ಲೇಖಕ: Lakshmish S K

ಬೆಂಗಳೂರು, ಮಾರ್ಚ್ 5, 2026: ರಾಜಧಾನಿಯ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ತೀವ್ರವಾಗಿ ಕಾಡುತ್ತಿರುವ ನೀರಿನ ಬಿಕ್ಕಟ್ಟನ್ನು ನಿವಾರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ‘ಸಂಚಾರಿ ಕಾವೇರಿ ನೀರು’ ಕಾರ್ಯಕ್ರಮವನ್ನು ಮತ್ತಷ್ಟು ಬಲಪಡಿಸಿದೆ. ಆಗಸ್ಟ್ 2025 ರಲ್ಲಿ ಆರಂಭವಾದ ಈ ಯೋಜನೆಗೆ ಈಗ ಹೊಸದಾಗಿ 60 ಟ್ಯಾಂಕರ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. 110 ಹಳ್ಳಿಗಳೇ ಟಾರ್ಗೆಟ್ ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಬೇಸಿಗೆಯ ಅವಧಿಯಲ್ಲಿ ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿಯು, “ಈಗಾಗಲೇ ನಮ್ಮಲ್ಲಿ 60 ಟ್ಯಾಂಕರ್‌ಗಳಿದ್ದು, ಜನರ ಬೇಡಿಕೆ ಪೂರೈಸಲು ಹೆಚ್ಚುವರಿಯಾಗಿ ಇನ್ನೂ 60 ಟ್ಯಾಂಕರ್‌ಗಳನ್ನು ನಿಯೋಜಿಸಲಾಗುತ್ತಿದೆ” ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ವಿ ತಿಳಿಸಿದ್ದಾರೆ. ಯಾವ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚು? ಉತ್ತರ ಮತ್ತು ಪೂರ್ವ ವಲಯ: ಈ ಭಾಗಗಳಲ್ಲಿ ಪ್ರತಿ ವರ್ಷವೂ ನೀರಿನ ಹಾಹಾಕಾರ ಕಂಡುಬರುತ್ತಿದ್ದು, ಇಲ್ಲಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದಕ್ಷಿಣ ಮತ್ತು ಪಶ್ಚಿಮ ವಲಯ: ಇಲ್ಲಿ ಕಾವೇರಿ ನೀರಿನ…

Read More

ಮಡಿಕೇರಿ, ಮಾ.೫: ಪ್ರಶಾಂತ್ ಟಿ.ಆರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ‘ನನ್ನ ಸೈಕಲ್ ಸವಾರಿ’ ಕಿರುಚಿತ್ರದ ಚಿತ್ರೀಕರಣ ಆರಂಭವಾಗಿದೆ. ಚಿತ್ರದ ಮೊದಲ ದೃಶ್ಯಕ್ಕೆ ದಂತ ವೈದ್ಯೆ ಡಾ.ಅನುಶ್ರೀ ಕ್ಲಾಪ್ ಮಾಡಿ ಶುಭ ಕೋರಿದರು. ಜಯಶ್ರೀ ಅನಂತ ಶಯನ, ವಿನೋದ್ ಮೆಡಿಕಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಬೆಕಲ್ ಕುಶಾಲಪ್ಪ, ಸಂಜೀವ್, ಸುನೀತಾ, ಶ್ರುತಿ, ದಿವ್ಯಾ ಮುಂತಾದವರು ಈ ಸಂದರ್ಭ ಹಾಜರಿದ್ದರು. ಸೈಕ್ಲಿಂಗ್‌ನಲ್ಲಿ ಸಾಧನೆ ಮಾಡಿದ ಯುವತಿಯ ಯಶೋಗಾಥೆಯನ್ನೊಳಗೊಂಡ ಈ ಕಿರುಚಿತ್ರದಲ್ಲಿ ಹಿರಿಯ ಕಲಾವಿದ ಬಿ.ಜಿ.ಅನಂತಶಯನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲಾರಂಡ ವಿಠಲ್ ನಂಜಪ್ಪ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಶ್ರುತಿ ಶಿಕ್ಷಕಿಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಎಂ.ಎಫ್.ರಫಾಖಾನ್, ಬಾಲ ನಟರಾದ ಆರಾಧ್ಯಾ, ಚೆಸ್ವಿ, ಅಭಿಷ್ಯಂತ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ. ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗುತ್ತಿದ್ದು, ಕಿರುಚಿತ್ರದ ಕ್ಲೆöÊಮ್ಯಾಕ್ಸ್ ಚಿತ್ರೀಕರಣ ಅಮೇರಿಕಾದ ಒಹಿಯೋ ನಗರದಲ್ಲಿ ನಡೆಯಲಿದೆ. ಖ್ಯಾತ ನಿರ್ದೇಶಕ ಕೆ.ಶಿವರುದ್ರಯ್ಯ ಸಂಭಾಷಣೆ ಬರೆದಿದ್ದು, ಎಂ.ಆರ್.ಫಿರೋಜ್‌ಖಾನ್ ಸುಂಟಿಕೊಪ್ಪ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ರಾಧಿಕಾ ವಿಶ್ವನಾಥ್ ಸಾಹಿತ್ಯ…

Read More

ಮಡಿಕೇರಿ NEWS DESK ಮಾ.5 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ  2026-27ನೇ ಸಾಲಿನ ಬಜೆಟ್ ಕೊಡಗಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಬೇಕು ಮತ್ತು ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಿಂದ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರೂ ಮುಖ್ಯಮಂತ್ರಿಗಳು ಹಿಂದಿನ ಬಜೆಟ್ ಗಳಲ್ಲಿ ಕೊಡಗಿಗೆ ಹೇಳಿಕೊಳ್ಳುವಂತಹ ಯಾವುದೇ ಯೋಜನೆ ಅಥವಾ ವಿಶೇಷ ಅನುದಾನವನ್ನು ನೀಡಿರಲಿಲ್ಲ. ಈ ಬಾರಿಯಾದರೂ ಇಬ್ಬರು ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಕೊಡಗಿಗೆ ಅಗತ್ಯವಿರುವ ಯೋಜನೆಗಳನ್ನು ಮಂಡಿಸುವoತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಅಂದಿನ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಪಿ.ಸುನಿಲ್ ಸುಬ್ರಮಣಿ ಹಾಗೂ ಎಂ.ಪಿ.ಸುಜಾ ಕುಶಾಲಪ್ಪ ಅವರುಗಳು ಅಂದು ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮೆಡಿಕಲ್ ಕಾಲೇಜು, ಅಸ್ಟ್ರೋ…

Read More

ಕುಶಾಲನಗರ ಟಿಬೆಟಿಯನ್ ನೂತನ ವರ್ಷದ ಆಚರಣೆ ಅಂಗವಾಗಿ ಸಮೀಪದ ಬೈಲುಕೊಪ್ಪೆ ನಿರಾಶ್ರಿತ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಎಂಬ ಖ್ಯಾತಿ ಪಡೆದಿರುವ ಬುದ್ಧ ಅಮಿತಾಯುಶ್ ಪರದೆಯನ್ನು ಪ್ರದರ್ಶನ ಮಾಡಲಾಯಿತು. ಗೋಲ್ಡನ್ ಟೆಂಪಲ್ ಆವರಣದಲ್ಲಿ ಏಳು ಮಹಡಿಗಳ ಕಟ್ಟಡದ ಮೇಲೆ ಅಳವಡಿಸಿರುವ ಬೃಹತ್ ಕಬ್ಬಿಣದ ಗೋಪುರದಲ್ಲಿ 200 ಅಡಿ ಎತ್ತರ 180 ಅಡಿ ಅಗಲ ವಿಸ್ತೀರ್ಣ ಉಳ್ಳ ಚಿತ್ರ ಪರದೆಯನ್ನು ಕೇವಲ ಅರ್ಧ ಗಂಟೆಗಳ ಕಾಲ ಪ್ರದರ್ಶನಕ್ಕೆ ಇಡಲಾಯಿತು. ಟಿಬೆಟಿಯನ್ ಧರ್ಮ ಗುರುಗಳು ಬೌದ್ಧ ಭಿಕ್ಷುಗಳು ನಾಗರಿಕರು ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಚಿತ್ರ ಪರದೆ ವೀಕ್ಷಣೆ ಜೊತೆಗೆ ಪೂಜೆ ಸಲ್ಲಿಸಿ ಪುನೀತರಾದರು. ನೂತನ ವರ್ಷ ಆಚರಣೆಯ ಸಂದರ್ಭ ಗೋಲ್ಡನ್ ಟೆಂಪಲ್ ನಲ್ಲಿ ಇರಿಸಿರುವ ಎರಡು ಬೃಹತ್ ಪರದೆಗಳನ್ನು ಒಂದು ತಿಂಗಳ ಕಾಲದ ಆಚರಣೆ ಅವಧಿಯಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಬುದ್ಧ ಪದ್ಮ ಸಂಭವ ಚಿತ್ರ ಪರದೆಯನ್ನು 15 ದಿನಗಳ ಹಿಂದೆ ಪ್ರದರ್ಶನಕ್ಕೆ ಇಡಲಾಗಿತ್ತು.…

Read More

ವಿರಾಜಪೇಟೆ, NEWS DESK ಮಾ:೦೪: ವಿದ್ಯಾರ್ಥಿ ಜೀವನವು ಹಲವು ಒತ್ತಡಗಳಿಂದ ನಿರ್ಮಾಣವಾಗುತ್ತಿದೆ ಎನ್ನುವುದು ಸುಳ್ಳು.ಕಲಿಕೆ ಮತ್ತು ಸಾಮಾಜಿಕ ಚಿಂತನೆಯನ್ನು ಸಮಾನವಾಗಿ ಕಾಣುವಂತಾಗಬೇಕು ಎಂದು ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ ಅಭಿಮತ ವ್ಯಕ್ತಪಡಿಸಿದರು. ಕೊಡಗು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಸೈಂಟ್ ಆ್ಯನ್ಸ್ ಪದವಿ ಕಾಲೇಜು ವಿರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ಕಲ್ತೋಡು ನಾಂಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಾರ್ಷಿಕ ವಿಶೇಷ ಶಿಭಿರ ೨೦೨೫-೨೬ ಗೆ ಚಾಲನೆ ನೀಡಲಾಯಿತು.ದೀಪ ಬೆಳಗಿಸಿ ಶಿಭಿರ ಉದ್ಘಾಟಿಸಿ ಮಾತನಾಡಿದ ಪೂಜಾ ಸಜೇಶ್ ಅವರು ಕಲಿಕೆಯೊಂದಿಗೆ ಸಮಾಜದ ಆಗು ಹೋಗುಗಳಿಗೆ ಪ್ರತಿಸ್ಪಂದಿಸುವ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಒತ್ತಡದಲ್ಲಿದೆ ಎಂದು ಹೇಳುವುದು ಸುಳ್ಳು. ಒತ್ತಡಗಳನ್ನು ನಾವು ಸೃಷ್ಟಿ ಮಾಡಿಕೊಳ್ಳುವುದು. ನಿರ್ದಿಷ್ಟವಾದ ಗುರಿ ಹೊಂದಿದಲ್ಲಿ ಒತ್ತಡದ ಗೊಂದಲದಿಂದ ಹೊರಬರಲು ಸಾಧ್ಯ. ಸಾಮಾಜಿಕ ಕಳಕಳಿಯೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಹೊಂದುವುದು ಮುಖ್ಯ. ಶಿಬಿರದ ಮೂಲಕ ಉತ್ತಮ ರಾಷ್ಟ್ರ ಸಮಾಜದ ನಿರ್ಮಾಣದ ಗುರಿ ನಿಮದಾಗಲಿ…

Read More

ಮಡಿಕೇರಿ, NEWS DESK ಮಾ.04:-ತಾಲ್ಲೂಕಿನ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಗಾಂಧಿಭವನದಲ್ಲಿ ಬುಧವಾರ ನಡೆದ ವಿಶೇಷ ಕಾರ್ಯಾಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ, ಶಾಲಾ-ಕಾಲೇಜು, ಅಂಗನವಾಡಿ, ಆರೋಗ್ಯ ಕೇಂದ್ರಗಳು, ವಿದ್ಯಾರ್ಥಿ ನಿಲಯಗಳು ಸೇರಿದಂತೆ ಎಲ್ಲೆಡೆ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರನ್ನು ಎಂದಿನಂತೆ ಸಮರ್ಪಕವಾಗಿ ಪೂರೈಸಬೇಕು ಎಂದು ಶಾಸಕರು ಸೂಚಿಸಿದರು. ಕುಡಿಯುವ ನೀರಿನ ಪೂರೈಕೆಯ ಸಂದರ್ಭ ವಿದ್ಯುತ್ ಕಡಿತಗೊಳಿಸಬಾರದು, ಸಾರ್ವಜನಿಕರು ಕುಡಿಯುವ ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ನಗರಸಭೆಯಿಂದ ಆಗಾಗೆ ಸೂಚನೆ ನೀಡಬೇಕು ಎಂದರು. ಜಲಜೀವನ್ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಶಾಸಕರು ಅಧಿಕಾರಿಗಳಿಗೆ ಡಾ.ಮಂತರ್ ಗೌಡ ಅವರು ನಿರ್ದೇಶನ ನೀಡಿದರು. ಬೇಸಿಗೆಯಲ್ಲಿ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ವತಿಯಿಂದ ಎಚ್ಚರವಹಿಸಬೇಕು. ಜತೆಗೆ ಜಾಗೃತಿ ಮೂಡಿಸಬೇಕು. ಶಾಲೆ,…

Read More

ಮಡಿಕೇರಿ, NEWS DESK ಮಾ.4:-ನಗರದ ಪತ್ರಿಕಾ ಭವನದಿಂದ ಜಿಲ್ಲಾ ಕೈಗಾರಿಕಾ ಕಚೇರಿ ವರೆಗಿನ ರಸ್ತೆಗೆ ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾದ ಗೋಪಾಲಕೃಷ್ಣ ಅವರ ಹೆಸರನ್ನು ಬುಧವಾರ ಇಡಲಾಯಿತು. ಈ ಸಂಬಂಧ ಗೋಪಾಲಕೃಷ್ಣ ಅವರ ಹೆಸರಿನ ನಾಮಫಲಕವನ್ನು ಶಾಸಕರಾದ ಡಾ.ಮಂತರ್ ಗೌಡ ಅವರು ಬುಧವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾದ ಗೋಪಾಲಕೃಷ್ಣ ಅವರು ಕೊಡಗು ಪತ್ರಿಕೋದ್ಯಮದ ಭೀಷ್ಮರಾಗಿದ್ದಾರೆ. ಶಕ್ತಿ ದಿನಪತ್ರಿಕೆಯನ್ನು ಆರಂಭಿಸುವ ಮೂಲಕ ಇಂದಿಗೂ ಸಹ ಕೊಡಗು ಜಿಲ್ಲೆಯಲ್ಲಿ ಶಕ್ತಿ ದಿನಪತ್ರಿಕೆ ಶಕ್ತಿಯಾಗಿ ಉಳಿದಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದೆ ಪತ್ರಿಕೆಯನ್ನು ಹೊರತರುವುದು ಕಷ್ಟಸಾಧ್ಯವಾಗಿತ್ತು. ಅಚ್ಚು ಮೊಳೆಯ ಮೂಲಕ ಪತ್ರಿಕೆಯನ್ನು ಮುದ್ರಣ ಮಾಡುತ್ತಿದ್ದರು. ಅಂದಿನ ಕಷ್ಟದ ಸಂದರ್ಭದಲ್ಲಿಯೂ ಪತ್ರಿಕೆಯನ್ನು ನಡೆಸಿ ಇಂದಿಗೂ ಸಹ ಕೊಡಗು ಜಿಲ್ಲೆಯಲ್ಲಿ ತಮ್ಮದೇ ಆದ ಸ್ಥಾನ ಉಳಿಸಿಕೊಂಡು ಜನಮನ್ನಣೆ ಗಳಿಸುವುದು ಮೆಚ್ಚುವಂತದ್ದು ಎಂದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ ಅವರು ಮಾತನಾಡಿ ಕೊಡಗು ಪತ್ರಿಕಾ ರಂಗದಲ್ಲಿ ಶಕ್ತಿ…

Read More

ಬೆಂಗಳೂರು, ಮಾರ್ಚ್ 04, 2026: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಿಹಿಸುದ್ದಿ ನೀಡಿದೆ. ತಾಂತ್ರಿಕ ಕಾರಣ ಅಥವಾ ಇತರ ಸಮಸ್ಯೆಗಳಿಂದ ಶುಲ್ಕ ಪಾವತಿಸಲು ಬಾಕಿ ಇರುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಕೊನೆಯ ದಿನಾಂಕವನ್ನು ಮಾರ್ಚ್ 7ರವರೆಗೆ ವಿಸ್ತರಿಸಲಾಗಿದೆ. ಶುಲ್ಕ ಪಾವತಿ ವಿವರ: ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ನೀಡಿರುವ ಮಾಹಿತಿಯಂತೆ: ಇದುವರೆಗೆ ಒಟ್ಟು 3.47 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 3.36 ಲಕ್ಷ ಮಂದಿ ಈಗಾಗಲೇ ಶುಲ್ಕ ಪಾವತಿಸಿದ್ದು, ಇನ್ನೂ ಸುಮಾರು 9 ಸಾವಿರ ಮಂದಿ ಬಾಕಿ ಉಳಿದಿದ್ದಾರೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಮಾರ್ಚ್ 7ರವರೆಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ನೇಮಕಾತಿ ಪರೀಕ್ಷೆಗಳ ಅಂಕಪಟ್ಟಿ ಮತ್ತು ಕೀ ಉತ್ತರ: ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಫೆಬ್ರವರಿ 21 ಮತ್ತು 22ರಂದು ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಅಂತಿಮ ಕೀ ಉತ್ತರ ಹಾಗೂ ಅಭ್ಯರ್ಥಿಗಳು ಗಳಿಸಿದ ಅಂಕಗಳ…

Read More

ಬೆಂಗಳೂರು/ಮುಂಬೈ: ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ (Toxic) ಬಿಡುಗಡೆ ದಿನಾಂಕದಲ್ಲಿ ಮಹತ್ತರ ಬದಲಾವಣೆಯಾಗಿದೆ. ಮಾರ್ಚ್ 19ರಂದು ತೆರೆಗೆ ಬರಬೇಕಿದ್ದ ಈ ಸಿನಿಮಾ ಈಗ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. ಈ ಒಂದು ನಿರ್ಧಾರವು ಬಾಲಿವುಡ್ ನಟ ವರುಣ್ ಧವನ್ ಅವರ ಸಿನಿಮಾದ ಮೇಲೆ ನೇರ ಪರಿಣಾಮ ಬೀರಿದ್ದು, ಹಿಂದಿ ಚಿತ್ರರಂಗದಲ್ಲಿ ಆತಂಕ ಮನೆಮಾಡಿದೆ. ಕ್ಲ್ಯಾಶ್ ತಪ್ಪಿಸಲು ಹೋಗಿ ಮತ್ತೊಂದು ಪೈಪೋಟಿ! ಮೊದಲ ಯೋಜನೆಯಂತೆ ‘ಟಾಕ್ಸಿಕ್’ ಸಿನಿಮಾವು ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಚಿತ್ರದೊಂದಿಗೆ ಈದ್ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಆ ಪೈಪೋಟಿಯಿಂದ ಹಿಂದೆ ಸರಿದಿರುವ ಚಿತ್ರತಂಡ ಈಗ ಜೂನ್ 4 ಅನ್ನು ಹೊಸ ಬಿಡುಗಡೆ ದಿನಾಂಕವಾಗಿ ಆಯ್ದುಕೊಂಡಿದೆ. ವಿಶೇಷವೆಂದರೆ, ಇದಾದ ಸರಿಯಾಗಿ ಒಂದು ದಿನದ ನಂತರ ಅಂದರೆ ಜೂನ್ 5ರಂದು ವರುಣ್ ಧವನ್ ನಟನೆಯ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಬಿಡುಗಡೆಗೆ ಸಜ್ಜಾಗಿದೆ. ವರುಣ್ ಧವನ್ ಚಿತ್ರಕ್ಕೆ ಸಂಕಷ್ಟವೇಕೆ? ಯಶ್ ಹವಾ:…

Read More

ಚಿತ್ತೂರು/ಬೆಂಗಳೂರು: ದೈವದರ್ಶನಕ್ಕಾಗಿ ಶುಭ ಮುಹೂರ್ತದಲ್ಲಿ ಹೊರಟಿದ್ದ ಕುಟುಂಬವೊಂದು ರಸ್ತೆ ಅಪಘಾತದಲ್ಲಿ ಮಣ್ಣು ಪಾಲಾಗಿರುವ ದಾರುಣ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಬಳಿ ನಡೆದಿದೆ. ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ರಾಜಾಜಿನಗರದ ಐವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಘಟನೆಯ ವಿವರ: ಬೆಂಗಳೂರಿನ ರಾಜಾಜಿನಗರದ ನಿವಾಸಿಗಳಾದ ಮೋಹನ್‌ದಾಸ್ (71), ನಾಗರಾಜ್ (61), ಕುಸುಮಾ (61), ಜಯಂತಿ (59) ಮತ್ತು ಪೂಜಾ (33) ಮೃತಪಟ್ಟ ದುರ್ದೈವಿಗಳು. ಇವರೆಲ್ಲರೂ ತಮ್ಮ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬೆಂಗಳೂರಿನಿಂದ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆಂದು ತೆರಳುತ್ತಿದ್ದರು. ಮಾರ್ಗಮಧ್ಯೆ ಪಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಗೆ ಇವರ ಕಾರು ಅತಿ ವೇಗವಾಗಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಚಾಲಕನ ನಿದ್ರೆ ಮತ್ತು ಅತಿವೇಗವೇ ಮುಳುವಾಯ್ತು: ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಐವರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಕಾರಿನ ಒಳಗೆ ಶವಗಳು ಸಿಲುಕಿಕೊಂಡಿದ್ದರಿಂದ ಪೊಲೀಸರು ಮತ್ತು ಸ್ಥಳೀಯರು ಅವುಗಳನ್ನು ಹೊರತೆಗೆಯಲು ಸಾಕಷ್ಟು ಹರಸಾಹಸ ಪಡಬೇಕಾಯಿತು.…

Read More