
ಮಡಿಕೇರಿ ಮಾ.17 NEWS DESK : ಕೂಡಿಗೆ ಯೂನಿಯನ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವತಿಯರಿಗೆ ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿ ನೀಡಲಾಗುವ ಸ್ವ-ಉದ್ಯೋಗ ತರಬೇತಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು 18 ರಿಂದ 50 ವರ್ಷ ವಯೋಮಿತಿಯೊಳಗಿನ ಯುವತಿಯರಿಗೆ ಮಾತ್ರ ಅವಕಾಶ. ಆಸಕ್ತಿ ಉಳ್ಳವರು ಸಂಸ್ಥೆಯನ್ನು ನೇರವಾಗಿ ಅಥವಾ ಕರೆ ಮಾಡಿ ಮಾಹಿತಿ ಪಡೆಯಬಹುದು. ಬ್ಯೂಟಿ ಪಾರ್ಲರ್ ತರಬೇತಿ: 35 ದಿನಗಳು. ಪ್ರಾರಂಭ 01.04.2026 ರಿಂದ 05.05.2026 ರ ವರೆಗೆ., ಮಹಿಳೆಯರ ಹೊಲಿಗೆ ತರಬೇತಿ: 31 ದಿನಗಳು. ಪ್ರಾರಂಭ 06.05.2026 ರಿಂದ 05.06.2026 ರ ವರೆಗೆ., ಕಂಪ್ಯೂಟರ್ ಲೆಕ್ಕಪತ್ರ ನಿರ್ವಹಣೆ ತರಬೇತಿ 38 ದಿನಗಳು. ಪ್ರಾರಂಭ 13.05.2026 ರಿಂದ 19.06.2026ರ ವರೆಗೆ, ಅಣಬೆ ಬೇಸಾಯ ತರಬೇತಿ : 10 ದಿನಗಳು. ಪ್ರಾರಂಭ 27.05.2026 ರಿಂದ 05.06.2026 ರ ವರೆಗೆ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 9686406181, 9449402081, 8618471801, 9900142602 ನ್ನು ಸಂಪರ್ಕಿಸುವಂತೆ ಸಂಸ್ಥೆಯ ನಿರ್ದೇಶಕರಾದ ಪ್ರಕಾಶ್ ಕುಮಾರ್ ಅವರು ತಿಳಿಸಿದ್ದಾರೆ.








