Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ*
  • *ಕೊಡವ ಸಾಹಿತ್ಯ-ಸಂಸ್ಕೃತಿರ ಅಂದೋಳ : ಜಿಲ್ಲೆ ಚಿಕ್ಕದು, ಕೊಡುಗೆ ದೊಡ್ಡದು : ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ*
  • *ಕಂಬಿಬಾಣೆ ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವಾಲಯದ ಸಭಾಭವನ ನಿರ್ಮಾಣಕ್ಕೆ ಚಾಲನೆ*
  • *ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಮತ್ತು ಪ್ರಬಂಧ ಸ್ಪರ್ಧೆ : ಭಾಷೆಯ ಒಳ ಮಿಡಿತಗಳು ಅರಿತಾಗ ಸರಳ ಕಾವ್ಯ ಸೃಷ್ಟಿಯಾಗುತ್ತದೆ : ಪತ್ರಕರ್ತ ಜಗದೀಶ್ ಜೋಡುಬಿಟಿ*
  • *ನಾಪೋಕ್ಲು ಪ್ರಕರಣ : ನಾಲ್ವರ ಬಂಧನ*
  • *ಸಂವಿಧಾನ ಮತ್ತು ಪತ್ರಿಕೋದ್ಯಮದ ಕುರಿತ ವಿಚಾರ ಸಂಕಿರಣ : ಕಾರ್ಯಕ್ರಮ ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮಾಜದ ಒಳಿತಿಗಾಗಿ ಬಳಸಿ : ಶಾಸಕ ಡಾ. ಮಂತರ್ ಗೌಡ ಕರೆ*
  • *ಮಾ.4 ರಂದು ಕುಶಾಲನಗರದಲ್ಲಿ ಕೈಗಾರಿಕೋದ್ಯಮಿಗಳಿಗೆ ಜಾಗೃತಿ ಕಾರ್ಯಕ್ರಮ*
  • *ಕೇಂದ್ರ ಸಚಿವ ಹರ್ ದೀಪ್ ಸಿಂಗ್ ವಜಾಕ್ಕೆ ಆಗ್ರಹಿಸಿ ಕೊಡಗು ಮಹಿಳಾ ಕಾಂಗ್ರೆಸ್ ಪ್ರತಿಭಟನೆ*
  • *ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಿ : ಬಿಜೆಪಿ ಆಗ್ರಹ*
  • *ಕಾಂಗ್ರೆಸ್ ಸರಕಾರ ಬಡವರಿಗೆ ನಿವೇಶನ ಮತ್ತು ವಸತಿ ನೀಡದೆ ವಂಚಿಸಿದೆ : ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಎಐಟಿಯುಸಿ ಆರೋಪ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home»ಇತ್ತೀಚಿನ ಸುದ್ದಿಗಳು»*ಕೇಂದ್ರ ಸಚಿವ ಹರ್ ದೀಪ್ ಸಿಂಗ್ ವಜಾಕ್ಕೆ ಆಗ್ರಹಿಸಿ ಕೊಡಗು ಮಹಿಳಾ ಕಾಂಗ್ರೆಸ್ ಪ್ರತಿಭಟನೆ*
ಇತ್ತೀಚಿನ ಸುದ್ದಿಗಳು

*ಕೇಂದ್ರ ಸಚಿವ ಹರ್ ದೀಪ್ ಸಿಂಗ್ ವಜಾಕ್ಕೆ ಆಗ್ರಹಿಸಿ ಕೊಡಗು ಮಹಿಳಾ ಕಾಂಗ್ರೆಸ್ ಪ್ರತಿಭಟನೆ*

February 28, 20262 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ ಫೆ.28 NEWS DESK : ಗಂಭೀರ ಆರೋಪ ಎದುರಿಸುತ್ತಿರುವ ಜೆಫ್ರಿ ಎಪ್ಸ್ಟೀನ್ ನೊಂದಿಗೆ ಸಂಪರ್ಕ ಹೊಂದಿರುವ ಟೀಕೆಗೆ ಗುರಿಯಾಗಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವ ಹಾಗೂ ಬಿಜೆಪಿ ಮುಖಂಡ ಹರ್ ದೀಪ್ ಸಿಂಗ್ ಪುರಿ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಬಂಧಿಸಬೇಕು ಎಂದು ಒತ್ತಾಯಿಸಿ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು. ಶುಕ್ರವಾರ ಸಂಜೆ ಮಡಿಕೇರಿ ನಗರದ ಇಂದಿರಾಗಾಂಧಿ ವೃತ್ತದಿಂದ ಮೊಂಬತ್ತಿ ಹಿಡಿದು ಹಳೆ ಖಾಸಗಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಹರ್ ದೀಪ್ ಸಿಂಗ್ ಪುರಿ, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜಿ.ಆರ್.ಪುಷ್ಪಲತಾ ಮಾತನಾಡಿ ಬಾಲಕಿಯರನ್ನು ಅಪಹರಿಸಿ ಪ್ರಭಾವಿಗಳನ್ನು ಅಪರಾಧ ಕೃತ್ಯದಲ್ಲಿ ಭಾಗಿಯಾಗುವಂತೆ ಮಾಡಿದ ಆರೋಪ ಎದುರಿಸುತ್ತಿರುವ ಜೆಫ್ರಿ ಎಪ್ಸ್ಟೀನ್ ನೊಂದಿಗೆ ಕೇಂದ್ರ ಸಚಿವ ಹರ್ ದೀಪ್ ಸಿಂಗ್ ಪುರಿ ಸಂಪರ್ಕ ಹೊಂದಿರುವುದು ಬಹಿರಂಗವಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಕೂಡ ಯಾಕೆ ಸಚಿವ ಸಂಪುಟದಲ್ಲಿ ಮುಂದುವರೆಸಿದ್ದಾರೆ ಎಂದು ಪ್ರಶ್ನಿಸಿದರು. ಹರ್ ದೀಪ್ ಸಿಂಗ್ ಪುರಿ ಅವರ ಬಂಧನವಾಗುವವರೆಗೆ ಮಹಿಳಾ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ತಿಳಿಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ ಎಪ್ಸ್ಟೀನ್ ಫೈಲ್ ನಲ್ಲಿ ಹೆಸರು ಬಹಿರಂಗಗೊಂಡಿರುವ ಬ್ರಿಟನ್ ಮಾಜಿ ಯುವರಾಜ, ನಾರ್ಜೇನಿಯಾದ ಮಾಜಿ ಪ್ರಧಾನಿ ಸೇರಿದಂತೆ ಅನೇಕ ದೇಶದ ಪ್ರಮುಖ ವ್ಯಕ್ತಿಗಳ ಬಂಧನವಾಗಿದೆ. ವಿಶ್ವ ಸಂಸ್ಥೆ ಮತ್ತು ಅಮೆರಿಕಾದ ಸೆನೆಟ್ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಆದರೆ ಭಾರತದ ಗೌರವಕ್ಕೆ ದಕ್ಕೆ ತಂದಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳದೆ ಪ್ರಧಾನಮಂತ್ರಿಗಳು ಮೌನಕ್ಕೆ ಜಾರಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಕೆ.ಪಿ.ಸಿ.ಸಿ ಸದಸ್ಯರಾದ ಬೇಕಲ್ ರಮಾನಾಥ್, ಕೊಕ್ಕಂಡ ರೂಪಾ ಭೀಮಯ್ಯ, ಪ್ರಮುಖರಾದ ಸುನಿತಾ ಮಂಜುನಾಥ್, ಪಂಕಜ, ಶ್ರೀಜಾ ಸಾಜಿ, ಆಶಾ ಪೂಣಚ್ಚ, ಸುಮಿತಾ ಎಂ.ಜಿ.ಧನ್ಯ, ಸುನಿತಾ ರಾಜನ್, ಪಾರ್ವತಿ ಫ್ಯಾನ್ಸಿ, ಲೀಲಾ ಶೇಷಮ್ಮ, ಶಿವಮ್ಮ, ಮೀನಾಜ್ ಪ್ರವೀಣ್, ಶ್ರೀಮತಿ ಬಂಗೇರ, ವೀಣಾಕ್ಷಿ, ಜಯಮ್ಮ, ಭಾಗ್ಯಮ್ಮ, ಸವಿತ, ವಿಮಲ, ಉದಯ ಚಂದ್ರಿಕ, ಪವಿತ್ರ, ಜಿ.ಸಿ.ಜಗದೀಶ್, ಮಂಡಿರ ಸದಾ ಮುದ್ದಪ್ಪ, ಚಂದ್ರಶೇಖರ್, ಕವನ್ ಕೊತ್ತೋಳಿ, ದಿನೇಶ್ ಕೆ.ಆರ್,ನಿರಂಜನ್, ಅರ್ಜುನ್, ಶರಣ್, ಸುರೇಶ್, ಪ್ರತಾಪ್ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share. Facebook Twitter Pinterest LinkedIn Tumblr Email WhatsApp
Previous Article*ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಿ : ಬಿಜೆಪಿ ಆಗ್ರಹ*
Next Article *ಮಾ.4 ರಂದು ಕುಶಾಲನಗರದಲ್ಲಿ ಕೈಗಾರಿಕೋದ್ಯಮಿಗಳಿಗೆ ಜಾಗೃತಿ ಕಾರ್ಯಕ್ರಮ*

Website design development company services in Mangalore

Forex Trading Teacher in India

Related Posts

*ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ*

February 28, 2026

*ಕೊಡವ ಸಾಹಿತ್ಯ-ಸಂಸ್ಕೃತಿರ ಅಂದೋಳ : ಜಿಲ್ಲೆ ಚಿಕ್ಕದು, ಕೊಡುಗೆ ದೊಡ್ಡದು : ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ*

February 28, 2026

*ಕಂಬಿಬಾಣೆ ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವಾಲಯದ ಸಭಾಭವನ ನಿರ್ಮಾಣಕ್ಕೆ ಚಾಲನೆ*

February 28, 2026

*ಕೊಡವ ಸಾಹಿತ್ಯ-ಸಂಸ್ಕೃತಿರ ಅಂದೋಳ : ಜಿಲ್ಲೆ ಚಿಕ್ಕದು, ಕೊಡುಗೆ ದೊಡ್ಡದು : ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ*

February 28, 2026

ಮಡಿಕೇರಿ ಫೆ.28 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯ-ಸಂಸ್ಕೃತಿ, ಭಾಷೆಯ ರಕ್ಷಣೆ ಮುಖ್ಯವಾದ ಜವಾಬ್ದಾರಿಯಾಗಿದ್ದು, ಸತ್ಕಾರಣಕ್ಕಾಗಿ…

*ಕಂಬಿಬಾಣೆ ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವಾಲಯದ ಸಭಾಭವನ ನಿರ್ಮಾಣಕ್ಕೆ ಚಾಲನೆ*

February 28, 2026

*ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಮತ್ತು ಪ್ರಬಂಧ ಸ್ಪರ್ಧೆ : ಭಾಷೆಯ ಒಳ ಮಿಡಿತಗಳು ಅರಿತಾಗ ಸರಳ ಕಾವ್ಯ ಸೃಷ್ಟಿಯಾಗುತ್ತದೆ : ಪತ್ರಕರ್ತ ಜಗದೀಶ್ ಜೋಡುಬಿಟಿ*

February 28, 2026

*ನಾಪೋಕ್ಲು ಪ್ರಕರಣ : ನಾಲ್ವರ ಬಂಧನ*

February 28, 2026

*ಸಂವಿಧಾನ ಮತ್ತು ಪತ್ರಿಕೋದ್ಯಮದ ಕುರಿತ ವಿಚಾರ ಸಂಕಿರಣ : ಕಾರ್ಯಕ್ರಮ ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮಾಜದ ಒಳಿತಿಗಾಗಿ ಬಳಸಿ : ಶಾಸಕ ಡಾ. ಮಂತರ್ ಗೌಡ ಕರೆ*

February 28, 2026

*ಮಾ.4 ರಂದು ಕುಶಾಲನಗರದಲ್ಲಿ ಕೈಗಾರಿಕೋದ್ಯಮಿಗಳಿಗೆ ಜಾಗೃತಿ ಕಾರ್ಯಕ್ರಮ*

February 28, 2026

*ಕೇಂದ್ರ ಸಚಿವ ಹರ್ ದೀಪ್ ಸಿಂಗ್ ವಜಾಕ್ಕೆ ಆಗ್ರಹಿಸಿ ಕೊಡಗು ಮಹಿಳಾ ಕಾಂಗ್ರೆಸ್ ಪ್ರತಿಭಟನೆ*

February 28, 2026

*ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಿ : ಬಿಜೆಪಿ ಆಗ್ರಹ*

February 28, 2026

*ಕಾಂಗ್ರೆಸ್ ಸರಕಾರ ಬಡವರಿಗೆ ನಿವೇಶನ ಮತ್ತು ವಸತಿ ನೀಡದೆ ವಂಚಿಸಿದೆ : ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಎಐಟಿಯುಸಿ ಆರೋಪ*

February 28, 2026

*ನಾಪೋಕ್ಲು ಹಲ್ಲೆ ಪ್ರಕರಣ : ಕಠಿಣ ಕ್ರಮಕ್ಕೆ ಸಿಎನ್‌ಸಿ ಒತ್ತಾಯ*

February 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.