
ಮಡಿಕೇರಿ ಮಾ.17 NEWS DESK : ಬಿಳಿಗೇರಿ ಮತ್ತು ಕಗ್ಗೋಡ್ಲು ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಕೋಟ್ಪಾ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ 10 ಪ್ರಕರಣಗಳಿಗೆ ರೂ.1800 ಗಳ ದಂಡವನ್ನು ವಿಧಿಸಿ ನಿಯಮಗಳ ಕುರಿತು ಆರೋಗ್ಯ ಶಿಕ್ಷಣ ನೀಡಲಾಯಿತು. ಸಂಗ್ರಹಣೆಯಾದ ದಂಡವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜಂಟಿ ಖಾತೆಗೆ ಜಮೆ ಮಾಡಲಾಯಿತು. ಅನಿರೀಕ್ಷಿತ ಭೇಟಿಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಹಾಗೂ ಜಿಲ್ಲಾ ತಂಬಾಕು ಕೋಶದ ಮಂಜುನಾಥ್ ಹಾಗೂ ಪೊಲೀಸ್ ಇಲಾಖೆಯವರು ಭಾಗವಹಿಸಿದ್ದರು.









