ಕುಶಾಲನಗರ, NEWS DESK ಮಾ.09: ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕವಾದ ಕದಳಿ ಘಟಕದ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಕುಶಾಲನಗರದ ಸರೋಜಾ ಆರಾಧ್ಯ ಅವರನ್ನು ಕದಳಿ ರಾಜ್ಯ ಸಂಚಾಲಕರಾದ ಸುಶೀಲಾ ಸೋಮಶೇಖರ್ ನೇಮಕ ಗೊಳಿಸಿದ್ದಾರೆ.
ಹಾಗೆಯೇ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಯುವ ಘಟಕಗಳನ್ನು ರಚನೆ ಮಾಡಲು ಅವರು ಸೂಚಿಸಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.








