
ಸುಂಟಿಕೊಪ್ಪ ಮಾ.20 NEWS DESK : ಕೊಡಗರಹಳ್ಳಿ ಗ್ರಾಮದಲ್ಲಿರುವ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ಚಂದ್ರಮಾನ ಯುಗಾದಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪಂಚಾಗ ಶ್ರಾವಣ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ ನೆರವೇರಿತು. ಪೂಜಾ ಕಾರ್ಯಕ್ರಮಗಳನ್ನು ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಭಟ್, ಸಹಾಯಕರಾಗಿ ನರಸಿಂಹ ಭಟ್ ಮತ್ತು ಪ್ರಸನ್ನ ಭಟ್ ನೆರವೇರಿಸಿದರು. ಈ ಸಂದರ್ಭ ದೇವಾಲಯದ ಟ್ರಸ್ಟ್ ಅಧ್ಯಕ್ಷ ಕೆ.ಎನ್.ಪೂಣಚ್ಚ, ಕಾರ್ಯದರ್ಶಿ ಬಿ.ಸಿ.ದಿನೇಶ್, ಖಜಾಂಚಿ ಎ.ಬಿ.ತಮ್ಮಯ್ಯ, ದೇವಾಲಯದ ತಕ್ಕರಾದ ಜಗ್ಗರಂಡ ಹ್ಯಾರಿ ಕಾರ್ಯಪ್ಪ, ಟ್ರಸ್ಟಿಗಳಾದ ಎಂ.ಎಸ್.ಸುರೇಶ್ ಚಂಗಪ್ಪ, ಎಂ.ಎ.ಬೋಪಯ್ಯ, ಎ.ಎಂ.ಸನ್ನಿ ಕಾರ್ಯಪ್ಪ, ಕೆ.ಎಸ್.ಮಂಜುನಾಥ್, ಸಿ.ಎನ್.ದತ್ತ ಸೋಮಣ್ಣ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.









