
ಗೋಣಿಕೊಪ್ಪ ಮಾ.13 NEWS DESK : ಗೋಣಿಕೊಪ್ಪ ಸೀನಿಯರ್ ಚೇಂಬರ್ “ಇಂಟರ್‌ನ್ಯಾಷನಲ್” ಸಂಸ್ಥೆ ಪ್ರಸ್ತುತ ವಿವಿಧ ಸಾಧನೆಗಳಿಗೆ ಆರು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದೆ. ಬಿ.ಎನ್.ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿನ ತಂಡ ಕಳೆದ ಒಂದು ವರ್ಷ ಮಾಡಿದ ಸಾಮಾಜಿಕ ಚಟುವಟಿಕೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ಬೆಂಗಳೂರಿನ ಅತ್ತಿಗುಪ್ಪೆ ಬಂಟರ ಸಂಘದ ಸಭಾಂಗಣದಲ್ಲಿ ನಡೆದ ಸೀನಿಯರ್ ಚೇಂಬರ್ “ಇಂಟರ್‌ನ್ಯಾಷನಲ್” ಇದರ 25ನೇ ನ್ಯಾಷನಲ್ ಕಾನ್‌ಕೋರ್ಸ್ ವಿಜಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅತ್ಯುತ್ತಮ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದ ವಿನ್ನರ್ಸ್ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ಬಿ.ಎನ್.ಪ್ರಕಾಶ್ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಲೀಜನ್ ಅಧಿಕಾರಿ ರನ್ನರ್ ಪ್ರಶಸ್ತಿಯನ್ನು ಸೀನಿಯರ್ ಪಿಪಿಎಫ್ ಎಂ.ಎಂ.ನಾಗೇಶ್ ಪಡೆದುಕೊಂಡಿದ್ದಾರೆ. ::ಎನ್‌ಡಿ ಶ್ರೇಷ್ಠತೆ ಪ್ರಶಸ್ತಿ :: ಏರಿಯಾ ಡಿ ಗೋಣಿಕೊಪ್ಪಲು ಲೀಜನ್ ಪಾಲಾಗಿದೆ. ಜತೆಗೆ ಗೋಣಿಕೊಪ್ಪ ಸೀರಿಯಲ್ ಚೇಂಬರ್ “ಇಂಟರ್‌ನ್ಯಾಷನಲ್” ಸಂಸ್ಥೆ, ಗಣನೀಯ ಸಾಧನೆಗಾಗಿ ಅಭಿನಂದನಾ ಪ್ರಶಸ್ತಿ ಮತ್ತು ಸ್ಪರ್ಧೆಯ ನಿಯಮ ಪಾಲನಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸೀನಿಯರ್ ಪಿಪಿಎಫ್ ಪೊನ್ನಲತಂಡ ಕಿರಣ್ ಪೊನ್ನಪ್ಪ ಅತ್ಯುತ್ತಮ ಲೀಜನ್ ಸದಸ್ಯರನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಸೀನಿಯರ್ ಚೇಂಬರ್ “ಇಂಟರ್‌ನ್ಯಾಷನಲ್” ಗೋಣಿಕೊಪ್ಪದ ಅಧ್ಯಕ್ಷರಾದ ಪಿಪಿಎಫ್ ಬಿ.ಎನ್ ಪ್ರಕಾಶ್ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಪಿಪಿಎಫ್ ಬಿ.ಎನ್‌ಪ್ರಕಾಶ್, ಕಾರ್ಯದರ್ಶಿ ಪಿಪಿಎಫ್ ನಾಗೇಶ್, ಖಜಾಂಚಿ ಪಿಪಿಎಫ್ ಮೇಕೆರಿರ ಮೋಹನ್, ನಿಕಟ ಪೂರ್ವ ಅಧ್ಯಕ್ಷರಾದ ಹಿರಿಯ ಪಿಪಿಎಫ್ ಪೊನ್ನಲ ತಂಡ ಕಿರಣ್ ಪೊನ್ನಪ್ಪ, ಹಿರಿಯ ಪಿಪಿಎಫ್ ಡಾ.ಶರತ್, ರಾಷ್ಟ್ರೀಯ ಸಂಯೋಜಕ ಪಿಪಿಎಫ್, ಎಂ.ಎನ್.ಉತ್ತಪ್ಪ ಹಾಜರಿದ್ದರು.


















