Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸೋಮವಾರಪೇಟೆಯ ತಸ್ಮಿಯಾ ಕಾಲೇಜಿಗೆ ಪ್ರಥಮ* 
  • *ತೆರಿಗೆ ಸಂಗ್ರಹ ಕ್ಯಾಂಪ್ ಗೆ ಆಗ್ರಹ* 
  • *ಕೂಡಿಗೆ : ನಂದಿತಾಗೆ ಸನ್ಮಾನ*
  • *ಬೆಟ್ಟದಪುರದ ಅನಿಕೇತನ ಕಾಲೇಜಿಗೆ ಶೇ.92 ಫಲಿತಾಂಶ*
  • *ಶಂಶುಲ್ ಉಲಮಾ ಎಜುಕೇಶನಲ್ ಅಕಾಡೆಮಿಗೆ ಶೇ.100 ಫಲಿತಾಂಶ*
  • *ಡಾ.ಮನಮೋಹನ್ ಸಿಂಗ್ ವಿಶ್ವವಿದ್ಯಾನಿಲಯ : ಸಾಮಾಜಿಕ ನ್ಯಾಯ-ಮಾಧ್ಯಮ ಸಂವೇದನೆ- ವಿಚಾರಸಂಕಿರಣ*
  • *ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ*
  • *ಅಂತರ್ಜಲ ಪ್ರಾಧಿಕಾರದ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಲೋಕಸಭಾ ಕ್ಷೇತ್ರ ಹೆಚ್ಚಳ ಮಾಡದೇ ಮಹಿಳಾ ಮೀಸಲಾತಿ ನೀಡಬೇಕು : ಕೊಡಗಿನ ವಿಧಾನಸಭಾ ಕ್ಷೇತ್ರಗಳು 5ಕ್ಕೆ ಏರಿಕೆಯಾಗಬೇಕು*
  • *ಏ.16 ಮತ್ತು 17 ರಂದು ಕಾಂತೂರು ಶ್ರೀಪನ್ನಂಗಾಲ ತಾಯಿಯ ವಾರ್ಷಿಕೋತ್ಸವ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಂತರ್ಜಲ ಪ್ರಾಧಿಕಾರದ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅಂತರ್ಜಲ ಪ್ರಾಧಿಕಾರದ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಏಪ್ರಿಲ್ 11, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.11 NEWS DESK : ಕೊಡಗು ಜಿಲ್ಲೆಯಲ್ಲಿ ಅಂತರ್ಜಲವನ್ನು ಸಂರಕ್ಷಿಸುವಲ್ಲಿ ಕೆರೆ ಹಾಗೂ ಜಲಮೂಲವನ್ನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂತರ್ಜಲ ಅಭಿವೃದ್ಧಿ, ಸಂರಕ್ಷಣೆ ಮತ್ತಿತರ ಕುರಿತು ಸುದೀರ್ಘ ಚರ್ಚೆ ನಡೆಯಿತು. ಜಿಲ್ಲೆಯಲ್ಲಿ ಅಂತರ್ಜಲ ನಿರ್ದೇಶನಾಲಯ ಅಥವಾ ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದು ಕಾರ್ಯನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದರು. ಅಂತರ್ಜಲ ಇಲಾಖೆಯ ಹಿರಿಯ ಭೂ ವಿಜ್ಞಾನಿ ಎಸ್.ಸುಧಾ ಅವರು ಮಾತನಾಡಿ, ಗಾಳಿಬೀಡು, ಮಕ್ಕಂದೂರು, ಯವಕಪಾಡಿ, ಎಮ್ಮೆಮಾಡು, ಮೊಣ್ಣಂಗೇರಿ, ಕೂಡಿಗೆ, ಕುಮಾರಳ್ಳಿ, ಪೊನ್ನಂಪೇಟೆ ನಿರಾಕ್ಷೇಪಣಾ ಅರ್ಜಿಗಳನ್ನು ಪಡೆದುಕೊಂಡಿದ್ದು, ಹೊಸದಾಗಿ ಆನ್‍ಲೈನ್ ಮೂಲಕ ಮೂರು ಅರ್ಜಿಗಳು ಸ್ವೀಕೃತಿಗೊಂಡಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಯಿಸದೆ ಹಾಗೆಯೇ ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯುತ್ತಿರುವ ರಿಗ್ ಯಂತ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸುಧಾ ಅವರು ವಿವರಿಸಿದರು. ಅಲ್ಲದೇ 2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಹೊಸದಾಗಿ ಕೊರೆದಿರುವ ಕೊಳವೆ ಬಾವಿಗಳ ಸಫಲತೆ, ವಿಫಲ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಿರುವ ಬಗ್ಗೆ ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಲ್ಲಿ 19 ತೋಡು ಬಾವಿ ಹಾಗೂ 26 ಕೊಳವೆಬಾವಿಗಳು ಸೇರಿ ಒಟ್ಟು 45 ನಿರೀಕ್ಷಣಾ ಬಾವಿಗಳಿಂದ ಪ್ರತಿ ಮಾಹೆಯಲ್ಲಿ ಸ್ಥಿರ ಜಲಮಟ್ಟ ದಾಖಲು ಮಾಡಲಾಗುತ್ತಿತ್ತು. ಪ್ರಸ್ತುತವಾಗಿ ಕುಶಾಲನಗರ 1 ಕೊಳವೆ ಬಾವಿಯು ಇರುವ ಸ್ಥಳದಲ್ಲಿ ಕೋರ್ಟ್ ನಿರ್ಮಾಣ ಮತ್ತು ವಿರಾಜಪೇಟೆಯ 1 ಕೊಳವೆಬಾವಿ ಇರುವ ಸ್ಥಳದಲ್ಲಿ ಪ್ರವಾಸಿ ಮಂದಿರ ನಿರ್ಮಾಣ ಮಾಡಿರುವುದರಿಂದ ಮುಚ್ಚಲಾಗಿದೆ ಎಂದು ಸುಧಾ ಎಸ್. ತಿಳಿಸಿದರು. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಕುಮಾರಸ್ವಾಮಿ ಅವರು ಮಾತನಾಡಿ, 2025-26 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ 98 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೂ ವಿಜ್ಞಾನಿ ದೀಕ್ಷಿತ್ ಮಾತನಾಡಿ, ಜಿಲ್ಲೆಯ ವಿವಿಧೆಡೆ ನೀರಿನ ಮಾದರಿ ಪರೀಕ್ಷೆಗಳ ವಿವರಣೆ ನೀಡಿದರು. ಅಲ್ಲದೇ ನೀರಿನ ಮಾದರಿ ಪರೀಕ್ಷೆಯಲ್ಲಿ ಕಂಡು ಬಂದಿರುವ ರಾಸಾಯನಿಕ ವರದಿಗಳನ್ನು ವಿಸ್ತøತವಾಗಿ ಮಂಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಾಲ ಕಾಲಕ್ಕೆ ನೀರಿನ ಮಾದರಿಯನ್ನು ಪರೀಕ್ಷಿಸಿ ಶುದ್ಧ ನೀರನ್ನು ಕುಡಿಯಲು ಪೂರೈಸಬೇಕು ಮತ್ತು ಕೆರೆಗಳ ಸರ್ವೆ ಕಾರ್ಯ ಶೀಘ್ರ ನಡೆಯಬೇಕು ಎಂದು ನಿರ್ದೇಶನ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸೋಮವಾರಪೇಟೆಯ ತಸ್ಮಿಯಾ ಕಾಲೇಜಿಗೆ ಪ್ರಥಮ* 

ಏಪ್ರಿಲ್ 11, 2026

*ತೆರಿಗೆ ಸಂಗ್ರಹ ಕ್ಯಾಂಪ್ ಗೆ ಆಗ್ರಹ* 

ಏಪ್ರಿಲ್ 11, 2026

*ಕೂಡಿಗೆ : ನಂದಿತಾಗೆ ಸನ್ಮಾನ*

ಏಪ್ರಿಲ್ 11, 2026

*ತೆರಿಗೆ ಸಂಗ್ರಹ ಕ್ಯಾಂಪ್ ಗೆ ಆಗ್ರಹ* 

ಏಪ್ರಿಲ್ 11, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ ಏ.11 NEWS DESK :  2026-27 ರ ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ತೆರಿಗೆ ಸಂಗ್ರಹ ಮಾಡಲು…

*ಕೂಡಿಗೆ : ನಂದಿತಾಗೆ ಸನ್ಮಾನ*

ಏಪ್ರಿಲ್ 11, 2026

*ಬೆಟ್ಟದಪುರದ ಅನಿಕೇತನ ಕಾಲೇಜಿಗೆ ಶೇ.92 ಫಲಿತಾಂಶ*

ಏಪ್ರಿಲ್ 11, 2026

*ಶಂಶುಲ್ ಉಲಮಾ ಎಜುಕೇಶನಲ್ ಅಕಾಡೆಮಿಗೆ ಶೇ.100 ಫಲಿತಾಂಶ*

ಏಪ್ರಿಲ್ 11, 2026

*ಡಾ.ಮನಮೋಹನ್ ಸಿಂಗ್ ವಿಶ್ವವಿದ್ಯಾನಿಲಯ : ಸಾಮಾಜಿಕ ನ್ಯಾಯ-ಮಾಧ್ಯಮ ಸಂವೇದನೆ- ವಿಚಾರಸಂಕಿರಣ*

ಏಪ್ರಿಲ್ 11, 2026

*ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ*

ಏಪ್ರಿಲ್ 11, 2026

*ಅಂತರ್ಜಲ ಪ್ರಾಧಿಕಾರದ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಏಪ್ರಿಲ್ 11, 2026

*ಲೋಕಸಭಾ ಕ್ಷೇತ್ರ ಹೆಚ್ಚಳ ಮಾಡದೇ ಮಹಿಳಾ ಮೀಸಲಾತಿ ನೀಡಬೇಕು : ಕೊಡಗಿನ ವಿಧಾನಸಭಾ ಕ್ಷೇತ್ರಗಳು 5ಕ್ಕೆ ಏರಿಕೆಯಾಗಬೇಕು*

ಏಪ್ರಿಲ್ 11, 2026

*ಏ.16 ಮತ್ತು 17 ರಂದು ಕಾಂತೂರು ಶ್ರೀಪನ್ನಂಗಾಲ ತಾಯಿಯ ವಾರ್ಷಿಕೋತ್ಸವ*

ಏಪ್ರಿಲ್ 11, 2026

*ಕುಶಾಲನಗರದ *ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ “ಜಿ.ಎಲ್. ಶಾಪಿಂಗ್ ಹಬ್ಬ ವರುಷದ ಹರುಷ*

ಏಪ್ರಿಲ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.