಘಟಕವು ತನ್ನ ಬೆಳ್ಳಿಹಬ್ಬ ಮಹೋತ್ಸವ ದ ಅಂಗವಾಗಿ ವಿವಿಧ ವೈವಿಧ್ಯಮಯ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಉತ್ತಮ ಸಂಸ್ಥೆಯಾಗಿ ರೂಪುಗೊಳ್ಳಲಿ ಎಂದು ಜೈನ್ ಹೇಳಿದರು. ಅಧಿಕಾರ ಪ್ರಮಾಣ ವಚನ ಬೋಧಿಸಿದ ಸಂಸ್ಥೆಯ ವಲಯ-14 ರ ಉಪಾಧ್ಯಕ್ಷ ಗೋಣಿಬೀಡಿನ ಬಿ.ಎಂ.ಜಗತ್ ಮಾತನಾಡಿ, ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಯುವಜನಾಂಗವು ಉತ್ತಮ ನಾಯಕತ್ವಗುಣ ಬೆಳೆಸಿಕೊಳ್ಳಲು ಜೆಸಿಐ ಸಂಸ್ಥೆ ಪೂರಕವಾಗಿದೆ’. ಸತ್ಕಾರ್ಯಗಳನ್ನು ರೂಪಿಸುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದರು. ಜೆಸಿಐ ಸಂಸ್ಥೆಯ 2021 ರ ಮಿಸ್ ಇಂಡಿಯಾ ವರ್ಲ್ಡ್ ವಿನ್ನರ್ ಆದ ಪೊನ್ನಂಪೇಟೆಯ ಕಾನಿಯಂಡ ಕಾವ್ಯ ಸಂಜು ಮಾತನಾಡಿ, ಯುವಜನಾಂಗವು ಆತ್ಮವಿಶ್ವಾಸ ಬೆಳೆಸಿಕೊಂಡು ಯಾವುದೇ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು. ಜೆಸಿಐ ಸಂಸ್ಥೆಯ ಚಟುವಟಿಕೆಗಳು ನಮ್ಮಲ್ಲಿ‌ ಛಲಗಾರಿಕೆ, ಉತ್ತಮ ನಾಯಕತ್ವ ಹಾಗೂ ದೂರದೃಷ್ಠಿ ವ್ಯಕ್ತಿತ್ವ ಬೆಳೆಸಲು ಸಹಕಾರಿಯಾಗಿವೆ ಎಂದರು. ಅಧಿಕಾರ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ
ಸಂಸ್ಥೆಯ ನೂತನ ಅಧ್ಯಕ್ಷ ಎಂ.ಆರ್.ಜಯಪ್ರಕಾಶ್, 25 ವಸಂತಗಳನ್ನು ಪೂರೈಸುತ್ತಿರುವ ಸಂಸ್ಥೆಯ ಸೇವಾ ಚಟುವಟಿಕೆಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಪಿ.ಯು.ನಂದಕುಮಾರ್ ಮಾತನಾಡಿ, ಸಂಸ್ಥೆಯ ವತಿಯಿಂದ ಕೈಗೊಂಡ ವೈವಿಧ್ಯಮಯ ಸೇವಾ ಚಟುವಟಿಕೆಗಳ ಕುರಿತು ವಿವರಿಸಿದರು. ಸಂಸ್ಥೆಯ ವಲಯ- 14 ರ ಮಾಜಿ ಅಧ್ಯಕ್ಷ ಕಾಯರ್ ಮಾರ್ ದೇವಿಪ್ರಸಾದ್, ಸುಂಟಿಕೊಪ್ಪ ಜೆಸಿಐ ಸಂಸ್ಥೆಯು ಬೆಳೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ನೂತನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿದರು. ಸಂಸ್ಥೆಯ ಮಾಜಿ ಅಧ್ಯಕ್ಷರಾದ ಡೆನಿಸ್ ಡಿ’ಸೋಜ, ಮನು ಅಚ್ಚಮಯ್ಯ, ಫೆಲ್ಸಿ ಡೆನಿಸ್, ಅರುಣಕುಮಾರ್, ಕೆ.ಪಿ.ಪ್ರೀತಂ, ಬಿ.ಕೆ. ಸತೀಶ್, ಟಿ.ಜಿ.ಪ್ರೇಮಕುಮಾರ್, ಸಂಪತ್ ಕುಮಾರ್ , ಜಿ.ಬಿ.ಹರೀಶ್, ಬಿ.ಎಂ. ವೆಂಕಪ್ಪ, ನಿಕಟ ಪೂರ್ವ ಕಾರ್ಯದರ್ಶಿ ನಿಯಾಜುದ್ದೀನ್, ಎಚ್.ಆರ್. ನಿರಂಜನ್, ಪ್ರಣಿತ್ ಡಿ,ಸೋಜ, ಚೈತ್ರ ಡಿ.ಪ್ರಸಾದ್ , ಸೌಮ್ಯ ಜಯಪ್ರಕಾಶ್  ಹಾಗೂ ಪದಾಧಿಕಾರಿಗಳು ಇದ್ದರು. ಮೊನಾಲಿ ಪ್ರಸಾದ್ ಜೇಸೀವಾಣಿಯನ್ನು ವಾಚಿಸಿದರು. :: ಸನ್ಮಾನ :: ಜೆಸಿಐ ಸಂಸ್ಥೆಯ ವಲಯ -14 ರ ಅಧ್ಯಕ್ಷ ಪ್ರಜ್ವಲ್ ಎಸ್.ಜೈನ್ ಹಾಗೂ 2021 ರ ಮಿಸ್ ಇಂಡಿಯಾ ವರ್ಲ್ಡ್ ವಿನ್ನರ್ ಆದ ಪೊನ್ನಂಪೇಟೆಯ ಕಾನಿಯಂಡ ಕಾವ್ಯ ಸಂಜು ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

Follow us Follow us
Share. WhatsApp Facebook Twitter Email Telegram Copy Link

Related Posts

*ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕೊಡಗಿನಲ್ಲಿ ಜನಜಾಗೃತಿ : 50 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಹನ ಜಾಥಾ*

ಸೆಪ್ಟೆಂಬರ್ 25, 2026

*ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ*

ಸೆಪ್ಟೆಂಬರ್ 25, 2026

*ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ : ಮಡಿಕೇರಿಯಲ್ಲಿ ಪ್ರತಿಭಟನೆ*

ಸೆಪ್ಟೆಂಬರ್ 25, 2026

*ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ*

ಸೆಪ್ಟೆಂಬರ್ 25, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

  ಮಡಿಕೇರಿ ಸೆ.25 NEWS DESK : ದಲಿತ ಸಂಘಟನೆಗಳು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ ಕುರಿತು ಮಾಜಿ ಸಂಸದ…

*ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ : ಮಡಿಕೇರಿಯಲ್ಲಿ ಪ್ರತಿಭಟನೆ*

ಸೆಪ್ಟೆಂಬರ್ 25, 2026

*ಕಡಿಯತನಾಡ್‌ನ ಕುರಿತು ಬೃಹತ್ ಅಧ್ಯಯನ ಕೃತಿ ಬಿಡುಗಡೆ : ಮೊದಲ ಬಾರಿಗೆ ನಾಡಿನ ಸಮಗ್ರ ಅಧ್ಯಯನ : ಬೆಂಗಳೂರಿನಲ್ಲಿ ಸೆ.27 ರಂದು ಲೋಕಾರ್ಪಣೆ*

ಸೆಪ್ಟೆಂಬರ್ 25, 2026

*ಸೆ.27ರಂದು ಸ್ವಚ್ಛತಾ ಕಾರ್ಯಕ್ರಮ*

ಸೆಪ್ಟೆಂಬರ್ 25, 2026

*ಸುಂದರನಗರದಲ್ಲಿ ಬೀದಿ ನಾಯಿಗಳ ಹಾವಳಿ : ವೃದ್ಧರ ಮೇಲೆ ದಾಳಿ : ಕ್ರಮಕ್ಕೆ ಒತ್ತಾಯ*

ಸೆಪ್ಟೆಂಬರ್ 25, 2026

*ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಮಗ್ರ ಉಚಿತ ಆರೋಗ್ಯ ಶಿಬಿರ*

ಸೆಪ್ಟೆಂಬರ್ 25, 2026

*ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆ ಆರಂಭ*

ಸೆಪ್ಟೆಂಬರ್ 25, 2026

*ಮಡಿಕೇರಿ ನಗರ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ*

ಸೆಪ್ಟೆಂಬರ್ 25, 2026

*ವಿರಾಜಪೇಟೆ ಅರಣ್ಯ ಇಲಾಖೆಗೆ ನೂತನ ಬೊಲೆರೋ ವಾಹನ ಹಸ್ತಾಂತರ*

ಸೆಪ್ಟೆಂಬರ್ 25, 2026

*ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ 25ನೇ ವಾರ್ಷಿಕ ಮಹಾಸಭೆ*

ಸೆಪ್ಟೆಂಬರ್ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.