Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಮೇಳ : ಯಶಸ್ಸಿಗೆ  ಪ್ರಾಂಶುಪಾಲರ ಮನವಿ*
  • *ಸುಂಟಿಕೊಪ್ಪದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ರಾಮನವಮಿ*
  • *ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ*
  • *ರೋಟರಿ ಮಡಿಕೇರಿಯಿಂದ ದಹನ ಯಂತ್ರ ವಿತರಣೆ*
  • *ರೋಟರಿ ಮಡಿಕೇರಿಯಿಂದ ವೃತ್ತಿಪರ ಕೌಶಲ್ಯ ಶಿಬಿರ : ವಿದ್ಯಾರ್ಥಿಗಳಿಗೆ ಟೈಲರಿಂಗ್ ತರಬೇತಿ*
  • *ನಾಪೋಕ್ಲು ಸುತ್ತಮುತ್ತ ಮದ್ಯ ಮಾರಾಟ ನಿಷೇಧ*
  • *ಸಾಕಾನೆ-ಡ್ರೋನ್ ಬಳಸಿ ಹುಲಿ ಶೋಧ*
  • *ಸೋಮವಾರಪೇಟೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧ*
  • ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ಡಾ. ಎಂ.ಬಿ.ಬೋರಲಿಂಗಯ್ಯ ಅವರು ಭೇಟಿ : ಅಧಿಕಾರಿಗಳೊಂದಿಗೆ ಸಮಾಲೋಚನೆ*
  • *ಮಡಿಕೇರಿ : ಮಾ.27 ರಂದು ನಗರಸಭೆ ಕೌನ್ಸಿಲ್‍ನ ಸಾಮಾನ್ಯ ಸಭೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*‘ಮುಕ್ಕಾಟಿರ ಕ್ರಿಕೆಟ್ ನಮ್ಮೆ’ಯ ವೆಬ್ ಸೈಟ್ ಬಿಡುಗಡೆ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆ ಉದ್ಘಾಟನೆ : ಅಮೋಘ ಕ್ರೀಡಾಸ್ಫೂರ್ತಿ ಕೊಡಗು ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯ : ಡಾ.ಮಂಡೇಪಂಡ ಪುಷ್ಪ ಕುಟ್ಟಣ್ಣ ಅಭಿಪ್ರಾಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*‘ಮುಕ್ಕಾಟಿರ ಕ್ರಿಕೆಟ್ ನಮ್ಮೆ’ಯ ವೆಬ್ ಸೈಟ್ ಬಿಡುಗಡೆ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆ ಉದ್ಘಾಟನೆ : ಅಮೋಘ ಕ್ರೀಡಾಸ್ಫೂರ್ತಿ ಕೊಡಗು ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯ : ಡಾ.ಮಂಡೇಪಂಡ ಪುಷ್ಪ ಕುಟ್ಟಣ್ಣ ಅಭಿಪ್ರಾಯ*

ಮಾರ್ಚ್ 3, 20262 Mins ReadBy Lakshmish S K
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಮಾ.3 : ಸ್ತ್ರೀ-ಪುರುಷ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಂದು ತಂಡವಾಗಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದನ್ನು ಮತ್ತು ಅಮೋಘವಾದ ಕ್ರೀಡಾಸ್ಫೂರ್ತಿಯನ್ನು ಕೇವಲ ಕೊಡಗು ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯವೆಂದು ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಕ್ರೀಡಾಪಟು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ನಿವೃತ್ತ ಪ್ರಾಂಶುಪಾಲರಾದ ಡಾ.ಮಂಡೇಪಂಡ ಪುಷ್ಪ ಕುಟ್ಟಣ್ಣ ಅಭಿಪ್ರಾಯಪಟ್ಟಿದ್ದಾರೆ. ಮೂರ್ನಾಡು ಕೊಡವ ಸಮಾಜದಲ್ಲಿ ನಡೆದ ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಕೊಡವ ಕುಟುಂಬಗಳ ನಡುವೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮೂರ್ನಾಡು ಹಾಗೂ ಅರಮೇರಿಯಲ್ಲಿ ನಡೆಸಲಿರುವ 24ನೇ ವರ್ಷದ ‘ಮುಕ್ಕಾಟಿರ ಕ್ರಿಕೆಟ್ ನಮ್ಮೆ-2026’ರ ವೆಬ್ ಸೈಟ್ ಬಿಡುಗಡೆ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಶಿಷ್ಟ ಮತ್ತು ಹೊಂದಾಣಿಕೆಯ ಕ್ರೀಡಾಕೂಟಗಳು ಕೊಡಗು ಹೊರತು ಪಡಿಸಿದರೆ ದೇಶದ ಬೇರೆ ಯಾವ ಭಾಗದಲ್ಲಿಯೂ ಕಾಣಲು ಸಾಧ್ಯವಿಲ್ಲ. ದೇಶ ಸೇರಿದಂತೆ ಪ್ರಪಂಚದ ಎಲ್ಲಾ ಕಡೆಗಳಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಮಹಿಳೆಯರು ಹಾಗೂ ಪುರುಷರ ಪ್ರತ್ಯೇಕ ತಂಡಗಳಿರುತ್ತವೆ. ಒಂದಾಗಿ ಪಾಲ್ಗೊಳ್ಳಲು ಯಾವುದೇ ಕ್ರೀಡೆಯಲ್ಲಿಯೂ ಅವಕಾಶ ಇರುವುದಿಲ್ಲ. ಆದರೆ ಕೊಡಗಿನಲ್ಲಿ ಆಯೋಜಿಸುವ ಹಾಕಿ, ಕ್ರಿಕೆಟ್ ಸೇರಿದಂತೆ ಇತರ ಕ್ರೀಡಾಕೂಟಗಳಲ್ಲಿ ಒಂದು ತಂಡವಾಗಿ ಪುರುಷರು ಹಾಗೂ ಮಹಿಳೆಯರು ಜೊತೆಯಾಗಿ ಪಾಲ್ಗೊಳ್ಳುತ್ತಾರೆ. ಇದು ಹೆಮ್ಮೆಯ ಬೆಳವಣಿಗೆ ಎಂದು ತಿಳಿಸಿದರು. ಕೆಲವು ಸಮಯದ ಹಿಂದೆ ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿದ್ದರು. ಇದೀಗ ಕ್ರಿಕೆಟ್ ನಮ್ಮೆಯ ಆತಿಥ್ಯ ವಹಿಸಿರುವುದು ಕುಟುಂಬದ ಸಂಘಟನಾ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಕ್ರೀಡಾಕೂಟಗಳ ಆಯೋಜನೆ ಅಷ್ಟು ಸುಲಭ ಸಾಧ್ಯವಲ್ಲ. ಅದರ ಹಿಂದೆ ಸಾಕಷ್ಟು ಪರಿಶ್ರಮ ಮತ್ತು ಒಗ್ಗಟ್ಟು ಇರುತ್ತದೆ ಎಂದು ಹೇಳಿದರು. ಶೈಕ್ಷಣಿಕ ಸಂಸ್ಥೆಗಳು, ಕ್ರೀಡಾಶಾಲೆಗಳು ಇಲ್ಲದ ಕಾಲಘಟ್ಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೇರಿರುವುದು ಒಂದು ದೊಡ್ಡ ಸಾಧನೆಯೇ ಸರಿ. ಕ್ರೀಡಾಕೂಟಗಳನ್ನು ಆಯೋಜನೆ ಮಾಡುವ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ಉತ್ತಮ ಕಾರ್ಯವಾಗಿದೆ ಎಂದು ಡಾ.ಪುಷ್ಪಾ ಕುಟ್ಟಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.*ನೆರವು ಅಗತ್ಯ* ಅಂತರಾಷ್ಟ್ರೀಯ ರೆಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಕ್ರೀಡಾಕೂಟಗಳ ಆಯೋಜನೆ ಸಂದರ್ಭ ಹಣಕಾಸಿನ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಕೊಡವ ಕುಟುಂಬಗಳ ಹಲವು ಮಂದಿ ಇಂದು ಹೊರ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡಿದ್ದಾರೆ. ಪಂದ್ಯಾವಳಿ ಆಯೋಜಿಸುವ ಕುಟುಂಬಕ್ಕೆ ಕೊಡವ ಉದ್ಯಮಿಗಳು ಆರ್ಥಿಕ ನೆರವು ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.ಫುಟ್ಬಾಲ್ ಪಂದ್ಯಾವಳಿಯ ಬಳಿಕ ಇದೀಗ ಕ್ರಿಕೆಟ್ ಕ್ರೀಡಾಕೂಟ ಆಯೋಜನೆ ಮಾಡುತ್ತಿರುವುದು ಬೇತ್ರಿ ಮುಕ್ಕಾಟಿರ ಕುಟುಂಬದ ಒಗ್ಗಟ್ಟಿನ ಪ್ರತೀಕ ಎಂದು ಶ್ಲಾಘಿಸಿದರು. ಪೋಷಕರು ತಮ್ಮ ಮಕ್ಕಳ ಕ್ರೀಡಾ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಉತ್ತಮ ಕ್ರೀಡಾಪಟು ರೂಪುಗೊಳ್ಳಲು ಸಾಧ್ಯವಾಗುತ್ತದೆ. ಕಳೆದ ಅನೇಕ ವರ್ಷಗಳಿಂದ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯನ್ನು ಕೂಡ ಆಯೋಜಿಸಿಕೊಂಡು ಬರುತ್ತಿರುವುದು ದೊಡ್ಡ ಸಾಧನೆಯಾಗಿದೆ. ಎಲ್ಲಾ ಕೊಡವ ಕುಟುಂಬಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಳ್ಳಬೇಕು. ಸೋಲು, ಗೆಲುವಿನ ಲೆಕ್ಕಾಚಾರ ಇಲ್ಲದೆಯೇ ಕ್ರೀಡೆಯಲ್ಲಿ ಒಂದಾಗಬೇಕು ಎಂದು ಮಾದಂಡ ತಿಮ್ಮಯ್ಯ ಕರೆ ನೀಡಿದರು. ಕ್ರಿಕೆಟ್ ಪಂದ್ಯಾಟದ ವೆಬ್ ಸೈಟ್ ಬಿಡುಗಡೆ ಮಾಡುತ್ತಿರುವುದು ಜಿಲ್ಲೆಯ ಮಟ್ಟಿಗೆ ಹೊಸ ವಿಚಾರ ಎಂದು ಅಭಿಪ್ರಾಯಪಟ್ಟರು.ವೆಬ್ ಸೈಟ್ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆಗಳ ಕುರಿತು ಅಜ್ಜೇಟಿರ ವಿಕ್ರಮ್ ಉತ್ತಪ್ಪ ಅವರು ವಿವರಿಸಿದರು. ಇದೇ ಸಂದರ್ಭ ಕ್ರಿಕೆಟ್ ನಮ್ಮೆಯ ಕುರಿತು ಮುಕ್ಕಾಟಿರ ಮೌನಿ ಅವರು ಬರೆದಿರುವ ಸಣ್ಣುವಂಡ ನಿಶ್ಮಾ ಅವರ ಕಂಠದಲ್ಲಿ ಮೂಡಿ ಬಂದಿರುವ ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಲಾಯಿತು.  ಮುಕ್ಕಾಟಿರ ರವಿ ಚೀಯಣ್ಣ ಸ್ವಾಗತಿಸಿ, ಕ್ರಿಕೆಟ್ ಪಂದ್ಯಾವಳಿಗೆ ಎಲ್ಲರ ಬೆಂಬಲ ಕೋರಿದರು. ಮುಕ್ಕಾಟಿರ ಸರಸು ನವೀನ್ ಪ್ರಾರ್ಥಿಸಿ, ಮೂಕಚಂಡ ಬೊಳ್ಳಮ್ಮ ಕಾರ್ಯಕ್ರಮ ನಿರೂಪಿಸಿದರು. ಮುಕ್ಕಾಟಿರ ಕ್ರಿಕೆಟ್ ನಮ್ಮೆಯ ಅಧ್ಯಕ್ಷ ಸುರೇಶ್ ಪೆಮ್ಮಯ್ಯ, ಪಂದ್ಯಾವಳಿಯ ಕಾರ್ಯದರ್ಶಿ ಮುಕ್ಕಾಟಿರ ಪೊನ್ನಣ್ಣ, ಖಜಾಂಚಿ ಮುಕ್ಕಾಟಿರ ಗಣಪತಿ, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಎನ್.ಕಾರ್ಸನ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಕುಂಡ್ರಂಡ ಎಂ.ಬೋಪಣ್ಣ, ಕಾಂತಮೂರ್ನಾಡು ನಾಡು ತಕ್ಕರಾದ ಪಳಂಗಂಡ ಮೇದಪ್ಪ, ಕೋಟೇರ ಮುತ್ತಣ್ಣ, ಮಡೆಯಂಡ ಚಂಗಪ್ಪ, ಕೊಡವ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರುಗಳು ಸೇರಿದಂತೆ ತಕ್ಕರು, ತಾಮನೆ ಪೊಮ್ಮಕ್ಕರು, ಮುಕ್ಕಾಟಿರ ಹಾಗೂ ವಿವಿಧ ಕೊಡವ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಮೇಳ : ಯಶಸ್ಸಿಗೆ  ಪ್ರಾಂಶುಪಾಲರ ಮನವಿ*

ಮಾರ್ಚ್ 26, 2026

*ಸುಂಟಿಕೊಪ್ಪದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ರಾಮನವಮಿ*

ಮಾರ್ಚ್ 26, 2026

*ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ*

ಮಾರ್ಚ್ 26, 2026

*ಸುಂಟಿಕೊಪ್ಪದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ರಾಮನವಮಿ*

ಮಾರ್ಚ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ ಮಾ.25 NEWS DESK : ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಕೋದಂಡರಾಮ ದೇವಾಲಯದಲ್ಲಿ…

*ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ*

ಮಾರ್ಚ್ 26, 2026

*ರೋಟರಿ ಮಡಿಕೇರಿಯಿಂದ ದಹನ ಯಂತ್ರ ವಿತರಣೆ*

ಮಾರ್ಚ್ 26, 2026

*ರೋಟರಿ ಮಡಿಕೇರಿಯಿಂದ ವೃತ್ತಿಪರ ಕೌಶಲ್ಯ ಶಿಬಿರ : ವಿದ್ಯಾರ್ಥಿಗಳಿಗೆ ಟೈಲರಿಂಗ್ ತರಬೇತಿ*

ಮಾರ್ಚ್ 26, 2026

*ನಾಪೋಕ್ಲು ಸುತ್ತಮುತ್ತ ಮದ್ಯ ಮಾರಾಟ ನಿಷೇಧ*

ಮಾರ್ಚ್ 26, 2026

*ಸಾಕಾನೆ-ಡ್ರೋನ್ ಬಳಸಿ ಹುಲಿ ಶೋಧ*

ಮಾರ್ಚ್ 26, 2026

*ಸೋಮವಾರಪೇಟೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧ*

ಮಾರ್ಚ್ 26, 2026

ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ಡಾ. ಎಂ.ಬಿ.ಬೋರಲಿಂಗಯ್ಯ ಅವರು ಭೇಟಿ : ಅಧಿಕಾರಿಗಳೊಂದಿಗೆ ಸಮಾಲೋಚನೆ*

ಮಾರ್ಚ್ 25, 2026

*ಮಡಿಕೇರಿ : ಮಾ.27 ರಂದು ನಗರಸಭೆ ಕೌನ್ಸಿಲ್‍ನ ಸಾಮಾನ್ಯ ಸಭೆ*

ಮಾರ್ಚ್ 25, 2026

*ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ*

ಮಾರ್ಚ್ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.