
ಮಡಿಕೇರಿ ಮಾ.9 NEWS DESK : ಪಂಜರಪೇಟೆಯ ಕೊಡವ ಕೇರಿಯ ವತಿಯಿಂದ ಹೆಗ್ಗಳ ಗ್ರಾಮದ ವೃದ್ಧಾಶ್ರಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಅನಾಥಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಆರೋಗ್ಯ ವಿಚಾರಿಸಲಾಯಿತು. ಸುಮಾರು 42 ವಾಸಿಗಳಿಗೆ ಕೇರಿಯ ವತಿಯಿಂದ ಮೊಟ್ಟೆ, ಪರೋಟ, ಪಪ್ಸ್, ಕಲ್ಲಂಗಡಿ, ಬ್ರಷ್, ಬಟ್ಟೆ, ಸಾಬೂನು, ಪೇಸ್ಟ್, ಟವಲ್, ಬಿಸ್ಕೆಟ್ಸ್, ಸೊಳ್ಳೆ ಬತ್ತಿ, ಜ್ಯೂಸ್ ಸೇರಿದಂತೆ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು. ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದವು. ಕೇರಿಯ ಪರವಾಗಿ ಅಧ್ಯಕ್ಷರಾದ ವಾಂಚೀರ ನಾಣಯ್ಯ, ಸದಸ್ಯರಾದ ಡಿ.ಸಿ.ಧ್ರುವಕುಮಾರ್, ಚರ್ಮನ್, ಸುರೇಶ್, ಪರದಂಡ ವಿಠಲ, ಅಶ್ವಿನಿ, ನವಿತಾ, ಧ್ರುವ, ದೇಶ್ ಹಾಜರಿದ್ದರು.









