
ವಿರಾಜಪೇಟೆ ಮಾ.17 NEWS DESK : ವಿರಾಜಪೇಟೆ ಸಮೀಪದ ಪ್ರಕೃತಿಯ ಸೊಬಗಿನ ನಡುವೆ ‘ಮಳೆ ದೇವರು’ಎಂದು ಹೆಸರುವಾಸಿಯಾಗಿರುವ ಮಲೆ ಮಹದೇಶ್ವರ (ಈಶ್ವರನ) ದೇವಾಲಯ ವಾರ್ಷಿಕ ಉತ್ಸವವು ಮಾ.20ರ ವರೆಗೆ ನಡೆಯಲಿದೆ. ಮಾ.18 ರಂದು ಬೆಳಿಗ್ಗೆ 5 ಗಂಟೆಗೆ ಇರುಬೆಳಕು, ಮಧ್ಯಾಹ್ನ 12 ಗಂಟೆಗೆ ದೊಡ್ಡ ಹಬ್ಬ, ಎತ್ತು ಪೋರಾಟ, ತೆಂಗಿನಕಾಯಿ ಗುಂಡು ಹೊಡೆಯುವುದು ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಬಳಿಕ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ, 3 ಗಂಟೆಗೆ ದೇವರು ಹೊರಗೆ ಬರುವುದು, ಸಂಜೆ 6 ಗಂಟೆಗೆ ಪೇಟೆ ಮೆರವಣಿಗೆ ನಡೆಯಲಿದೆ. ಮಾ. 19 ರಂದು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ, ಬಸವನ ಕಟ್ಟೆಯಲ್ಲಿ ಪೂಜೆ, ಸಂಜೆ 6 ಗಂಟೆಗೆ ದೇವರ ಜಳಕ, ಅವಬೃತ ಸ್ನಾನ, ರಾತ್ರಿ 8 ಗಂಟೆಗೆ ದೇವರ ಪ್ರದಕ್ಷಿಣೆ ನೃತ್ಯ ನಡೆಯಲಿದೆ. ಮಾ. 20ರಂದು ಹಗಲು 11 ಗಂಟೆಗೆ ಕೊಡಿಮರ ಇಳಿಸುವುದು 12 ಗಂಟೆಗೆ ಮಹಾಪೂಜೆ ಬಳಿಕ ಪ್ರಸಾದ ವಿನಿಯೋಗ ಅನ್ನ ಸಂತರ್ಪಣೆ ನಡೆಯಲಿದೆ. ಅಂದಾಜು 800ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯ ಇದಾಗಿದೆ.









