Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಮರಾಟಿ ಪ್ರೀಮಿಯರ್ ಲೀಗ್-2 : ಗೂಗ್ಲಿಬಾಯ್ಸ್ ಕಾನೂರು ತಂಡ ಚಾಂಪಿಯನ್
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮರಾಟಿ ಪ್ರೀಮಿಯರ್ ಲೀಗ್-2 : ಗೂಗ್ಲಿಬಾಯ್ಸ್ ಕಾನೂರು ತಂಡ ಚಾಂಪಿಯನ್

ಮಾರ್ಚ್ 24, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಮಾ.24 NEWS DESK : ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನ ಸಂಘ ಹಾಗೂ ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮರಾಟಿ ಪ್ರೀಮಿಯರ್ ಲೀಗ್-2ರ ಕ್ರಿಕೆಟ್ ಪಂದ್ಯಾಟದಲ್ಲಿ ಗೂಗ್ಲಿಬಾಯ್ಸ್ ಕಾನೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.  ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಗೂಗ್ಲಿಬಾಯ್ಸ್ ತಂಡ ನಿಗದಿತ 4 ಓವರ್‍ನಲ್ಲಿ 4 ವಿಕೆಟ್ ಕಳೆದುಕೊಂಡು 35 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಅಂಚಿ ಕ್ರಿಕೆಟರ್ಸ್ ತಂಡ 4 ವಿಕೆಟ್ ಕಳೆದುಕೊಂಡು 18ರನ್ ಅಷ್ಟೇ ಗಳಿಸಲಷ್ಟೆ ಶಕ್ತವಾಗಿ 17ರನ್‍ಗಳ ಅಂತರದಲ್ಲಿ ಸೋಲುಂಡಿತ್ತು. ಪರಿಣಾಮ ಗೂಗ್ಲಿಬಾಯ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಅಂಚಿ ಕ್ರಿಕೆಟರ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತ ಮರಾಟಿ ರಾಯಲ್ಸ್ ಕೊಡಗು ತಂಡ ನಿಗದಿತ 4 ಓವರ್‍ನಲ್ಲಿ 5 ವಿಕೆಟ್ ಕಳೆದುಕೊಂಡು 46 ಕಲೆ ಹಾಕಿತು. ತಂಡದ ಪರ ಎಸ್.ಆರ್.ಸಂತೋಷ್ ಕುಮಾರ್ 10 ಎಸೆತಗಳಲ್ಲಿ 24 ರನ್ ದಾಖಲಿಸಿದರು. ಗುರಿ ಬೆನ್ನಟ್ಟಿದ ಅಂಚಿ ಕ್ರಿಕೆಟರ್ಸ್ ತಂಡ 3 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ತಂಡದ ಪರ ಆದರ್ಶ್ ಅದ್ಕಲೇಗಾರ್ 11 ಎಸೆತಗಳಲ್ಲಿ 5 ಸಿಕ್ಸರ್ ನೆರವಿನೊಂದಿಗೆ 36 ರನ್ ದಾಖಲಿಸಿ ತಂಡದ ಗೆಲುವಿಗೆ ಪಾತ್ರರಾದರು. ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತ ಓಂ ಶಕ್ತಿ ಮಹಾಮಾಹಿ ಕರಿಕೆ ತಂಡ ನಿಗದಿತ ಓವರ್‍ನಲ್ಲಿ 5 ವಿಕೆಟ್ ಕಳೆದುಕೊಂಡು 19ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಗೂಗ್ಲಿ ಬಾಯ್ಸ್ ಕಾನೂರು ತಂಡ 3.3 ಓವರ್‍ನಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತ ಮರಾಟಿ ರಾಯಲ್ಸ್ ಕೊಡಗು ತಂಡ 2 ವಿಕೆಟ್ ಕಳೆದುಕೊಂಡು 47 ರನ್ ಕಲೆಹಾಕಿತು. ತಂಡದ ಪರ ಗಿರೀಶ್ 9 ಎಸೆತಗಳಲ್ಲಿ 29ರನ್ ಕಲೆ ಹಾಕಿದರು. ಗುರಿಬೆನ್ನಟ್ಟಿದ ಗೂಗ್ಲಿ ಬಾಯ್ಸ್ ತಂಡ 2.4 ಓವರ್‍ನಲ್ಲಿ ಗೆಲುವಿನದಡ ಸೇರಿತು. ತಂಡದ ಪರ ಎಂ.ಆರ್.ಮೋಹನ್ 6 ಎಸೆತಗಳಲ್ಲಿ 27 ರನ್ ಕಲೆ ಹಾಕಿದರು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ 9 ತಂಡಗಳು ಪಾಲ್ಗೊಂಡಿತ್ತು. ಕ್ರೀಡಾಕೂಟದ ವೀಕ್ಷಕ ವಿವರಣೆಯನ್ನು ಎಂ.ವಿ.ಜಯರಾಮ್ ಮತ್ತು ಎಂ.ವಿ.ವರದರಾಜ್ ನಿರ್ವಹಿಸಿದರು. :: ವೈಯುಕ್ತಿಕ ಪ್ರಶಸ್ತಿ ವಿವರ: ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೂಗ್ಲಿ ಬಾಯ್ಸ್ ಕಾನೂರು ತಂಡದ ಎಂ.ಆರ್.ಮೋಹನ್, ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೂಗ್ಲಿ ಬಾಯ್ಸ್ ಕಾನೂರು ತಂಡದ ಎಂ.ಕೆ.ಸಂತೋಷ್ ಕುಮಾರ್, ಬೆಸ್ಟ್ ಬ್ಯಾಟ್ಸ್‍ಮನ್ ಪ್ರಶಸ್ತಿಯನ್ನು ಅಂಚಿ ಕ್ರಿಕೆಟರ್ಸ್ ತಂಡ ಆದರ್ಶ್ ಅದ್ಕಲೇಗಾರ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಗೂಗ್ಲಿ ಬಾಯ್ಸ್ ಕಾನೂರು ತಂಡದ ವಿಕಾಸ್, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಮರಾಟಿ ರಾಯಲ್ಸ್ ಕೊಡಗು ತಂಡದ ಚೇತನ್, ಬೆಸ್ಟ್ ಟೀಂ ಪ್ರಶಸ್ತಿಯನ್ನು ದಿ ಬಾಯ್ಸ್ ಮಕ್ಕಂದೂರು ತಂಡ ಪಡೆದುಕೊಂಡಿತು. ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಮರಾಟಿ ರಾಯಲ್ಸ್ ಕೊಡಗು ತಂಡದ ಸಂತೋಷ್, ಬೆಸ್ಟ್ ವಿಕೇಟ್ ಕೀಪರ್ ಪ್ರಶಸ್ತಿಯನ್ನು ಎಬಿಎಸ್ ಸ್ಟ್ರೈಕರ್ ಗುಡ್ಡೆಹೊಸೂರು ತಂಡದ ರವಿ, ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿಯನ್ನು ದಿ ಬಾಯ್ಸ್ ಮಕ್ಕಂದೂರು ತಂಡದ ಯುವರಾಜ್, ಅಪ್ ಕಮಿಂಗ್ ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಶಿವಾಜಿ ಬ್ರದರ್ಸ್ ಚೆಂಬು ತಂಡದ ಬಿಪಿನ್, ಟೂರ್ನಮೆಂಟ್ ಹೈಹೆಸ್ಟ್ ಸಿಕ್ಸರ್ ಪ್ರಶಸ್ತಿಯನ್ನು ಗೂಗ್ಲಿ ಬಾಯ್ಸ್ ಕಾನೂರು ತಂಡದ ಎಂ.ಆರ್.ಮೋಹನ್(27 ಸಿಕ್ಸರ್) ಪಡೆದುಕೊಂಡರು. :: ನಗದು ಬಹುಮಾನ ವಿವರ ::  ಮರಾಟಿ ಪ್ರೀಮಿಯರ್ ಲೀಗ್-2ರ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಗೂಗ್ಲಿಬಾಯ್ಸ್ ಕಾನೂರು ತಂಡಕ್ಕೆ 20,000 ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಅಂಚಿ ಕ್ರಿಕೆಟರ್ಸ್ ತಂಡಕ್ಕೆ 10,000 ನಗದು ಮತ್ತು ಆಕರ್ಷಕ ಟ್ರೋಫಿ, ಹಾಗೂ ತೃತೀಯ ಸ್ಥಾನ ಪಡೆದ ಮರಾಟಿ ರಾಯಲ್ಸ್ ಕೊಡಗು, ಚರ್ತುಥ ಸ್ಥಾನ ಪಡೆದ ಓಂ ಶಕ್ತಿ ಮಹಾಮಾಹಿ ಕರಿಕೆ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. :: ಅಂಬಾಭವಾನಿ ಗುಡ್ಡೆಹುಸೂರು, ಅಂಚಿ ಗಲ್ರ್ಸ್ ಚಾಂಪಿಯನ್ಸ್ ::  9ನೇ ವರ್ಷದ ವಾರ್ಷಿಕ ಕ್ರೀಡಾಕೂಟದಲ್ಲಿ ಸಮಾಜನಾಂಧವರಿಗಾಗಿ ಬಾರದ ಗುಂಡು ಎಸೆತ, ನಿಂಬೆ ಚಮಚ ಓಟ, ಸೂಜಿಗೆ ನೂಲು ಓಟ, ವಿವಿಧ ವಿಭಾಗಗಳಲ್ಲಿ ಪುರುಷ, ಮಹಿಳೆ ಮತ್ತು ಮಕ್ಕಳ ವಿಭಾಗದಲ್ಲಿ ನಡೆಯಿತು. ಜತೆಗೆ ಸಂಗೀತ ಕುರ್ಚಿ, ಕಪ್ಪೆಜಿಗಿತ, ಕಾಳು ಹೆಕ್ಕುವುದು, ಬಕೆಟ್‍ಗೆ ಬಾಲ್ ಹಾಕುವುದು ಪ್ರೇಕ್ಷಕರ ಗಮನ ಸೆಳೆಯಿತು. ಇದೇ ಸಂದರ್ಭ ನಡೆದ ಪುರುಷರ ಹಗ್ಗಜಗ್ಗಾಟದಲ್ಲಿ ಅಂಬಾಭವಾನಿ ಗುಡ್ಡೆಹುಸೂರು ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಗೂಗ್ಲಿ ಬಾಯ್ಸ್ ಕಾನೂರು ತಂಡ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಅಂಚಿ ಗಲ್ರ್ಸ್ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಶ್ರೀ ದೇವಿ ತಾಳತ್ತಮನೆ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಮಹಿಳೆಯರ ಥ್ರೋಬಾಲ್‍ನಲ್ಲಿ ಶ್ರೀ ದೇವಿ ತಾಳತ್ತಮನೆ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಅಂಚಿ ಗಲ್ರ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. :: ಗಣ್ಯರಿಂದ ಎಂಪಿಎಲ್‍ಗೆ ಚಾಲನೆ ::  ಮರಾಟಿ ಪ್ರೀಮಿಯರ್ ಲೀಗ್-2ರ ಕ್ರಿಕೆಟ್ ಪಂದ್ಯಾವಳಿಯನ್ನು ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್.ಯೋಗೇಂದ್ರ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನ ಸಂಘ ಅಧ್ಯಕ್ಷ ಎಂ.ಆರ್.ಮೋಹನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್, ಮಹಿಳಾ ವೇದಿಜೆ ಅಧ್ಯಕ್ಷೆ ರತ್ನಮಂಜರಿ ನರಸಿಂಹ ಸೇರಿದಂತೆ ಇತರರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಚಾ.ವಿ.ಸ.ನಿ.ನಿ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ರಾಮಚಂದ್ರ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ದೇವಕಿ.ಜಿ.ಆರ್.ನಾಯ್ಕ್, ಕಟ್ಟಡ ಸಮಿತಿ ಅಧ್ಯಕ್ಷ ಎಂ.ಟಿ.ಗುರುವಪ್ಪ, ಪ್ರಮುಖರಾದ ರತ್ನಮಂಜರಿ ನರಸಿಂಹ, ಎಂ.ಎಸ್.ವೆಂಕಪ್ಪ, ಎಂ.ಎ.ನಿರಲ್, ಧನಂಜಯ್, ಕೆ.ಜಿ.ಹೊನ್ನಪ್ಪ, ಕೆ.ಜಿ.ಶಶಿಕಾಂತ್, ಸಂಘದ ಹಿರಿಯ ಸದಸ್ಯರಾದ ಎಂ.ಬಿ.ಪೂವಪ್ಪ, ಎಂ.ಟಿ.ನಾರಾಯಣ್, ಎಂ.ಕೆ.ಮೋಹನ್ ಕಡಗದಾಳು, ಎಂ.ಟಿ.ರಾಘವ್ ನಾಯ್ಕ್ ಇತರರಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಜಿಲ್ಲಾಡಳಿತ ಮನವಿ; ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ; ಹಸಿರು ಪಟಾಕಿಗಳ ಬಳಕೆ ಕಡ್ಡಾಯ

ನವೆಂಬರ್ 5, 2026

ಮಡಿಕೇರಿಯಲ್ಲಿ ಗಮನ ಸೆಳೆದ ಕಲಾ ಪ್ರತಿಭೋತ್ಸವ; ಸಾಂಸ್ಕೃತಿಕ ಶ್ರೀಮಂತಿಕೆ ಕೊಡಗಿನ ಹೆಗ್ಗಳಿಕೆ: ಟಿ.ಪಿ.ರಮೇಶ್

ನವೆಂಬರ್ 5, 2026

ವನ್ಯಜೀವಿ ಹೆಜ್ಜೆ ಗುರುತು ಪತ್ತೆ

ನವೆಂಬರ್ 5, 2026

ಮಡಿಕೇರಿಯಲ್ಲಿ ಗಮನ ಸೆಳೆದ ಕಲಾ ಪ್ರತಿಭೋತ್ಸವ; ಸಾಂಸ್ಕೃತಿಕ ಶ್ರೀಮಂತಿಕೆ ಕೊಡಗಿನ ಹೆಗ್ಗಳಿಕೆ: ಟಿ.ಪಿ.ರಮೇಶ್

ನವೆಂಬರ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.5: ಕೊಡಗು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು, ಇಲ್ಲಿನ ಜನರ ಸಂಸ್ಕೃತಿ, ಜೀವನಶೈಲಿ ಹಾಗೂ ಆಚಾರ-ವಿಚಾರಗಳು…

ವನ್ಯಜೀವಿ ಹೆಜ್ಜೆ ಗುರುತು ಪತ್ತೆ

ನವೆಂಬರ್ 5, 2026

ರಾಜ್ಯ ಸರ್ಕಾರದಿಂದ ಬೆಲೆ ಏರಿಕೆಯ ಬರೆ: ಜನಸಾಮಾನ್ಯರು ಸಂಕಷ್ಟದಲ್ಲಿ – ರಾಷ್ಟ್ರಪತಿ ಆಳ್ವಿಕೆಗೆ ಕೊಡಗು ಬಿಜೆಪಿ ಎಸ್‌ಟಿ ಮೋರ್ಚಾ ಆಗ್ರಹ

ನವೆಂಬರ್ 5, 2026

ಸುಂಟಿಕೊಪ್ಪದಲ್ಲಿ ದಿವಂಗತ ಬಿ.ಜಿ. ರಘುನಾಥ್ ನಾಯ್ಕ ಸ್ಮಾರಕ ದತ್ತಿ ನಿಧಿ ಕಾರ್ಯಕ್ರಮ

ನವೆಂಬರ್ 5, 2026

ಸುಂಟಿಕೊಪ್ಪದಲ್ಲಿ ಸಮಸ್ಯೆಗಳ ಸರಮಾಲೆ: ವೇವ್ ಸಂಸ್ಥೆ ಅಸಮಾಧಾನ; ತ್ಯಾಜ್ಯ ವಿಲೇವಾರಿ, ಹದಗೆಟ್ಟ ರಸ್ತೆಗಳು, ವೈದ್ಯರ ಕೊರತೆಗೆ ಆಕ್ರೋಶ – ಸಮಸ್ಯೆ ಪರಿಹಾರವಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ

ನವೆಂಬರ್ 5, 2026

ಐದು ದಶಕಗಳ ಭತ್ತದ ಕೃಷಿ ಅನುಭವಕ್ಕೂ ಈ ಬಾರಿ ಕೈಕೊಟ್ಟ ಫಸಲು; ಆರ್‌ಎನ್‌ಆರ್ ಭತ್ತದ ತಳಿಯ ಇಳುವರಿ ಕುಸಿತ: ರೈತ ಪಟ್ಟೆಮನೆ ಉದಯಕುಮಾರ್ ಅಳಲು

ನವೆಂಬರ್ 5, 2026

ಪನ್ಯ ತೋಟದಲ್ಲಿ ಹುಲಿ ಅಥವಾ ಚಿರತೆ ಹೆಜ್ಜೆ ಗುರುತು ಪತ್ತೆ : ಸಾರ್ವಜನಿಕರಲ್ಲಿ ಆತಂಕ

ನವೆಂಬರ್ 5, 2026

ಮಡಿಕೇರಿ ಲಯನ್ಸ್ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವದ ಅಮೃತ ಮಹೋತ್ಸವ ಆಚರಣೆ; ಕೃತಕ ಬುದ್ಧಿಮತ್ತೆಯ ವ್ಯವಸ್ಥೆ ನಮಗೇ ಬುದ್ಧಿ ಕಲಿಸುವಂತಾಗಿದೆ: ಅನಿಲ್ ಹೆಚ್.ಟಿ. ಆತಂಕ

ನವೆಂಬರ್ 5, 2026

ಕುಶಾಲನಗರ ‘ಕೂಡಾ’ ನೂತನ ಸದಸ್ಯ ಕಾರ್ಯದರ್ಶಿಯಾಗಿ ಪಿ.ವಿ.ದೀಪಕ್ ಅಧಿಕಾರ ಸ್ವೀಕಾರ

ನವೆಂಬರ್ 5, 2026

ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ನವೆಂಬರ್ 5, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.