Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ : ಸೋಮವಾರಪೇಟೆ ಬಿಜೆಪಿ ಅಸಮಾಧಾನ*
  • *ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*
  • *ನಮ್ಮ ಧ್ವನಿಯ ಆರೈಕೆ : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ‘ವಿಶ್ವ ಧ್ವನಿ’ ದಿನಾಚರಣೆ*
  • *ಸುಂಟಿಕೊಪ್ಪದಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ*
  • *ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಕೌಶಲ್ಯ ಕಾರ್ಯಾಗಾರ*
  • *ಆಟೋ ಹಾಗೂ ಮಾಂದಲ್ ಪಟ್ಟಿ ಬಾಡಿಗೆ ವಾಹನ ದರ ಪರಿಷ್ಕರಣೆ : ಉಪ ಸಮಿತಿ ರಚನೆಗೆ ನಿರ್ಧಾರ*
  • *ವಾಂಡರರ್ಸ್ ಶಿಬಿರ : ಕ್ರೀಡೆಯಲ್ಲಿ ಅಭ್ಯಾಸ ನಿರಂತರವಾಗಿರಬೇಕು :  ಒಲಂಪಿಯನ್ ಮನೆಯಪಂಡ ಸೋಮಯ್ಯ*
  • *ಚೆಟ್ಟಳ್ಳಿಯಲ್ಲಿ ವಿಜ್ಞಾನ ಆಧಾರಿತ ಪೋಷಕಾಂಶ ಜಾಗೃತಿ ಕಾರ್ಯಕ್ರಮ : ಸಾವಯವ ಕೃಷಿ, ಜೈವಿಕ ಕೀಟನಾಶಕ ಹಾಗೂ ಆಧುನಿಕ ತೋಟಗಾರಿಕಾ ತಂತ್ರಜ್ಞಾನ ಅಳವಡಿಕೆಗೆ ಒತ್ತು*
  • *ವಿರಾಜಪೇಟೆಯಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ : ರಕ್ತದಾನವು ಸಾಮಾಜಿಕ ಜವಾಬ್ದಾರಿಯಾಗಿದೆ : ಡಾ.ಕರುಂಬಯ್ಯ*
  • *ಸಿದ್ದಾಪುರ : ಏ.18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿರಾಜಪೇಟೆ : ನಾಣ್ಯ, ನೋಟುಗಳು ಇತಿಹಾಸದ ಹೆಜ್ಜೆಗಳನ್ನು ತಿಳಿಸುತ್ತದೆ : ಡಿವೈಎಸ್‍ಪಿ ಎಸ್.ಮಹೇಶ್ ಕುಮಾರ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿರಾಜಪೇಟೆ : ನಾಣ್ಯ, ನೋಟುಗಳು ಇತಿಹಾಸದ ಹೆಜ್ಜೆಗಳನ್ನು ತಿಳಿಸುತ್ತದೆ : ಡಿವೈಎಸ್‍ಪಿ ಎಸ್.ಮಹೇಶ್ ಕುಮಾರ್*

ಫೆಬ್ರವರಿ 24, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
oplus_0
Facebook Twitter WhatsApp Email Telegram Copy Link

ವಿರಾಜಪೇಟೆ ಫೆ.24 NEWS DESK : ನಾಣ್ಯ ನೋಟುಗಳ ಸಂಗ್ರಹದ ಹವ್ಯಾಸವನ್ನು ಇಂದಿನ ಪೀಳಿಗೆಯ ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ವಿರಾಜಪೇಟೆಯ ಡಿವೈಎಸ್‍ಪಿ ಎಸ್.ಮಹೇಶ್ ಕುಮಾರ್ ಹೇಳಿದರು. ಪಂಜರಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಭಾರತದ 2600 ವರ್ಷ ಪುರಾತನ, ನಂತರದ ಇತಿಹಾಸ ಪುರಾತನ ಹಾಗೂ ವಿಶ್ವದ 196 ದೇಶಗಳ ವಿವಿಧ ಕಾಲಘಟ್ಟದ ನಾಣ್ಯ ನೋಟುಗಳ ಬೃಹತ್ ಪ್ರದರ್ಶನ ಕಾರ್ಯಕ್ರಮವನ್ನು ಉದ್ಗಾಟಿಸಿ ಅವರು ಮಾತನಾಡಿದರು. ನಾಣ್ಯಗಳು ಮೌನವಾಗಿಯೇ ಗತಕಾಲದ ಇತಿಹಾಸವನ್ನು ತಿಳಿಸುತ್ತವೆ. ಈ ನಾಣ್ಯ ಪ್ರದರ್ಶನದಲ್ಲಿ ಅಪರೂಪದ ದೇಶ, ವಿದೇಶಗಳ, ಅರಸರ ಕಾಲದ ವೈವಿಧ್ಯಮಯ ನಾಣ್ಯ ಹಾಗೂ ನೋಟುಗಳಿದ್ದು, ಇವು ನಮ್ಮ ಇತಿಹಾಸದ ಹೆಜ್ಜೆಗಳನ್ನು ತಿಳಿಸುತ್ತದೆ. ಆಯಾ ಕಾಲದ ಅರಸರ ಆರ್ಥಿಕ, ಧಾರ್ಮಿಕ ಸ್ಥಿತಿಗತಿಗಳನ್ನು ಅನಾವರಣ ಮಾಡುತ್ತವೆ ಎಂದರಲ್ಲದೆ ನಾಣ್ಯಗಳು ಎಲ್ಲರನ್ನು ಆಕರ್ಷಿಸುತ್ತಿದೆ. ಈ ಪ್ರದರ್ಶನ ವೀಕ್ಷಿಸಲು ಒಂದು ದಿನವಾದರೂ ಬೇಕು, ಅಷ್ಟೊಂದು ನಾಣ್ಯ ನೋಟುಗಳ ಸಂಗ್ರಹ ಇಲ್ಲಿದೆ. ಸಂಗ್ರಹಕಾರರ ಶ್ರಮ ಈ ಪ್ರದರ್ಶನದಲ್ಲಿ ಕಂಡು ಬರುತ್ತದೆ. ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕು. ದುಶ್ಚಟಗಳಿಗೆ ದಾಸರಾಗದೆ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ಹಾಗೆಯೇ ಹಿರಿಯರನ್ನು ಗೌರವಿಸುವ ಗುಣದೊಂದಿಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಸಾಹಿತಿ ರಜಿತ ಕಾರ್ಯಪ್ಪ ಮಾತನಾಡಿ, ಹಳೆಯ ನಾಣ್ಯ ನೋಟುಗಳ ಸಂಗ್ರಹ ಮಾಡಿ ಗತಕಾಲದ ಇತಿಹಾಸವನ್ನು ಎಲ್ಲ ವಿದ್ಯಾರ್ಥಿಗಳು ತಿಳಿದುಕೊಳ್ಳಲು ಕಾರಣಕರ್ತರಾದ ಅಜಯ್ ರಾವ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ನಮ್ಮ ಚರಿತ್ರೆಯ ಮೆಲಕು ಹಾPಯಿದರಿಂದ ಸಾಧ್ಯವಾಗುತ್ತದೆ ಎಂದರು. ನಮ್ಮ ದೇಶದ ಶ್ರೀಮಂತಿಕೆಯು ಹಳೆಯ ನಾಣ್ಯಗಳಿಂದ ತಿಳಿಯುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಏನಾದರೂ ಗುರಿಯಿಟ್ಟುಕೊಂಡು ಅದನ್ನು ಸಾಧಿಸುವ ಛಲ ಹೊಂದಬೇಕು. ಹಾಗೆಯೇ ಮೊಬೈಲ್ ಗೀಳನ್ನು ಬಿಟ್ಟು ಪತ್ರಿಕೆಗಳನ್ನು ಓದುವುದರ ಮೂಲಕ ತಮ್ಮ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ನಾಣ್ಯ, ನೋಟುಗಳ ಸಂಗ್ರಹಗಾರರಾದ ಅಜಯ್ ನಾರಾಯಣ ರಾವ್ ಮಾತನಾಡಿ, ಭಾರತವನ್ನು ಅನೇಕ ಅರಸರು, ವಿದೇಶಿ ಅಕ್ರಮಣಕಾರರು ಆಳಿದ್ದಾರೆ. ಅವರ ಕಾಲದ ಆಡಳಿತವನ್ನು ತಿಳಿಯಲು ಆಗಿನ ನಾಣ್ಯ ಮತ್ತು ನೋಟುಗಳು ಸಹಕಾರಿ. ಸಂಗ್ರಹದಲ್ಲಿ 196 ದೇಶಗಳ ನಾಣ್ಯ ಮತ್ತು ನೋಟುಗಳಿವೆ. ವಿದ್ಯಾರ್ಥಿಗಳು ಪ್ರದರ್ಶನ ವೀಕ್ಷಿಸಿ ಇದರಿಂದ ಇತಿಹಾಸವನ್ನು ಅರಿತುಕೊಳ್ಳಬೇಕು. ಅಲ್ಲದೆ ಜೀವನದ ಪಾಠವನ್ನು ತಿಳಿದುಕೊಂಡು ಸಮಾಜದಲ್ಲಿ ಅರ್ಥಪೂರ್ಣ ಬದುಕನ್ನು ಸಾಗಿಸಬೇಕು. ಎಲ್ಲರನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸಮಾಜ ಘಾತುಕ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಾರದು ಎಂದು ಎಚ್ಚರಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಮಕ್ಕಳಿದ್ದಾಗ ಹಳೆಯ ಕಾಲದ ನಾಣ್ಯಗಳನ್ನು ಡಬ್ಬಗಳಲ್ಲಿ ಸಂಗ್ರಹಿಸುತ್ತಿದ್ದೇವು. ಅವುಗಳ ಮೇಲೆ ನಮಗಿರುವ ಭಾವನೆಗಳು ಮುಖ್ಯವಾಗುತ್ತವೆ. ಇಂದಿನ ಮಕ್ಕಳಲ್ಲಿ ಹಳೆಯ ನಾಣ್ಯ ನೋಟುಗಳ ಸಂಗ್ರಹದ ಹವ್ಯಾಸ ಬೆಳೆಸಬೇಕು ಎಂದ ಅವರು, ಇಂತಹ ಪ್ರದರ್ಶನವು ನಮ್ಮ ಗತಕಾಲದ ಇತಿಹಾಸ, ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದರು. ವೇದಿಕೆಯಲ್ಲಿ ಡಿವೈಎಸ್‍ಪಿ ಮಹೇಶ್ ಕುಮಾರ್, ನಾಣ್ಯ ಸಂಗ್ರಹಕಾರ ಅಜಯ್ ರಾವ್, ಸಾಹಿತಿ ರಜಿತ ಕಾರ್ಯಪ್ಪ, ಸಮಾಜ ಸೇವಕ ರವಿ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ನಾಣ್ಯ ನೋಟುಗಳ ಪ್ರದರ್ಶನವನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ದಿಲನ್, ಕವಿತಾ, ಭವ್ಯ, ಹಾಗೂ ಪದ್ಮನಾಭ ಟಿ.ಕೆ. ರದೀಶ್ ಕೆ.ಆರ್. ವಿನೋದ್ ಎ.ಎನ್. ಸುದಿಶ್ ಮೋಹನ್, ಆರ್ ಶರವಣ ಕುಮಾರ್, ಮೇಕತಂಡ ಪ್ರವೀಣ್, ಶಶಿಧರ್ ಕೆ.ಆರ್. ಇದ್ದರು.

oplus_0

oplus_0

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ : ಸೋಮವಾರಪೇಟೆ ಬಿಜೆಪಿ ಅಸಮಾಧಾನ*

ಏಪ್ರಿಲ್ 18, 2026

*ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*

ಏಪ್ರಿಲ್ 18, 2026

*ನಮ್ಮ ಧ್ವನಿಯ ಆರೈಕೆ : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ‘ವಿಶ್ವ ಧ್ವನಿ’ ದಿನಾಚರಣೆ*

ಏಪ್ರಿಲ್ 18, 2026

*ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*

ಏಪ್ರಿಲ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.18 : ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ ಸೂಕ್ತ ಕ್ರಮ ವಹಿಸಬೇಕು…

*ನಮ್ಮ ಧ್ವನಿಯ ಆರೈಕೆ : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ‘ವಿಶ್ವ ಧ್ವನಿ’ ದಿನಾಚರಣೆ*

ಏಪ್ರಿಲ್ 18, 2026

*ಸುಂಟಿಕೊಪ್ಪದಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ*

ಏಪ್ರಿಲ್ 18, 2026

*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಕೌಶಲ್ಯ ಕಾರ್ಯಾಗಾರ*

ಏಪ್ರಿಲ್ 18, 2026

*ಆಟೋ ಹಾಗೂ ಮಾಂದಲ್ ಪಟ್ಟಿ ಬಾಡಿಗೆ ವಾಹನ ದರ ಪರಿಷ್ಕರಣೆ : ಉಪ ಸಮಿತಿ ರಚನೆಗೆ ನಿರ್ಧಾರ*

ಏಪ್ರಿಲ್ 18, 2026

*ವಾಂಡರರ್ಸ್ ಶಿಬಿರ : ಕ್ರೀಡೆಯಲ್ಲಿ ಅಭ್ಯಾಸ ನಿರಂತರವಾಗಿರಬೇಕು :  ಒಲಂಪಿಯನ್ ಮನೆಯಪಂಡ ಸೋಮಯ್ಯ*

ಏಪ್ರಿಲ್ 17, 2026

*ಚೆಟ್ಟಳ್ಳಿಯಲ್ಲಿ ವಿಜ್ಞಾನ ಆಧಾರಿತ ಪೋಷಕಾಂಶ ಜಾಗೃತಿ ಕಾರ್ಯಕ್ರಮ : ಸಾವಯವ ಕೃಷಿ, ಜೈವಿಕ ಕೀಟನಾಶಕ ಹಾಗೂ ಆಧುನಿಕ ತೋಟಗಾರಿಕಾ ತಂತ್ರಜ್ಞಾನ ಅಳವಡಿಕೆಗೆ ಒತ್ತು*

ಏಪ್ರಿಲ್ 17, 2026

*ವಿರಾಜಪೇಟೆಯಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ : ರಕ್ತದಾನವು ಸಾಮಾಜಿಕ ಜವಾಬ್ದಾರಿಯಾಗಿದೆ : ಡಾ.ಕರುಂಬಯ್ಯ*

ಏಪ್ರಿಲ್ 17, 2026

*ಸಿದ್ದಾಪುರ : ಏ.18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಏಪ್ರಿಲ್ 17, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5729 ಪ್ರಕರಣಗಳು ಇತ್ಯರ್ಥ*

ಏಪ್ರಿಲ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.