
ಮಡಿಕೇರಿ ಏ.8 NEWS DESK : ವಿರಾಜಪೇಟೆ ಸಮೀಪದ ಆರ್ಜಿ ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರಿನ ಹರ್ಷದ್ ಖಾನ್(25), ಮುಜಾಮಿಲ್ ಅಹಮ್ಮದ್(46), ಅಫ್ಸಲ್ ಪಾಷ(28) ಮತ್ತು ಸಾಕ್ಯೂಬ್(32) ಅವರೆ ಬಂಧಿತ ವ್ಯಕ್ತಿಗಳು,. ಇವರ ಬಳಿಯಿಂದ 576 ಗ್ರಾಂ ಗಾಂಜಾ ಮತ್ತು ಟೊಯೋಟಾ ಇಟಿಯೋಸ್ ಕಾರ್‍ನ್ನು ವಶಪಡಿಸಿಕೊಳ್ಳಲಾಗಿದೆ. ಆರ್ಜಿ ಗ್ರಾಮದ ಹೆಗ್ಗಳ ಜಂಕ್ಷನ್‍ನಲ್ಲಿ ಗಾಂಜಾ ಮಾರಾಟ, ಸರಬರಾಜಿನ ಬಗ್ಗೆ ದೊರೆತ ಸುಳಿವಿನ ಮೇರೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಮಾಲು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.








