
ಮಡಿಕೇರಿ ಏ.8 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.8ರಂದು ನಡೆದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಕುಂಜಿರ ಮತ್ತು ಅಪ್ಪಾರಂಡ ತಂಡಗಳ ನಡುವಿನ ಪಂದ್ಯದಲ್ಲಿ ಕುಂಜಿರ 9 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಪ್ಪಾರಂಡ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 62 ರನ್ ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಕುಂಜಿರ ತಂಡ 3.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 66 ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು.
ಕುಟ್ಟಂಡ (ಕಾರ್ಮಾಡು) ಮತ್ತು ಬಾಚಿನಾಡಂಡ ನಡುವಿನ ಪಂದ್ಯದಲ್ಲಿ ಬಾಚಿನಾಡಂಡ 9 ವಿಕೆಟ್ ಗಳ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕುಟ್ಟಂಡ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 99 ರನ್ ಗಳನ್ನು ಗಳಿಸಿತು. ಬಾಚಿನಾಡಂಡ ತಂಡ 5.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 103 ರನ್ ಗಳನ್ನು ಗಳಿಸಿ ಜಯ ಸಾಧಿಸಿತು. ಬೈರೇಟಿರ (ಕಾಟಕೇರಿ) ಮತ್ತು ಅಪ್ಪುಮಣಿಯಂಡ ನಡುವಿನ ಹಣಾಹಣಿಯಲ್ಲಿ ಅಪ್ಪುಮಣಿಯಂಡ ತಂಡ 8 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೈರೇಟಿರ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 81 ರನ್ ಗಳನ್ನು ಸೇರಿಸಿತು. ಅಪ್ಪುಮಣಿಯಂಡ ತಂಡ 5.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 82 ರನ್ ಗಳನ್ನು ಗಳಿಸಿ ಜಯ ಸಾಧಿಸಿತು. ಚೆಕ್ಕೇರ ಮತ್ತು ಬಲ್ಲಡಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಕ್ಕೇರ 8 ವಿಕೆಟ್ ಗಳಿಂದ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಲ್ಲಡಿಚಂಡ 6 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 34 ರನ್ ಗಳನ್ನು ಸೇರಿಸಿತು. ಚೆಕ್ಕೇರ 3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 38 ರನ್ ಗಳನ್ನು ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಚೇನಂಡ ಮತ್ತು ಸರ್ಕಂಡ ನಡುವಿನ ಪಂದ್ಯದಲ್ಲಿ ಸರ್ಕಂಡ 9 ರನ್ ಗಳಿಂದ ವಿಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೇನಂಡ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 90 ರನ್ ಗಳನ್ನು ಗಳಿಸಿತು. ಸರ್ಕಂಡ 4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 91 ರನ್ ಗಳನ್ನು ಸೇರಿಸಿ ಗೆಲುವು ಕಂಡಿತು. ಪಾಂಡ್ಯಂಡ ಮತ್ತು ಕುಂಧೀರ ತಂಡಗಳ ನಡುವಿನ ಪಂದ್ಯದಲ್ಲಿ ಪಾಂಡ್ಯಂಡ 8 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕುಂಧೀರ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 34 ರನ್ ಗಳನ್ನು ಗಳಿಸಿತು. ಪಾಂಡ್ಯಂಡ 3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 36 ರನ್ ಗಳನ್ನು ಸೇರಿಸಿ ಪಂದ್ಯವನ್ನು ಗೆದ್ದುಕೊಂಡಿತು. ಬಾಚೆಟ್ಟಿರ ಮತ್ತು ಪೊನ್ನಚಂಡ ನಡುವಿನ ಪಂದ್ಯದಲ್ಲಿ ಪೊನ್ನಚಂಡ 108 ರನ್ ಗಳ ಭರ್ಜರಿ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪೊನ್ನಚಂಡ 6 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 141 ರನ್ ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಬಾಚೆಟ್ಟಿರ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 33 ರನ್ ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು. ಪೊನ್ನಚಂಡ ಕಾಳಪ್ಪ ಅವರು 15 ಸಿಕ್ಸರ್ ಮತ್ತು 5 ಬೌಂಡರಿಗಳೊಂದಿಗೆ 113 ರನ್ ಗಳನ್ನು ಗಳಿಸಿ ಪೊನ್ನಚಂಡ ಗೆಲುವಿಗೆ ಬಲ ತುಂಬಿದರು. ಇದು ಈವರೆಗಿನ ಪಂದ್ಯಾವಳಿಯ ಮೊದಲ ಶತಕ ಮತ್ತು ಅತ್ಯಧಿಕ ವೈಯುಕ್ತಿಕ ಸ್ಕೋರ್ ಆಗಿದೆ.








