
ವಿರಾಜಪೇಟೆ ಫೆ.24 NEWS DESK : ಪೆರುಂಬಾಡಿಯ ಝೆನ್ ಶಿಟೋ ರಿಯೋ ಸ್ಕೂಲ್ ಆಫ್ ಇಂಡಿಯಾ ವತಿಯಿಂದ ಸೆನ್ಸಾಯಿ ಪಿ.ಆರ್ ಶಿವಪ್ಪ ಅವರ ನೇತೃತ್ವದಲ್ಲಿ ಪೆರುಂಬಾಡಿಯ ಸಮುದಾಯ ಭವನದಲ್ಲಿ ದ್ವಿತೀಯ ವರ್ಷದ ಕರಾಟೆ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿರಾಜಪೇಟೆಯ ಹಲವು ವಿದ್ಯಾರ್ಥಿಗಳು ಪದಕವನ್ನು ತಮ್ಮದಾಗಿಸಿಕೊಂಡರು. ಈ ಸಂದರ್ಭ ಸ್ಥಳಿಯರು, ಕರಾಟೆ ಶಿಕ್ಷಕರಾದ ಸೆನ್ಸಾಯಿ ಸುಮನ್, ಸೆನ್ಸಾಯಿ ಅನಿಲ್ ಕುಮಾರ್, ಸೆನ್ಸಾಯಿ ಆಂಟೋನಿ, ಸೆನ್ಸಾಯಿ ಪಿ.ಆರ್ ಶಿವಪ್ಪ ಹಾಗೂ ಮಕ್ಕಳ ಪೋಷಕರು ಹಾಜರಿದ್ದರು.









