ಮಡಿಕೇರಿ, NEWS DESK ಮಾಚ್೯ 2 – ರೋಟರಿ ಜಿಲ್ಲೆ 3181 ನ ರೋಟರ್ಯಾಕ್ಟ್ ಕ್ಲಬ್ ಗಳ ಮುಂದಿನ ಸಾಲಿನ ಪ್ರತಿನಿಧಿಯಾಗಿ ಕೊಡಗಿನ ಶ್ರೀರಕ್ಷಾ ಪ್ರಬಾಕರ್ ಆಯ್ಕೆಯಾಗಿದ್ದಾರೆ.
ಮೈಸೂರಿನಲ್ಲಿ ನಡೆದ ರೋಟರ್ಯಾಕ್ಟ್ ನ 56 ಕ್ಲಬ್ ಗಳ ಪ್ರತಿನಿಧಿಯ ಚುನಾವಣೆಯಲ್ಲಿ ಶ್ರೀರಕ್ಷಾ ಅತ್ಯಧಿಕ ಮತ ಗಳಿಸಿ ಜಿಲ್ಲಾ ರೋಟರ್ಯಾಕ್ಟ್ನ 11 ನೇ ಪ್ರತಿನಿಧಿಯಾಗಿ ವಿಜಯಿಯಾದರು.

ಮೂಲತ ನಾಪೋಕ್ಲು ಗ್ರಾಮದ ಪತ್ರಕತ೯ ಪಿ.ವಿ. ಪ್ರಭಾಕರ್ – ಅಶ್ವಿನಿ ದಂಪತಿ ಪುತ್ರಿಯಾದ ಶ್ರೀರಕ್ಷಾ, ಮೂನಾ೯ಡುವಿನಲ್ಲಿ ಮಡಿಕೇರಿ ರೋಟರಿ ವುಡ್ಸ್ ಸಂಸ್ಥೆಯು 4 ವಷ೯ಗಳ ಹಿಂದೆ ಪ್ರಾರಂಭಿಸಿದ್ದ ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷೆಯಾಗಿ ಅನೇಕ ಸಾಮಾಜಿಕ ಸೇವಾ ಕಾಯ೯ಗಳ ಮೂಲಕ ಜಿಲ್ಲಾ ರೋಟರ್ಯಾಕ್ಟ್ ಪ್ರಶಸ್ತಿಯನ್ನೂ ಪಡೆದಿದ್ದರು.ಪ್ರಸ್ತುತ, ಮೈಸೂರಿನ ಕಾವೇರಿ ಸ್ಕೂಲ್ ನಲ್ಲಿ ಉಪನ್ಯಾಸಕಿಯಾಗಿರುವ ಶ್ರೀರಕ್ಷಾ ಪ್ರಭಾಕರ್, 2026-27 ನೇ ಸಾಲಿಗೆ 4 ಕಂದಾಯ ಜಿಲ್ಲೆಗಳಿಗೆ ಸೇರಿದ 56 ರೋಟರ್ಯಾಕ್ಟ್ ಕ್ಲಬ್ ಗಳ ಪ್ರತಿನಿಧಿಯಾಗಿ ಕಾಯ೯ನಿವ೯ಹಿಸಲಿದ್ದಾರೆ.
ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಿಂದ ಜಿಲ್ಲಾ ರೋಟರ್ಯಾಕ್ಟ್ ಗೆ ಪ್ರತಿನಿಧಿಯೋವ೯ರ ಆಯ್ಕೆಯಾದ ಹಿರಿಮೆಗೆ ಶ್ರೀರಕ್ಷಾ ಕಾರಣರಾಗಿದ್ದಾರೆ.. ರೋಟರಿ ಜಿಲ್ಲೆ 3181 ನ ಚುನಾಯಿತ ಗವನ೯ರ್ ಯಶಸ್ವಿ ಸೋಮಶೇಖರ್, ಮತ್ತು ರೋಟರ್ಯಾಕ್ಟ್ ಉಸ್ತುವಾರಿ ಎಲಿಜಬೆತ್ ಶಕುಂತಲ ಅವರು ಮೈಸೂರಿನಲ್ಲಿ ಶ್ರೀರಕ್ಷಾ ಅವರಿಗೆ ಶುಭಹಾರೈಸಿದರು.







