
ಸುಂಟಿಕೊಪ್ಪ ಮಾ.25 NEWS DESK : ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಕೋದಂಡರಾಮ ದೇವಾಲಯದಲ್ಲಿ ರಾಮನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕೊದಂಡರಾಮ ಮಂದಿರದಲ್ಲಿ ಬೆಳಿಗ್ಗೆ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ಸ್ವಾಮಿಗೆ ಬೆಳ್ಳಿಯ ಕವಚವನ್ನು ತೊಡಿಸಿ ಪೂಜೆ ಸಲ್ಲಿಸಲಾಯಿತು. ಪೂಜಾ ಕಾರ್ಯ ಕೈಂಕರ್ಯವನ್ನು ದೇವಾಲಯದ ಮುಖ್ಯ ಅರ್ಚಕ ಜಯಂತ್ ಭಟ್ ಅವರ ನೇತೃತ್ವದಲ್ಲಿ ನೆರವೇರಿಸಿದರು. ನಂತರ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕದ ಬಳಿಗೆ ರಾಮತಾರಕ ಹೋಮವನ್ನು ಪ್ರಧಾನ ಅರ್ಚಕ ಹಾ.ಮಾ.ಗಣೇಶ್ ಶರ್ಮಾ ಅವರ ನೇತೃತ್ವದಲ್ಲಿ ಜಯಂತ್ ಭಟ್, ನರಸಿಂಹ ಭಟ್, ಪುರುಷೋತ್ತಮ ಭಟ್, ಮನೋಜ್ ಭಟ್ ಇತರರು ನೆರವೇರಿಸಿದರು. ಮಧ್ಯಾಹ್ನ ವಿಶೇಷ ಮಂಗಳಾರತಿ, ಮಹಾ ಆರತಿ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಸುಂಟಿಕೊಪ್ಪ ಸೇರಿದಂತೆ ಸುತ್ತಲಿನ ನೂರಾರು ಭಕ್ತರು ಆಗಮಿಸಿ ಪೂಜಾ ಕೈಂಕಾರ್ಯಗಳಲ್ಲಿ ಭಾಗವಹಿಸಿದರು. ಈ ಸಂದರ್ಭ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಘ್ನೇಶ್, ನಿಖಿಲ್, ಪಿ.ಆರ್.ಸುನಿಲ್ ಕುಮಾರ್, ಧನುಕಾವೇರಪ್ಪ, ಜೆ.ಎನ್.ಚಂದ್ರಶೇಖರ್, ಸದಾಶಿವ ರೈ, ಸುರೇಶ್ ಗೋಪಿ, ಬಿ.ಕೆ.ಪ್ರಶಾಂತ್, ಎಂ.ಎಸ್.ಸುನಿಲ್, ಮಹೇಂದ್ರ, ಲೀಲಾಮೇದಪ್ಪ, ಪವಿತ್ರ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು. ಕೊದಂಡರಾಮ ಮಂದಿರ ಮತ್ತು ರಾಜ್ಯ ಹೆದ್ದಾರಿಯಲ್ಲಿ ಕೆಸರಿ ಬಣದ ಬಂಟಿಗ್ಸ್, ರಾಮನ ಬಾರಿ ಗಾತ್ರದ ಪ್ಲೆಕ್ಸ್, ವಿದ್ಯುತ್ ದೀಪ, ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು.









