
ಮಡಿಕೇರಿ ಏ.8 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.8ರಂದು ನಡೆದ ಪಂದ್ಯಾವಳಿಯಲ್ಲಿ ಮೈದಾನ 2 ಗೆಲುವು ಸಾಧಿಸಿದ ತಂಡಗಳು. *ಮೈದಾನ 2* ಬೋಳಕಾರಂಡ (ಕೊಣಂಜಗೇರಿ) ಮತ್ತು ಬಾಳೆಕುಟ್ಟೀರ ನಡುವಿನ ಪಂದ್ಯದಲ್ಲಿ ಬೋಳಕಾರಂಡ 39 ರನ್‍ಗಳ ಜಯ ಸಾಧಿಸಿತು. ಬೋಳಕಾರಂಡ 6 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 97 ರನ್ ಗಳನ್ನು ಮತ್ತು ಬಾಳೆಕುಟ್ಟೀರ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 58 ರನ್ ಗಳನ್ನು ಗಳಿಸಿತು ಚೀಯಂಡಿರ ಮತ್ತು ಅಳಮೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಅಳಮೇಂಗಡ 50 ರನ್ ಗಳಿಂದ ಗೆಲುವು ಸಾಧಿಸಿತು. ಅಳಮೇಂಗಡ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 81 ರನ್ ಗಳನ್ನು ಮತ್ತು ಚೀಯಂಡಿರ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 30 ರನ್ ಗಳನ್ನು ಸೇರಿಸಿತು. ಆದೇಂಗಡ ಮತ್ತು ಬೊಳ್ಳನಮಂಡ ನಡುವಿನ ಹಣಾಹಣಿಯಲ್ಲಿ ಆದೇಂಗಡ 7 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಬೊಳ್ಳನಮಂಡ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 49 ರನ್ ಗಳನ್ನು ಮತ್ತು ಅದೇಂಗಡ 3 ವಿಕೆಟ್ ನಷ್ಟಕ್ಕೆ 52 ರನ್ ಗಳನ್ನು ಗಳಿಸಿತು. ಮಣ್ಣೀರ (ವೆಸ್ಟ್ ನೆಮ್ಮಲೆ) ಮತ್ತು ಅಯ್ಯಕುಟ್ಟಿರ ನಡುವಿನ ಪಂದ್ಯದಲ್ಲಿ 9 ವಿಕೆಟ್ ಗಳಿಂದ ಅಯ್ಯಕುಟ್ಟಿರ ಜಯ ಸಾಧಿಸಿತು. ಮಣ್ಣೀರ 6 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 32 ರನ್ ಗಳನ್ನು ಮತ್ತು ಅಯ್ಯಕುಟ್ಟೀರ 1 ವಿಕೆಟ್ ನಷ್ಟಕ್ಕೆ 33 ರನ್ ಗಳನ್ನು ಸೇರಿಸಿತು. ಮುಂಡ್ಯೋಳಂಡ ಮತ್ತು ಮಲ್ಲಮಾಡ ನಡುವಿನ ಪಂದ್ಯದಲ್ಲಿ 16 ರನ್ ಗಳಿಂದ ಮುಂಡ್ಯೋಳಂಡ ಗೆಲುವು ದಾಖಲಿಸಿತು. ಮುಂಡ್ಯೋಳಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 81 ರನ್ ಗಳನ್ನು ಮತ್ತು ಮಲ್ಲಮಾಡ 5 ವಿಕೆಟ್ ನಷ್ಟಕ್ಕೆ 65 ರನ್ ಗಳನ್ನು ಗಳಿಸಿತು. ಪಟ್ರಪಂಡ ಮತ್ತು ಬೊಟ್ಟಂಗಡ ತಂಡಗಳ ನಡುವಿನ ಪಂದ್ಯದಲ್ಲಿ 61 ರನ್ ಗಳಿಂದ ಬೊಟ್ಟಂಗಡ ಗೆಲುವು ಸಾಧಿಸಿತು. ಬೊಟ್ಟಂಗಡ 6 ಓವರ್ ಗಳಲ್ಲಿ 109 ರನ್ ಗಳನ್ನು ಮತ್ತು ಪಟ್ರಪಂಡ 4 ವಿಕೆಟ್ ನಷ್ಟಕ್ಕೆ 48 ರನ್ ಗಳನ್ನು ಸೇರಿಸಿತು. ಪಾಲಚಂಡ ಮತ್ತು ನೆಲ್ಲಿರ ನಡುವಿನ ಪಂದ್ಯದಲ್ಲಿ ಪಾಲಚಂಡ ತಂಡಕ್ಕೆ 9 ವಿಕೆಟ್‍ಗಳ ಜಯ ಲಭಿಸಿತು. ನೆಲ್ಲಿರ 6 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 61 ರನ್ ಗಳನ್ನು ಮತ್ತು ಪಾಲಚಂಡ 1 ವಿಕೆಟ್ ನಷ್ಟಕ್ಕೆ 62 ರನ್ ಗಳನ್ನು ಗಳಿಸಿತು.








