
ಸುಂಟಿಕೊಪ್ಪ ಮಾ.23 NEWS DESK : ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಮುಂಜಾನೆ ಧ್ವಜಾರೋಹಣದೊಂದಿಗೆ ಆರಂಭಗೊಂಡ ತೆರೆ ಮಹೋತ್ಸವವು ಮಧ್ಯಾಹ್ನದವರೆಗೂ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ಕೋಲಗಳು ಸೇರಿದಂತೆ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ತೆರೆ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪ ಹಾಗೂ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು. ಸಮಿತಿಯ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಉಪಾಧ್ಯಕ್ಷ ಯಂಕನ ಶ್ರೀರಾಮ್, ಬಿ.ಡಿ.ರಾಜುರೈ, ಪ್ರಧಾನಕಾರ್ಯದರ್ಶಿ ಪಿ.ಸಿ.ಮೋಹನ್, ಖಜಾಂಚಿ ರಮೇಶ್‍ಪಿಳ್ಳೆ, ಸಹಕಾರ್ಯದರ್ಶಿ ಯಂಕನ ಕೌಶಿಕ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುರೇಶ್ ಗೋಪಿ, ಸುದೀಶ್, ಚಂದು ಸುರೇಶ್, ಧನುಕಾವೇರಪ್ಪ, ಎಂ.ಎಸ್.ಸುನಿಲ್, ಚಂದ್ರ, ಪ್ರವೀಣ, ದಿವಾಕರ ರೈ, ವಿನೋದ್, ಪ್ರಾಂತ್, ಎ.ಲೋಕೇಶ್ ಕುಮಾರ್, ಎ.ಶ್ರೀಧರ್ ಕುಮಾರ್, ಮನು ರೈ (ಮಹೇಶ್), ಸಲಹಾಸಮಿತಿ ಸದ್ಯರಾದ ಕೆ.ಪಿ.ಜಗನ್ನಾಥ್, ವೀಣಾರೈ, ಗಿರೀಜಾ ಉದಯಕುಮಾರ್ ಹಾಗೂ ರಮ್ಯ ಮೋಹನ್ ಸೇರಿದಂತೆ ಸಮಿತಿ ಸದಸ್ಯರು ಸೇರಿದಂತೆ ಭಕ್ತಾಧಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.









