Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಏ.18 ಮತ್ತು 19 ರಂದು ಮಡಿಕೇರಿಯಲ್ಲಿ ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ”
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಏ.18 ಮತ್ತು 19 ರಂದು ಮಡಿಕೇರಿಯಲ್ಲಿ ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ”

ಮಾರ್ಚ್ 30, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement


ಮಡಿಕೇರಿ ಮಾ.30 NEWS DESK : ಕೊಡಗು ಜಿಲ್ಲಾ ಮೊಗೇರ ಸಮಾಜ ಸೇವಾ ಸಮಾಜದ ವತಿಯಿಂದ 10ನೇ ವರ್ಷದ ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ” ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಏ.18 ಮತ್ತು 19 ರಂದು ನಡೆಯಲಿದೆ ಎಂದು ಸಮಾಜದ ಗೌರವಾಧ್ಯಕ್ಷ ಪಿ.ಎಂ.ರವಿ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ದಿನಗಳ ಕಾಲ ನಡೆಯುವ ಕ್ರೀಡಾಕೂಟದ ಕುರಿತು ಮಾಹಿತಿ ನೀಡಿದರು. ಕೊಡಗನ್ನು ಒಳಗೊಂಡಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಮೊಗೇರ ಬಾಂಧವರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾಜ ಬಾಂಧವರನ್ನು ಒಗ್ಗೂಡಿಸುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೊಗೇರ ಸಮಾಜದ ಪ್ರತಿಭಾವಂತರನ್ನು ಗುರುತಿಸುವ ಉದ್ದೇಶದಿಂದ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು. *60 ತಂಡಗಳ ನೋಂದಣಿ* ರಾಜ್ಯ ಮಟ್ಟದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಈಗಾಗಲೆ 60 ತಂಡಗಳು ನೋಂದಣಿ ಮಾಡಿಕೊಂಡಿವೆ. 4 ಓವರ್‍ಗಳಿಗೆ ಸೀಮಿತವಾಗಿ ಪಂದ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಏ.18ರಂದು ಬೆಳಗ್ಗೆ ಮೊಗೇರ ಸಮಾಜದ ಲಾಂಛನವನ್ನು ಒಳಗೊಂಡ ಧ್ವಜಾರೋಹಣದ ಮೂಲಕ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಲಾಗುತ್ತದೆ. ಉದ್ಘಾಟನಾ ಸಮಾರಂಭಕ್ಕೆ ಜಿಲ್ಲೆಯ ಶಾಸಕರು, ಸಂಸದರು ಹಾಗೂ ರಾಜ್ಯ ಮಟ್ಟದ ನಾಯಕರನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿಸಿದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ತಂಡಗಳ ಹೆಸರನ್ನು ಏ.10ರ ಒಳಗಾಗಿ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ಮೊಗೇರ ಸೇವಾ ಸಮಾಜದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ರಘು ಹೆಬ್ಬೆಟ್ಟಗೇರಿ ಮೊ.8277277730, ಕ್ರೀಡಾಧ್ಯಕ್ಷರಾದ ಚಂದ್ರ ಎಂ.ಜಿ. ಮೊ.9845732488, ಖಜಾಂಚಿ ಪ್ರಕಾಶ್ ಪಿ.ಪಿ. ಮೊ.7975103368ನ್ನು ಸಂಪರ್ಕಿಸಬಹುದು. ಏ.18ರಂದು ಬೆಳಗ್ಗೆ 8 ಗಂಟೆಗೆ ತಂಡಗಳು ಮೈದಾನದಲ್ಲಿ ಹಾಜರಿರಬೇಕು. *ಕಬಡ್ಡಿ ಪಂದ್ಯಾವಳಿ* ಏ.18 ರಂದು ಸಂಜೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಈಗಾಗಲೇ 10 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. *ವಿವಿಧ ಸ್ಪರ್ಧೆಗಳು* ಕ್ರಿಕೆಟ್‍ನೊಂದಿಗೆ ಏ.19ರಂದು ವಾಲಿಬಾಲ್, ಮಹಿಳೆಯರ ಥ್ರೋಬಾಲ್, ಪುರುಷರ ಹಗ್ಗಜಗ್ಗಾಟ, ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಮೊಗೇರ ಸಮಾಜದ ಪುರುಷರಿಗೆ 400 ಮೀ. ಓಟದ ಸ್ಪರ್ಧೆ, ಮಹಿಳೆÉಯರಿಗೆ 200 ಮೀ. ಓಟ, 60 ವರ್ಷ ಮೇಲ್ಪಟ್ಟ ವಯಸ್ಕರಿಗೆ ವೇಗದ ನಡಿಗೆ, 3 ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ 100 ಮೀ. ಓಟ, 7 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 300 ಮೀ. ಓಟ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 400 ಮೀ. ಓಟ, 3 ವರ್ಷ ಒಳಪಟ್ಟ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ಮಹಿಳೆಯರಿಗೆ ಸಂಗೀತ ಕುರ್ಚಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.9845732488, 7975103368 ನ್ನು ಸಂಪರ್ಕಿಸಬಹುದು. *ಆಕರ್ಷಕ ಬಹುಮಾನ* ಕ್ರಿಕೆಟ್ ಪಂದ್ಯಾವಳಿ ವಿಜೇತ ತಂಡಕ್ಕೆ 30 ಸಾವಿರ ರೂ. ನಗದು ಮತ್ತು ಟ್ರೋಫಿ, ದ್ವಿತೀಯ 20 ಸಾವಿರ ರೂ. ನಗದು ಮತ್ತು ಟ್ರೋಫಿ ಹಾಗೂ ಇತರ ಎಲ್ಲಾ ಸ್ಪರ್ಧಾ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನಿಡಲಾಗುತ್ತದೆಂದು ತಿಳಿಸಿದರು. *ಸಾಂಸ್ಕೃತಿಕ ಕಾರ್ಯಕ್ರಮ* ಏ.19ರಂದು ಸಂಜೆ ಸಮಾರೋಪ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ವೇದಿಕೆ ಕಾರ್ಯಕ್ರಮಗಳ ಬಳಿಕ ಸಮಾಜ ಬಾಂಧವರಿಂದ ಭರತನಾಟ್ಯ, ನಾಟಕ, ಏಕಪಾತ್ರಾಭಿನಯ, ಜಾನಪದ ಗೀತೆ ಗಾಯನ, ಮಿಮಿಕ್ರಿ, ಗ್ರೂಪ್ ಡ್ಯಾನ್ಸ್, ಛದ್ಮವೇಷ, ಜಾನಪದ ನೃತ್ಯ, ಸಿನಿಮಾ ಹಾಡುಗಳಿಗೆ ನೃತ್ಯ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ರಮೇಶ್ ಪಿ.ಎಂ. ಮೊ.9886503367, ಪ್ರಕಾಶ್ ತಾಳತ್ತಮನೆ ಮೊ.7975103368ನ್ನು ಸಂಪರ್ಕಿಸಬಹುದು ಎಂದು ಪಿ.ಎಂ.ರವಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಜನಾರ್ಧನ್ ಪಿ.ಬಿ., ಮಡಿಕೇರಿ ತಾಲ್ಲೂಕು ಅಧ್ಯಕ್ಷ ರಘು ಪಿ.ಸಿ., ಜಿಲ್ಲಾ ಕ್ರೀಡಾಧ್ಯಕ್ಷ ಚಂದ್ರ ಎಂ.ಜಿ., ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಪಿ.ಬಿ ಹಾಗೂ ಕ್ರೀಡಾ ಕಾರ್ಯದರ್ಶಿ ರಮೇಶ್ ಪಿ.ಸಿ. ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Related Posts

ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಜಿಲ್ಲಾಡಳಿತ ಮನವಿ; ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ; ಹಸಿರು ಪಟಾಕಿಗಳ ಬಳಕೆ ಕಡ್ಡಾಯ

ನವೆಂಬರ್ 5, 2026

ಮಡಿಕೇರಿಯಲ್ಲಿ ಗಮನ ಸೆಳೆದ ಕಲಾ ಪ್ರತಿಭೋತ್ಸವ; ಸಾಂಸ್ಕೃತಿಕ ಶ್ರೀಮಂತಿಕೆ ಕೊಡಗಿನ ಹೆಗ್ಗಳಿಕೆ: ಟಿ.ಪಿ.ರಮೇಶ್

ನವೆಂಬರ್ 5, 2026

ವನ್ಯಜೀವಿ ಹೆಜ್ಜೆ ಗುರುತು ಪತ್ತೆ

ನವೆಂಬರ್ 5, 2026

ಮಡಿಕೇರಿಯಲ್ಲಿ ಗಮನ ಸೆಳೆದ ಕಲಾ ಪ್ರತಿಭೋತ್ಸವ; ಸಾಂಸ್ಕೃತಿಕ ಶ್ರೀಮಂತಿಕೆ ಕೊಡಗಿನ ಹೆಗ್ಗಳಿಕೆ: ಟಿ.ಪಿ.ರಮೇಶ್

ನವೆಂಬರ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.5: ಕೊಡಗು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು, ಇಲ್ಲಿನ ಜನರ ಸಂಸ್ಕೃತಿ, ಜೀವನಶೈಲಿ ಹಾಗೂ ಆಚಾರ-ವಿಚಾರಗಳು…

ವನ್ಯಜೀವಿ ಹೆಜ್ಜೆ ಗುರುತು ಪತ್ತೆ

ನವೆಂಬರ್ 5, 2026

ರಾಜ್ಯ ಸರ್ಕಾರದಿಂದ ಬೆಲೆ ಏರಿಕೆಯ ಬರೆ: ಜನಸಾಮಾನ್ಯರು ಸಂಕಷ್ಟದಲ್ಲಿ – ರಾಷ್ಟ್ರಪತಿ ಆಳ್ವಿಕೆಗೆ ಕೊಡಗು ಬಿಜೆಪಿ ಎಸ್‌ಟಿ ಮೋರ್ಚಾ ಆಗ್ರಹ

ನವೆಂಬರ್ 5, 2026

ಸುಂಟಿಕೊಪ್ಪದಲ್ಲಿ ದಿವಂಗತ ಬಿ.ಜಿ. ರಘುನಾಥ್ ನಾಯ್ಕ ಸ್ಮಾರಕ ದತ್ತಿ ನಿಧಿ ಕಾರ್ಯಕ್ರಮ

ನವೆಂಬರ್ 5, 2026

ಸುಂಟಿಕೊಪ್ಪದಲ್ಲಿ ಸಮಸ್ಯೆಗಳ ಸರಮಾಲೆ: ವೇವ್ ಸಂಸ್ಥೆ ಅಸಮಾಧಾನ; ತ್ಯಾಜ್ಯ ವಿಲೇವಾರಿ, ಹದಗೆಟ್ಟ ರಸ್ತೆಗಳು, ವೈದ್ಯರ ಕೊರತೆಗೆ ಆಕ್ರೋಶ – ಸಮಸ್ಯೆ ಪರಿಹಾರವಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ

ನವೆಂಬರ್ 5, 2026

ಐದು ದಶಕಗಳ ಭತ್ತದ ಕೃಷಿ ಅನುಭವಕ್ಕೂ ಈ ಬಾರಿ ಕೈಕೊಟ್ಟ ಫಸಲು; ಆರ್‌ಎನ್‌ಆರ್ ಭತ್ತದ ತಳಿಯ ಇಳುವರಿ ಕುಸಿತ: ರೈತ ಪಟ್ಟೆಮನೆ ಉದಯಕುಮಾರ್ ಅಳಲು

ನವೆಂಬರ್ 5, 2026

ಪನ್ಯ ತೋಟದಲ್ಲಿ ಹುಲಿ ಅಥವಾ ಚಿರತೆ ಹೆಜ್ಜೆ ಗುರುತು ಪತ್ತೆ : ಸಾರ್ವಜನಿಕರಲ್ಲಿ ಆತಂಕ

ನವೆಂಬರ್ 5, 2026

ಮಡಿಕೇರಿ ಲಯನ್ಸ್ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವದ ಅಮೃತ ಮಹೋತ್ಸವ ಆಚರಣೆ; ಕೃತಕ ಬುದ್ಧಿಮತ್ತೆಯ ವ್ಯವಸ್ಥೆ ನಮಗೇ ಬುದ್ಧಿ ಕಲಿಸುವಂತಾಗಿದೆ: ಅನಿಲ್ ಹೆಚ್.ಟಿ. ಆತಂಕ

ನವೆಂಬರ್ 5, 2026

ಕುಶಾಲನಗರ ‘ಕೂಡಾ’ ನೂತನ ಸದಸ್ಯ ಕಾರ್ಯದರ್ಶಿಯಾಗಿ ಪಿ.ವಿ.ದೀಪಕ್ ಅಧಿಕಾರ ಸ್ವೀಕಾರ

ನವೆಂಬರ್ 5, 2026

ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ನವೆಂಬರ್ 5, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.