Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»  *ಚೆಟ್ಟಳ್ಳಿಯಲ್ಲಿ ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟದಿಂದ ಅಂತರ ಕೊಡವ ಪೊ್ಮ್ಮಕ್ಕಡ ಥ್ರೋಬಾಲ್ ಪಂದ್ಯಾಟ ಮಹಿಳೆಯರಿಗಾಗಿನ ಕ್ರೀಡಾಪಂದ್ಯಾವಳಿಗಳು ಭಾಂಧವ್ಯ ವೖದ್ದಿಗೆ ಸಹಕಾರಿ – ವೀಣಾ ಅಚ್ಚಯ್ಯ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

  *ಚೆಟ್ಟಳ್ಳಿಯಲ್ಲಿ ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟದಿಂದ ಅಂತರ ಕೊಡವ ಪೊ್ಮ್ಮಕ್ಕಡ ಥ್ರೋಬಾಲ್ ಪಂದ್ಯಾಟ ಮಹಿಳೆಯರಿಗಾಗಿನ ಕ್ರೀಡಾಪಂದ್ಯಾವಳಿಗಳು ಭಾಂಧವ್ಯ ವೖದ್ದಿಗೆ ಸಹಕಾರಿ – ವೀಣಾ ಅಚ್ಚಯ್ಯ

ಏಪ್ರಿಲ್ 1, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ, NEWS DESK ಏ.1 – ಕೊಡಗೂ ಸೇರಿದಂತೆ ವಿವಿಧೆಡೆ ಪೊಮ್ಮಕ್ಕಡ ಕೂಟಗಳ ನಡುವೆ ಭಾಂದವ್ಯ ವೃದ್ಧಿ ಹಾಗೂ ಕ್ರೀಡಾಮನೋಭಾವ ಮೂಡಿಸುವ ಉದ್ದೇಶದೊಂದಿಗೆ ಚೆಟ್ಟಳ್ಳಿ ಕೊಡವ ಸಮಾಜದ ಅಧೀನದಲ್ಲಿರುವ   ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟ ಅಂತರ ಕೊಡವ ಪೊಮ್ಮಕ್ಕಡ ಥ್ರೋಬಾಲ್ ಪಂದ್ಯಾವಳಿಯನ್ನು ಏರ್ಪಡಿಸಿರುವುದು ಶ್ಲಾಘನೀಯ ಎಂರು ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದ್ದಾರೆ.

ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ  ಚೆಟ್ಟಳ್ಳಿ ಕೊಡವ ಸಮಾಜದ ಅಧೀನದಲ್ಲಿರುವ   ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟದ ವತಿಯಿಂದ ಆಯೋಜಿಸಲಾಗಿದ್ದ   ಪ್ರಥಮ ವಷ೯ದ    ಅಂತರ ಕೊಡವ ಪೊಮ್ಮಕ್ಕಡ ಥ್ರೋಬಾಲ್ ಪಂದ್ಯಾವಳಿಯನ್ನು  ಉದ್ಘಾಟಿಸಿ ಅವರು  ಮಾತನಾಡಿದರು.

ಜೋಮಾಲೆ ಪೊಮ್ಮಕ್ಕಡ ಕೂಟದ ವತಿಯಿಂದ ಥ್ರೋಬಾಲ್ ಪಂದ್ಯಾವಳಿಯ  ಮೂಲಕ  , ಗ್ರಾಮೀಣ ಪ್ರದೇಶಗಳಲ್ಲಿ  ಗ್ರಾಮೀಣ ಕ್ರೀಡಾಪ್ರತಿಭೆಗಳು ಬೆಳಕಿಗೆ ಬರಲು  ಅವಕಾಶವಾಗುತ್ತದೆ ಎಂದರು.  ಎಲ್ಲಾ ಊರುಗಳಲ್ಲಿ ಪೊಮ್ಮಕ್ಕಡ ಕೂಟದ ವತಿಯಿಂದ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡು ಬರಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ಸಾರಿದಂತಾಗುವುದು ಎಂದೂ ವೀಣಾ ಅಚ್ಚಯ್ಯ ನುಡಿದರು. ಪೊಮ್ಮಕ್ಕಡ ಕೂಟ ಪ್ರಬಲವಾಗಿ ಸಂಘಟಿತವಾಗುತ್ತಿರುವುದೂ ಉತ್ತಮ ಬೆಳವಣಿಗೆಯಾಗಿದೆ ಎಂದೂ ಅವರು ಹಮ್ಮೆ ವ್ಯಕ್ತಪಡಿಸಿದರು.

ಚೆಟ್ಟಳ್ಳಿಯ ಜೋಮಾಲೆ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ   ಮಾತನಾಡಿ, ಜೋಮಾಲೆ ಪೊಮ್ಮಕ್ಕಡ ಕೂಟದ ವತಿಯಿಂದ ಇದೇ ಪ್ರಥಮ ಭಾರಿಗೆ ಚೆಟ್ಟಳ್ಳಿಯಲ್ಲಿ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ , ಪಂದ್ಯಾವಳಿಗೆ ಚೆಟ್ಟಳ್ಳಿಯ ಕೊಡವ ಸಮಾಜ ಅಗತ್ಯ ಸಹಕಾರವನ್ನು ನೀಡಿದೆ. ಪಂದ್ಯಾವಳಿಯಲ್ಲಿ ಬೆಂಗಳೂರು ಕೊಡವ ಸಮಾಜ ಪೊಮ್ಮಕ್ಕಡ ಕೂಟ ಸೇರಿದಂತೆ ಕೊಡಗಿನ ವಿವಿಧ ಕೊಡವ ಸಮಾಜಗಳ ಪೊಮ್ಮಕ್ಕಡ ಕೂಟದ  16  ತಂಡಗಳು ಪಾಲ್ಗೊಂಡಿದ್ದು, ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ, ತ್ರತೀಯ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೆ ನಗದು ಸೇರಿದಂತೆ ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವುದು.   ಆಟಗಾತಿ೯ಯರಿಗೆ  ವೈಯಕ್ತಿಕ ಬಹುಮಾನವನ್ನು ನೀಡಲಾಗುವುದು ಎಂದರು.

ಪೊಮ್ಮಕ್ಕಡ ಕೂಟದಲ್ಲಿ    60 ಸದಸ್ಯೆಯರಿದ್ದು, ಇದೇ  ಪ್ರಥಮ ಬಾರಿಗೆ  ಈ ಪಂದ್ಯಾವಳಿ ಆಯೋಜಿಸುವಲ್ಲಿ ಸಫಲರಾಗಿದ್ದೇವೆ.  ಜೋಮಾಲೆ ಪೊಮ್ಮಕ್ಕಡ ಕೂಟದ ವತಿಯಿಂದ ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ ಹಾಗೂ ವೃದ್ಧಾಶ್ರಮ ವಾಸಿಗಳಿಗೆ ಅಗತ್ಯ ನೆರವು ನೀಡುವ ಉದ್ದೇಶವಿದ್ದು ವೈವಿಧ್ಯಮಯ ಕಾಯ೯ಕ್ರಮ ಆಯೋಜಿಸಲಾಗುತ್ತದ ಎಂದೂ ಶೋಭಾಚಂಗಪ್ಪ ನುಡಿದರು.

ಥ್ರೋಬಾಲ್ ಪಂದ್ಯಾವಳಿಯ ಸಡಗರದೊಂದಿಗೆ ಮಹಿಳೆಯರು ತಮ್ಮ ಕ್ರೀಡಾ ಪ್ರತಿಭೆ ತೋರಿದರು.  ಈ ಪಂದ್ಯಾವಳಿಯಲ್ಲಿ ವಿವಾಹಿತ ಮಹಿಳೆಯರು ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಬೆಂಗ ಳೂರು, ಮೈಸೂರು ಸೇರಿದಂತೆ ಒಟ್ಟು  16   ತಂಡಗಳು  ಪಾಲ್ಗೊಂಡಿದ್ದವು.

ಜೋಮಾಲೆ ಪೊಮ್ಮಕ್ಕಡ ಕೂಟದ ಉಪಾಧ್ಯಕ್ಷೆ ಚೋಳಂಡ ಜ್ಯೋತಿ ನಾಣಯ್ಯ, ಕಾರ್ಯದರ್ಶಿ ಅಡಿಕೆರ ಶಾಂತಿ ಮುತ್ತಪ್ಪ, ಖಜಾಂಚಿ ಪುತ್ತರಿರ ಗಂಗು ಅಚ್ಚಯ್ಯ, ಸಹ ಕಾರ್ಯದರ್ಶಿ ಕೆಚ್ಚೆಟ್ಟಿರ ರತಿ ಕಾರ್ಯಪ್ಪ    ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ, ಉಪಾಧ್ಯಕ್ಷ ಬಿದ್ದಂಡ ಮಾದಯ್ಯ ಅವರು  ಹಾಜರಿದ್ದರು.

ಪಾಲ್ಗೊಂಡ  ತಂಡಗಳು –

ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ (ಎರಡು ತಂಡ) ನೆಲಜಿ ಪೊಮ್ಮಕ್ಕಡ ಕೂಟ ಅಮ್ಮತ್ತಿ ಪೂಂದಳಿ ಪೊಮ್ಮಕ್ಕಡ ಕೂಟ, ಮೈಸೂರು ಪೊಮ್ಮಕ್ಕಡ ಕೂಟ, ಟಿ. ಶೆಟ್ಟಿಗೇರಿ ಕೂಟ, ಗುಂಬಳಮಾಡ ಪೊಮ್ಮಕ್ಕಡ ಕೂಟ ಪೊನ್ನಂಪೇಟೆ, ತಲಕಾವೇರಿ ಪೊಮ್ಮಕ್ಕಡ ಕೂಟ ಮೈಸೂರು, ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಅಮ್ಮತ್ತಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಬೆಂಗಳೂರು ಪೊಮ್ಮಕ್ಕಡ ಕೂಟ, ಜೋಮಾಲೆ ಕೂಟ ಚೆಟ್ಟಳ್ಳಿ, ಬೇಗೂರು ಪೊಮ್ಮಕ್ಕಡ ಕೂಟ, ಪೊನ್ನಂಪೇಟೆ ಪೊಮ್ಮಕ್ಕಡ ಕೂಟ, ರೈರ‍್ಸ್ ಪೊಮ್ಮಕ್ಕಡ ಕೂಟ ಪೊನ್ನಂಪೇಟೆ ಹಾಗೂ ಮೂರ್ನಾಡು ಪೊಮ್ಮಕ್ಕಡ ಕೂಟ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಚೇಲಾವರದಲ್ಲಿ ಕಾಳಿಂಗ ಸರ್ಪದ ರಕ್ಷಣೆ

ಅಕ್ಟೋಬರ್ 9, 2026

ಕಡಗದಾಳಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಅಕ್ಟೋಬರ್ 9, 2026

ಮಡಿಕೇರಿ ದಸರಾ ಮಹೋತ್ಸವ ಪ್ರಯುಕ್ತ ಒಂದು ದಿನದ ವಿಶೇಷ ಪ್ಯಾಕೇಜ್

ಅಕ್ಟೋಬರ್ 9, 2026

ಕಡಗದಾಳಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಅಕ್ಟೋಬರ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.9 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕಗಳ…

ಮಡಿಕೇರಿ ದಸರಾ ಮಹೋತ್ಸವ ಪ್ರಯುಕ್ತ ಒಂದು ದಿನದ ವಿಶೇಷ ಪ್ಯಾಕೇಜ್

ಅಕ್ಟೋಬರ್ 9, 2026

ಮಡಿಕೇರಿಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ : ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

ಅಕ್ಟೋಬರ್ 9, 2026

ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರೂ.1.75 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ : ಶಾಸಕ ಎ.ಎಸ್.ಪೊನ್ನಣ್ಣರಿಂದ ಭೂಮಿಪೂಜೆ

ಅಕ್ಟೋಬರ್ 9, 2026

ಅ.10ರಂದು ವಿರಾಜಪೇಟೆ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಅಕ್ಟೋಬರ್ 9, 2026

ಕೊಡಗು : ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ಅಕ್ಟೋಬರ್ 9, 2026

ಸಿಜೆಪಿ ಪ್ರತಿಭಟನೆ ಹಿನ್ನೆಲೆ: ದೆಹಲಿಯಲ್ಲಿ ಹೈ ಅಲರ್ಟ್, 24 ಗಂಟೆ ಮೊಬೈಲ್ ಇಂಟರ್ನೆಟ್ ಸ್ಥಗಿತ; 57 ಮೆಟ್ರೋ ನಿಲ್ದಾಣಗಳ ಪ್ರವೇಶ–ನಿರ್ಗಮನ ದ್ವಾರ ಬಂದ್; 20 ವಲಯಗಳಾಗಿ ವಿಂಗಡಣೆ, 20 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ

ಅಕ್ಟೋಬರ್ 9, 2026

ಅ.11ರಿಂದ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ

ಅಕ್ಟೋಬರ್ 9, 2026

ಕೊಡವ ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಸಿಎನ್‌ಸಿ ಸತ್ಯಾಗ್ರಹ

ಅಕ್ಟೋಬರ್ 9, 2026

2027ರ SSLC, ದ್ವಿತೀಯ PUC ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಫೆಬ್ರವರಿ 27ರಿಂದ ಪಿಯುಸಿ, ಮಾರ್ಚ್ 22ರಿಂದ SSLC ಪರೀಕ್ಷೆ ಆರಂಭ

ಅಕ್ಟೋಬರ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.