Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಆ.26ರಿಂದ ಸೆ.6ರವರೆಗೆ ರಾಜ್ಯಾದ್ಯಂತ “ಸೀರತ್ ಅಭಿಯಾನ”*
  • *ಸುಂಟಿಕೊಪ್ಪದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ*
  • *ಸ್ನೇಹದ ಕಡಲು ಬಳಗದಿಂದ ಸಂಗೀತ ಮಾಂತ್ರಿಕ ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಅವರಿಗೆ 81ನೇ ಹುಟ್ಟುಹಬ್ಬದ ಸಂಭ್ರಮ*
  • *ಎಐ–ಡಿಜಿಟಲ್ ಫೊರೆನ್ಸಿಕ್ಸ್ ಪ್ರವರ್ತಕ ಪ್ರೊ. ಎಸ್. ಎಸ್. ಅಯ್ಯಂಗಾರ್‌ಗೆ ಪ್ರತಿಷ್ಠಿತ FIU ಪ್ರಶಸ್ತಿ*
  • *ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ, ಮರಳು–ಮರದ ದಿಮ್ಮಿಗಳ ಸಾಗಾಣಿಕೆ ನಿಷೇಧ : ಆ.31ರವರೆಗೆ ವಿಸ್ತರಣೆ*
  • *ಪರಿಸರ ಸೂಕ್ಷ್ಮವಲಯದಿಂದ ಕೊಳಗದಾಳು ಗ್ರಾಮವನ್ನು ಕೈಬಿಡಲು ಒತ್ತಾಯ : ಗ್ರಾಮಸ್ಥರಿಂದ ಪ್ರತಿಭಟನೆ*
  • *ವಿರಾಜಪೇಟೆ ಎಲ್ ಎಸ್ ಎ ಕೇರ್ ಸೌಹಾರ್ದ ಕಾರ್ಯಕ್ರಮ*
  • *ಕೊಡಗಿನಲ್ಲಿ ಮೋಡಬಿತ್ತನೆ ಬೇಡ ಬಿಜೆಪಿ ಕೃಷಿಮೋರ್ಚಾ ಒತ್ತಾಯ*
  • *ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ರೋಟರಿ ನಮನ*
  • *ಮಡಿಕೇರಿ ಬ್ರಹ್ಮಾಕುಮಾರಿ ಲೈಟ್ ಹೌಸ್ ನಲ್ಲಿ ರಕ್ತದಾನ ಶಿಬಿರ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿಯಲ್ಲಿ ಏ.1ರಿಂದ 1 ತಿಂಗಳ ಕಾಲ 32ನೇ ವರ್ಷದ ಉಚಿತ ಕ್ರೀಡಾ ಶಿಬಿರ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿಯಲ್ಲಿ ಏ.1ರಿಂದ 1 ತಿಂಗಳ ಕಾಲ 32ನೇ ವರ್ಷದ ಉಚಿತ ಕ್ರೀಡಾ ಶಿಬಿರ*

ಮಾರ್ಚ್ 20, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಮಾ.20 : ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಏ.1ರಿಂದ 1 ತಿಂಗಳ ಕಾಲ 32ನೇ ವರ್ಷದ ಉಚಿತ ಕ್ರೀಡಾ ಶಿಬಿರವನ್ನು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆಯೆಂದು ಕ್ಲಬ್ ಅಧ್ಯಕ್ಷ ಕೋಟೇರ ಎನ್.ಮುದ್ದಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹಾಕಿ ಅಥ್ಲೆಟಿಕ್ಸ್ ಮತ್ತು ಯೋಗವನ್ನು ಒಳಗೊಂಡoತೆ ಶಿಬಿರ ನಡೆಯಲಿದೆ. ಶಿಬಿರ ಇದೇ ಮಾ.29ರಂದು ಆರಂಭಗೊoಡರು, ಹಿರಿಯ ಕ್ರೀಡಾ ಮಾರ್ಗದರ್ಶಕರಾಗಿದ್ದ ದಿ.ಸಿ.ವಿ.ಶಂಕರ್ ಅವರ ಜನ್ಮದಿನವಾದ ಏ.1 ರಂದು ಶಿಬಿರಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಸಮಾರೋಪ ಮೇ3 ರಂದು ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. ಕ್ಲಬ್‌ನ ಪ್ರಮುಖರಾದ ಬೊಪ್ಪಂಡ ಶ್ಯಾಂ ಮಾತನಾಡಿ, 1934ರಲ್ಲಿ ಆರಂಭಗೊAಡ ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ಮೂಲಕ ಕಳೆದ 31 ವರ್ಷಗಳಿಂದ ಬೇಸಿಗೆ ಕ್ರೀಡಾ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕ್ರೀಡಾ ಮರ್ಗದರ್ಶಕರಾಗಿದ್ದ ದಿ.ಸಿ.ವಿ.ಶಂಕರ್ ಅವರ ಗರಡಿಯಲ್ಲಿ ಪಳಗಿದ್ದ ಎಂ.ಪಿ.ಗಣೇಶ್, ಬಿ.ಪಿ.ಗೋವಿಂದ ಅವರು ಒಲಂಪಿಯನ್‌ಗಳಾಗಿದ್ದು, ಹಾಕಿ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗಿನ 11 ಮಂದಿ ಒಲಂಪಿಯನ್‌ಗಳಲ್ಲಿ 9 ಮಂದಿ ಆಟಗಾರರು ಇದೇ ಮೈದಾನದಲ್ಲಿ ಆಟವಾಡಿ ಸಾಧನೆಯ ಶಿಖರವನ್ನೇರಿದವರೆಂದು ಸಂತಸ ವ್ಯಕ್ತಪಡಿಸಿದರು. ಕ್ರೀಡಾ ಸಾಧಕರಿಗೆ ಮಾರ್ಗದರ್ಶಕರಾಗಿದ್ದ ದಿ.ಸಿ.ವಿ.ಶಂಕರ್ ಅವರ ಗೌರವಾರ್ಥ ಅವರು ಹುಟ್ಟಿದ ದಿನದಂದು ಕ್ರೀಡಾ ಶಿಬಿರವನ್ನು ಉದ್ಘಾಟಿಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಮೊಬೈಲ್ ಗೀಳಿಗೆ ಬಿದ್ದ ಮಕ್ಕಳು ಮೈದಾನದತ್ತ ಬರುವುದು ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಮೈದಾನದತ್ತ ಸೆಳೆೆಯುವ ಪ್ರಯತ್ನವಾಗಿ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಶಿಬಿರ ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ಯೋಗಾಭ್ಯಾಸದೊಂದಿಗೆ ಆರಂಭಗೊಳ್ಳಲಿದ್ದು, ನಂತರ ಮಕ್ಕಳಿಗೆ ಅವರಿಷ್ಟದಂತೆ ಅಥ್ಲೆಟಿಕ್ಸ್ ಮತ್ತು ಹಾಕಿಯ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ಹಾಕಿ ತರಬೇತಿಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಸ್ಟಿಕ್ ಮತ್ತು ಬಾಲನ್ನು ತರುವುದು ಕಡ್ಡಾಯವೆಂದು ಸ್ಪಷ್ಟಪಡಿಸಿದರು. ಯೋಗ ತರಬೇತಿಯನ್ನು ಕೆ.ಕೆ.ಮಹೇಶ್ ಕುಮಾರ್, ವೆಂಕಟೇಶ್, ಬಾಬು ಸೋಮಯ್ಯ ಅವರು ನೀಡುತ್ತಾರೆ. ಹಾಕಿ ಮತ್ತು ಅಥ್ಲೆಟಿಕ್ಸ್ ತರಬೇತಿಯನನ್ನು ಅನುಭವಿ ಆಟಗಾರರು ನೀಡಲಿದ್ದಾರೆ. ಕ್ರೀಡೆಯ ಬಗ್ಗೆ ಒಲವಿರುವ, ಮಕ್ಕಳಿಗೆ ಹಾಕಿ ತರಬೇತಿ ನೀಡಲು ಇಚ್ಛಿಸುವವರು ಶಿಬಿರದಲ್ಲಿ ಪಾಲ್ಗೊಳ್ಳಬಹುದೆಂದು ಬೊಪ್ಪಂಡ ಶ್ಯಾಂ ತಿಳಿಸಿ, ಆಸಕ್ತ ಮಕ್ಕಳು ಮಾ.29ರಂದು ಬೆಳಗ್ಗೆ 6 ಗಂಟೆಗೆ ಬಂದು ತರಬೇತಿಯಲ್ಲಿ ಪಾಲ್ಗೊಳ್ಳಬಹುದೆಂದು ಹೇಳಿದರು. ತಿಂಗಳ ಅವಧಿಯ ಕ್ರೀಡಾ ಶಿಬಿರದ ನಡುವೆ ಈ ಬಾರಿ “ತಡಿಯಂಡ ಮೋಳ್” ಬೆಟ್ಟಕ್ಕೆ ಚಾರಣ ತೆರಳುವ ಉದ್ದೇಶವಿದೆ. ಪ್ರತಿವರ್ಷವು ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ಮಕ್ಕಳನ್ನು ಚಾರಣಕ್ಕೆ ಕರೆದೊಯ್ಯಲಾಗುತ್ತದೆಂದು ತಿಳಿಸಿದರು. ಕ್ಲಬ್‌ನ ಪ್ರಮುಖರಾದ ಕುಡೆಕಲ್ ಸಂತೋಷ್ ಮಾತನಾಡಿ, ಶಿಬಿರದಲ್ಲಿ 5 ರಿಂದ 15 ವರ್ಷದ ಮಕ್ಕಳು ಪಾಲ್ಗೊಳ್ಳಬಹುದು. ಶಿಬಿರದ ಕೊನೆಯಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಬಹುಮಾನಗಳನ್ನು ನೀಡುವುದಲ್ಲದೆ, ಪಾಲ್ಗೊಳ್ಳುವ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗತ್ತದೆಂದು ಮಾಹಿತಿಯನ್ನಿತ್ತರು. ಗೋಷ್ಠಿಯಲ್ಲಿ ಕ್ಲಬ್‌ನ ಸಂಚಾಲಕರಾದ ಬಾಬು ಸೋಮಯ್ಯ, ಪ್ರಮುಖರಾದ ಟಿ.ವಿ.ಲೋಕೇಶ್ ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಆ.26ರಿಂದ ಸೆ.6ರವರೆಗೆ ರಾಜ್ಯಾದ್ಯಂತ “ಸೀರತ್ ಅಭಿಯಾನ”*

ಆಗಷ್ಟ್ 25, 2026

*ಸುಂಟಿಕೊಪ್ಪದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ*

ಆಗಷ್ಟ್ 25, 2026

*ಸ್ನೇಹದ ಕಡಲು ಬಳಗದಿಂದ ಸಂಗೀತ ಮಾಂತ್ರಿಕ ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಅವರಿಗೆ 81ನೇ ಹುಟ್ಟುಹಬ್ಬದ ಸಂಭ್ರಮ*

ಆಗಷ್ಟ್ 25, 2026

*ಸುಂಟಿಕೊಪ್ಪದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ*

ಆಗಷ್ಟ್ 25, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ, NEWS DESK ಆ.25: ಸುಂಟಿಕೊಪ್ಪದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದರೂ ಮುಸ್ಲಿಂ ಬಾಂಧವರು ಮಹಮ್ಮದ್ ಪೈಗಂಬರರ 1501ನೇ ಜನ್ಮದಿನದ ಪ್ರಯುಕ್ತ ಈದ್…

*ಸ್ನೇಹದ ಕಡಲು ಬಳಗದಿಂದ ಸಂಗೀತ ಮಾಂತ್ರಿಕ ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಅವರಿಗೆ 81ನೇ ಹುಟ್ಟುಹಬ್ಬದ ಸಂಭ್ರಮ*

ಆಗಷ್ಟ್ 25, 2026

*ಎಐ–ಡಿಜಿಟಲ್ ಫೊರೆನ್ಸಿಕ್ಸ್ ಪ್ರವರ್ತಕ ಪ್ರೊ. ಎಸ್. ಎಸ್. ಅಯ್ಯಂಗಾರ್‌ಗೆ ಪ್ರತಿಷ್ಠಿತ FIU ಪ್ರಶಸ್ತಿ*

ಆಗಷ್ಟ್ 25, 2026

*ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ, ಮರಳು–ಮರದ ದಿಮ್ಮಿಗಳ ಸಾಗಾಣಿಕೆ ನಿಷೇಧ : ಆ.31ರವರೆಗೆ ವಿಸ್ತರಣೆ*

ಆಗಷ್ಟ್ 25, 2026

*ಪರಿಸರ ಸೂಕ್ಷ್ಮವಲಯದಿಂದ ಕೊಳಗದಾಳು ಗ್ರಾಮವನ್ನು ಕೈಬಿಡಲು ಒತ್ತಾಯ : ಗ್ರಾಮಸ್ಥರಿಂದ ಪ್ರತಿಭಟನೆ*

ಆಗಷ್ಟ್ 25, 2026

*ವಿರಾಜಪೇಟೆ ಎಲ್ ಎಸ್ ಎ ಕೇರ್ ಸೌಹಾರ್ದ ಕಾರ್ಯಕ್ರಮ*

ಆಗಷ್ಟ್ 25, 2026

*ಕೊಡಗಿನಲ್ಲಿ ಮೋಡಬಿತ್ತನೆ ಬೇಡ ಬಿಜೆಪಿ ಕೃಷಿಮೋರ್ಚಾ ಒತ್ತಾಯ*

ಆಗಷ್ಟ್ 24, 2026

*ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ರೋಟರಿ ನಮನ*

ಆಗಷ್ಟ್ 24, 2026

*ಮಡಿಕೇರಿ ಬ್ರಹ್ಮಾಕುಮಾರಿ ಲೈಟ್ ಹೌಸ್ ನಲ್ಲಿ ರಕ್ತದಾನ ಶಿಬಿರ*

ಆಗಷ್ಟ್ 24, 2026

*ಎಸ್‍ಐಆರ್ ಪ್ರಕ್ರಿಯೆ, ಸೆ.23 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಕರಡು ಮತದಾರರ ಪಟ್ಟಿ : ಜಿಲ್ಲೆಯಲ್ಲಿ 4,05,803 ಮಂದಿ ಮತದಾರರು : ಡಿಸಿ ಮಾಹಿತಿ *

ಆಗಷ್ಟ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.