
ವಿರಾಜಪೇಟೆ ಏ.3 NEWS DESK : ನಗರದ ಶಿವಕೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣು ಮೂರ್ತಿ ನಾಗ ದೇವಸ್ಥಾನದಲ್ಲಿ ಏ.10 ರಂದು ಶ್ರಿ ದುರ್ಗಿ ವಿಷ್ಣುಮೂರ್ತಿ ನಾಗದೇವರ ಪ್ರತಿಷ್ಠಾ ವರ್ಧಂತಿ 5 ನೇ ವಾರ್ಷಿಕೋತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಪ್ರಧಾನ ಕಳಶ ಪೂಜೆ, ವಿಷ್ಣು ಸಹಸ್ರನಾಮ, ತುಳಸಿ ಅರ್ಚನೆ, ಕಳಶ ಅಭಿಷೇಕ, ಬೆಳ್ಳಿಯ ಕವಚ ಸಮರ್ಪಣೆ, ಬಳಿಕ ಬೆಳಿಗ್ಗೆ 10 ಗಂಟೆಯಿಂದ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಸತ್ಯನಾರಾಯಣ ಪೂಜೆಗೆ ಹೆಸರು ನೀಡುವವರು ದೇವಾಲಯದಲ್ಲಿ ಹೆಸರನ್ನು ನೀಡಬಹುದು. ಮಧ್ಯಾಹ್ನ 12.30ಕ್ಕೆ ದೇವರ ಅಲಂಕಾರ ಪೂಜೆ ನಡೆಯುತ್ತದೆ. ಬಳಿಕ, ಶ್ರೀದುರ್ಗಿ ವಿಷ್ಣು ಮೂರ್ತಿ ನಾಗದೇವರಿಗೆ ಮಹಾಪೂಜೆ ಪ್ರಸಾಧ ವಿನಿಯೋಗ ನಂತರ ಅನ್ನ ಸಂತಾರ್ಪಣೆ ನಡೆಯಲಿದೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ತಿಳಿಸಿದ್ದಾರೆ.









