Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಾಡಾನೆ ಮಾನವ ಸಂಘರ್ಷ ತಡೆಗೆ ಕೇಂದ್ರ ಸರಕಾರ ಏನು ಕ್ರಮ ಕೈಗೊಂಡಿದೆ*
  • *ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿ ವಿಚಾರಣ ಸಂಕಿರಣ : ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಕೊಡವರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ : ಕೆ.ಪಿ.ಬಾಲಸುಬ್ರಹ್ಮಣ್ಯ ಅಭಿಮತ*
  • *ಕಾರು ಮತ್ತು ಬೈಕ್ ಗಳ ನಡುವೆ ಡಿಕ್ಕಿ : ಇಬ್ಬರ ಸಾವು*
  • *ವಿರಾಜಪೇಟೆ : ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ*
  • *ಕೂಡಿಗೆ : ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ : ಶಿಕ್ಷಕರ ಸೇವೆ ಅನನ್ಯ : ಎಸ್.ಎ.ಯೋಗೇಶ್*
  • *ಭಾಗಮಂಡಲದಲ್ಲಿ ಜನಸ್ಪಂದನ ಸಭೆ : ಸಾರ್ವಜನಿಕರಿಂದ 85 ಅರ್ಜಿ ಸಲ್ಲಿಕೆ*
  • *ಕಳೆದ ಮೂರು ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಡಗು ಜಿಲ್ಲೆಗೆ ಹೆಚ್ಚಿನ‌ ಪ್ರಾಧಾನ್ಯತೆ ನೀಡಿದೆ : ಶಾಸಕ ಎ.ಎಸ್.ಪೊನ್ನಣ್ಣ*
  • *ಮಾ.24 ರಂದು ಕಣ್ಣಿನ ತಪಾಸಣಾ ಶಿಬಿರ*
  • *ರೋಟರಿ ಮಡಿಕೇರಿಯಿಂದ ಮೂರ್ನಾಡಿನಲ್ಲಿ ಕ್ಯಾನ್ಸರ್ ನಿರೋಧಕ ಲಸಿಕೆ ವಿತರಣೆ*
  • *ಕೊಡಗು ಕಲಾವಿದರ ಸಂಘದ ಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ ಆಯ್ಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಭಾಗಮಂಡಲದಲ್ಲಿ ಜನಸ್ಪಂದನ ಸಭೆ : ಸಾರ್ವಜನಿಕರಿಂದ 85 ಅರ್ಜಿ ಸಲ್ಲಿಕೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಭಾಗಮಂಡಲದಲ್ಲಿ ಜನಸ್ಪಂದನ ಸಭೆ : ಸಾರ್ವಜನಿಕರಿಂದ 85 ಅರ್ಜಿ ಸಲ್ಲಿಕೆ*

ಮಾರ್ಚ್ 21, 20261 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.21 NEWS DESK : ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಭಾಗಮಂಡಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರಿಂದ 85 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 15, ಗ್ರಾಮೀಣಾಭಿವೃದ್ಧಿ 7, ಪಂಚಾಯತ್ ರಾಜ್ ಸಂಬಂಧಿಸಿದಂತೆ 10, ಸೆಸ್ಕ್‌ 3, ಆಹಾರ 3, ರಸ್ತೆ ಸೇರಿದಂತೆ ವಿವಿಧ ಇಲಾಖೆಗಳ‌ 46 ಒಟ್ಟು 85 ಅರ್ಜಿಗಳು ಸಲ್ಲಿಕೆಯಾದವು. ಪ್ರತಿಯೊಬ್ಬ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕರು, ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಅರ್ಜಿ ಪರಿಶೀಲಿಸಿ ಒಂದು ವಾರದಲ್ಲಿ ಬಗೆಹರಿಸಬೇಕು ಎಂದು ಸೂಚಿಸಿದರು.  ಸಾರ್ವಜನಿಕರ ಅಹವಾಲುಗಳಿಗೆ ಕೂಡಲೇ ಸ್ಪಂದಿಸಬೇಕು, ವಿಳಂಭ ಮಾಡಬಾರದು ಎಂದು ಎ.ಎಸ್.ಪೊನ್ನಣ್ಣ ಅವರು ತಾಕೀತು ಮಾಡಿದರು. ಸಭೆ ಆರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು‌ ಸಾರ್ವಜನಿಕರ ಸಮಸ್ಯೆಯನ್ನು ಕಚೇರಿ ಹಂತದಲ್ಲಿಯೇ ಪರಿಹರಿಸುವಂತಾಗಬೇಕು ಎಂದು ಸಲಹೆ ನೀಡಿದರು. ಕಾನೂನು ಬದ್ಧವಾಗಿ ಸಮಸ್ಯೆಗಳನ್ನು ತೀರ್ಮಾನಿಸಿ, ಬಗೆಹರಿಸಬೇಕು. ಯಾರನ್ನೂ ಕೂಡ ಸತಾಯಿಸಬಾರದು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ವಿಧಾನಸಭಾ ಕ್ಷೇತ್ರವಾರು ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಬೇಕು ಎಂದು ಕಟ್ಟುನಿಟ್ಟಿನ‌ ಸೂಚನೆ ನೀಡಿದ್ದಾರೆ ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು. ‘ಜನರ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಸರ್ಕಾರ ಪ್ರಯತ್ನಿಸಿದೆ. ಆ ದಿಸೆಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಶಾಸಕರು ಕಿವಿಮಾತು ಹೇಳಿದರು.’ ಅಕ್ರಮ ಸಕ್ರಮ‌ ಸಮಿತಿ ಅಧ್ಯಕ್ಷರಾದ ನೆರವಂಡ ಉಮೇಶ್, ಪ್ರಮುಖರಾದ ಬಾಲಚಂದ್ರ ನಾಯರ್, ತಹಶೀಲ್ದಾರರಾದ ಶ್ರೀಧರ, ತಾ.ಪಂ.ಇಒ ಶೇಖರ್ ಇತರರು ಇದ್ದರು. ಸುಮಾರು 36 ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮ ಇಲಾಖೆ ಸಂಬಂಧ ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಾಡಾನೆ ಮಾನವ ಸಂಘರ್ಷ ತಡೆಗೆ ಕೇಂದ್ರ ಸರಕಾರ ಏನು ಕ್ರಮ ಕೈಗೊಂಡಿದೆ*

ಮಾರ್ಚ್ 21, 2026

*ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿ ವಿಚಾರಣ ಸಂಕಿರಣ : ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಕೊಡವರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ : ಕೆ.ಪಿ.ಬಾಲಸುಬ್ರಹ್ಮಣ್ಯ ಅಭಿಮತ*

ಮಾರ್ಚ್ 21, 2026

*ಕಾರು ಮತ್ತು ಬೈಕ್ ಗಳ ನಡುವೆ ಡಿಕ್ಕಿ : ಇಬ್ಬರ ಸಾವು*

ಮಾರ್ಚ್ 21, 2026

*ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿ ವಿಚಾರಣ ಸಂಕಿರಣ : ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಕೊಡವರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ : ಕೆ.ಪಿ.ಬಾಲಸುಬ್ರಹ್ಮಣ್ಯ ಅಭಿಮತ*

ಮಾರ್ಚ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.21 : ಯಾರಿಗೂ ಹೋಲಿಕೆಯಿಲ್ಲದ ಒಂದು ಅಪರೂಪದ ಮಾನವ ಸಂಕುಲವಾಗಿರುವ ಕೊಡವರು ತಮ್ಮತನವನ್ನು ಉಳಿಸಿಕೊಳ್ಳಲು ಹಕ್ಕುಗಳನ್ನು…

*ಕಾರು ಮತ್ತು ಬೈಕ್ ಗಳ ನಡುವೆ ಡಿಕ್ಕಿ : ಇಬ್ಬರ ಸಾವು*

ಮಾರ್ಚ್ 21, 2026

*ವಿರಾಜಪೇಟೆ : ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ*

ಮಾರ್ಚ್ 21, 2026

*ಕೂಡಿಗೆ : ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ : ಶಿಕ್ಷಕರ ಸೇವೆ ಅನನ್ಯ : ಎಸ್.ಎ.ಯೋಗೇಶ್*

ಮಾರ್ಚ್ 21, 2026

*ಭಾಗಮಂಡಲದಲ್ಲಿ ಜನಸ್ಪಂದನ ಸಭೆ : ಸಾರ್ವಜನಿಕರಿಂದ 85 ಅರ್ಜಿ ಸಲ್ಲಿಕೆ*

ಮಾರ್ಚ್ 21, 2026

*ಕಳೆದ ಮೂರು ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಡಗು ಜಿಲ್ಲೆಗೆ ಹೆಚ್ಚಿನ‌ ಪ್ರಾಧಾನ್ಯತೆ ನೀಡಿದೆ : ಶಾಸಕ ಎ.ಎಸ್.ಪೊನ್ನಣ್ಣ*

ಮಾರ್ಚ್ 21, 2026

*ಮಾ.24 ರಂದು ಕಣ್ಣಿನ ತಪಾಸಣಾ ಶಿಬಿರ*

ಮಾರ್ಚ್ 21, 2026

*ರೋಟರಿ ಮಡಿಕೇರಿಯಿಂದ ಮೂರ್ನಾಡಿನಲ್ಲಿ ಕ್ಯಾನ್ಸರ್ ನಿರೋಧಕ ಲಸಿಕೆ ವಿತರಣೆ*

ಮಾರ್ಚ್ 21, 2026

*ಕೊಡಗು ಕಲಾವಿದರ ಸಂಘದ ಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ ಆಯ್ಕೆ*

ಮಾರ್ಚ್ 21, 2026

*ಕೊಡಗು ಕಲಾವಿದರ ಸಂಘದಿಂದ ಎ.ಟಿ.ರಘು ಪುಣ್ಯ ಸ್ಮರಣೆ : ಪುಸ್ತಕ ಬಿಡುಗಡೆ, ಸಮಿತಿ ಪುನರ್‌ರಚನೆ*

ಮಾರ್ಚ್ 21, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.