
ಸುಂಟಿಕೊಪ್ಪ ಏ.7 NEWS DESK : ನಾರ್ಗಾಣೆ ಶ್ರೀ ದೇವಿ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ಏ.13, 14 ಮತ್ತು 15ರಂದು ಧರ್ಮದೈವದ ನೇಮೋತ್ಸವವು ನಡೆಯಲಿದೆ ಎಂದು ದೇವಾಲಯದ ಮೇಲ್ವಿಚಾರಕರಾದ ಬಿ.ಡಿ.ರಾಜುರೈ ತಿಳಿಸಿದ್ದಾರೆ. ಏ.13 ರಂದು ಸೋಮವಾರ ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ಮತ್ತು ಶುದ್ಧ ಕಳಶ ನಡೆಯಲಿದೆ. ಏ.14 ರಂದು ಸಂಜೆ 6 ಗಂಟೆಗೆ ಶ್ರೀ ಸ್ವಾಮಿ ಮತ್ತು ಅಮ್ಮನವರ ಭಂಡಾರ ಪೂಜೆ ನಡೆಯಲಿದೆ. ಸಂಜೆ 8 ಗಂಟೆಗೆ ಮಹಾ ಮಂಗಳಾರತಿ ಪ್ರಸಾದ ವಿತರಣೆ, ರಾತ್ರಿ 9 ಗಂಟೆಯಿಂದ ಧರ್ಮ ದೇವತೆಯಾದ ಕಲ್ಲುರ್ಟಿ (ಪಾಷಣಮೂರ್ತಿ)ದೈವದ ನೇಮ ಹಾಗೂ ಸಿರಿ ಗಂಧ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಧರ್ಮ ದೈವವಾದ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮ ಜರುಗಲಿದ್ದು, 3 ಗಂಟೆಗೆ ಶ್ರೀ ಚಾಮುಂಡೇಶ್ವರಿ ಮತ್ತು ದೈವರಾಜ ಗುಳಿಗ ದೈವಗಳ ನೇಮೋತ್ಸವ ಜರುಗಲಿದೆ. ಏ.15 ರಂದು ಬೆಳಿಗ್ಗೆ 6 ಗಂಟೆಗೆ ಧೂಮಾವತಿ (ಜುಮಾದಿ) ದೈವದ ಹರಕೆಯ ಕೋಲ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಮಹಾಮಂಗಳಾರತಿ ನೆರವೇರಲಿದ್ದು, ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಣ್ಣಪ್ಪ ಸ್ವಾಮಿ ಮೇಲ್ವಿಚಾರಕರಾದ ರಾಜುರೈ ಮತ್ತು ಕುಟುಂಬಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








