ಮಡಿಕೇರಿ, NEWS DESK ಏ 6- ಬೆಂಗಳೂರಿನಲ್ಲಿ ನೆಲಸಿರುವ ಬೊಪ್ಪಂಡ ರಶ್ಮಿ ಅಯ್ಯಪ್ಪ ಅವರಿಗೆ ಜೀವಮಾನ ಸಾಧನೆಗಾಗಿ ಪ್ರತಿಷ್ಟಿತ ಉದ್ಯೋಗ್ ಯೋಗ್ ಧಾನ್ – 2026 ಪ್ರಶಸ್ತಿ ಲಭಿಸಿದ್ದು, ಬೆಂಗಳೂರಿನಲ್ಲಿ ಆಯೋಜಿತ ಸಮಾರಂಭದಲ್ಲಿ ಖ್ಯಾತ ಚಿತ್ರ ನಟಿ ಶಿಲ್ಪಾ ಶೆಟ್ಟಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಯೋಗ ಕ್ಷೇಮ, ಆರೋಗ್ಯ ಸ್ವಾಸ್ತ್ಯ, ಜೀವನೋಲ್ಲಾಸ ಕ್ಷೇತ್ರದಲ್ಲಿ ಹೆಸರಾಗಿರುವ ಆಶ್ವಾಸನ್ ಸಂಸ್ಥೆಯ ಸಂಸ್ಥಾಪಕಿಯಾಗಿ ಮತ್ತು ಕಾಯ೯ನಿವಾ೯ಹಕಿ ಅಧ್ಯಕ್ಷೆಯಾಗಿರುವ ರಶ್ಮಿ ಅಯ್ಯಪ್ಪ ಎರಡು ದಶಕಗಳಿಂದ 30 ದೇಶಗಳಲ್ಲಿ ಆರೋಗ್ಯ ಸ್ವಾಸ್ತ್ಯ ಸಂಬಂಧಿತ 100 ಕ್ಕೂ ಹೆಚ್ಚು ಅಭೂತಪೂರ್ವ ಫಲಿತಾಂಶಗಳು ತಂದಿದ್ದು, ಆರೋಗ್ಯ ಸ್ವಾಸ್ತ್ಯ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಯೋಗ ಕ್ಷೇಮ, ಆಧ್ಯಾತ್ಮದ ಮೂಲಕ ಜೀವನೊಲ್ಲಾಸ ಕುರಿತಾದ ರಶ್ಮಿ ಅಯ್ಯಪ್ಪ ಅವರ ಕಾಯ೯ಕ್ರಮಗಳು ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ. 2005 ರ ಮೇ 23 ರಂದು ಆರೋಗ್ಯ ಸುರಕ್ಷತೆ ಮತ್ತು ಯೋಗ ಕ್ಷೇಮ ವಿಚಾರವನ್ನೇ ಆದ್ಯತೆಯಾಗಿರಿಸಿಕೊಂಡು ಆಶ್ವಾಸನ್ ಎಂಬ ಸಂಸ್ಥೆಯನ್ನು ರಶ್ಮಿ ಅಯ್ಯಪ್ಪ ಪ್ರಾರಂಭಿಸಿದ್ದರು. ದಿ. ಲೆಫ್ಟಿನೆಂಟ್ ಕನ೯ಲ್ (ನಿವೖತ್ತ) ಬೊಪ್ಪಂಡ ದಿ. ಬೋಪಣ್ಣ ಅಯ್ಯಪ್ಪ ಮತ್ತು ಬಡುವ ಮಾಡoಡ ಜುಕ್ಕ ಅಯ್ಯಪ್ಪ ಅವರ ಪುತ್ರಿಯಾಗಿರುವ ರಶ್ಮಿ, ಭಾರತದಲ್ಲಿನ ಆರೋಗ್ಯ ಸುಧಾರಣಾ ಕ್ಷೇತ್ರದಲ್ಲಿನ ಯೋಗ ಕ್ಷೇಮ ಕ್ಷೇತ್ರದಲ್ಲಿನ ಸಾಧನೆಗಾಗಿ ಕನಾ೯ಟಕ ಪ್ರವಾಸೋದ್ಯಮ ಇಲಾಖೆ ಬೆಂಬಲಿತ ಉದ್ಯೋಗ್ ಯೋಗ್ ಧಾನ್ ಪ್ರಶಸ್ತಿಯನ್ನು ಪಡೆದಿದ್ದಾರೆ.








