
ಕುಶಾಲನಗರ ಏ.14 NEWS DESK : ಹೆಬ್ಬಾಲೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಾರ್ವಜನಿಕರಿಗಾಗಿ ಉಚಿತ ಫುಟ್ ಪಲ್ಸ್ ಥೆರಪಿ ಉಚಿತಾ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಹದಿನೈದು ದಿನಗಳ ಅವಧಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶಿಬಿರ ನಡೆಯಲಿದ್ದು 8 ವರ್ಷದ ಮೇಲ್ಪಟ್ಟು ವಯೋವೃದ್ಧರವರೆಗೂ ಥೆರಪಿಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತರಬೇತಿ ಶಿಬಿರದ ಆಯೋಜಕರಾದ ಕಂಪಾನಿಯೋ ಸಂಸ್ಥೆಯ ಥೆರಪಿಯನ್ ಶಶಿಕಾಂತ ಪೂಜಾರಿ ಹೇಳಿದರು. ಅರ್ಧ ಗಂಟೆ ಕಾಲ ನಡೆಸುವ ಥೆರಪಿಯಲ್ಲಿ ಓರ್ವ ಆರೋಗ್ಯವಂತ ಮನುಷ್ಯ 5 ಕಿಮೀ ವೇಗದ ನಡಿಗೆ ಮಾಡಿದಷ್ಟು ಪ್ರಯೋಜನವಾಗಲಿದೆ. ಥೆರಪಿಯಿಂದಾಗಿ ದೇಹದ ನರನಾಡಿಗಳಲ್ಲಿ ಸುಗಮ ರಕ್ತ ಸಂಚಾರವಾಗುತ್ತದೆ. ದೇಹದಲ್ಲಿನ ಅಶುದ್ಧ ರಕ್ತ ಶುದ್ಧವಾಗುತ್ತದೆ. ಹೃದಯಸಂಬಂಧಿ ಕಾಯಿಲೆಗಳು ಸೇರಿದಂತೆ ಸೊಂಟ ನೋವು, ಹಿಂಬದಿ ನೋವು, ಬೆನ್ನು ನೋವು ಮೊದಲಾದ ನರ ದೌರ್ಬಲ್ಯಗಳ ನೋವುಗಳು ನಿವಾರಣೆಯಾಗಲಿವೆ. ಕಂಪಾನಿಯೋ ಸಂಸ್ಥೆ 2014 ರಿಂದ ಆರಂಭವಾಗಿದ್ದು ದೇಶಾದ್ಯಂತ 15 ಲಕ್ಷಕ್ಕೂ ಹೆಚ್ಚು ಮಂದಿಗೆ ಪ್ರಯೋಜನವಾಗಲಿದೆ ಎಂದು ಶಶಿಕಾಂತ ಪೂಜಾರಿ ಹೇಳಿದರು. ಶಿಬಿರದಲ್ಲಿ ಕಾವ್ಯ ಹಾಗೂ ರೀನಾ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಬ್ಬಾಲೆಯಲ್ಲಿ ಏಪ್ರಿಲ್ 7 ರಿಂದ 22 ರವರೆಗೂ ಆರಂಭಗೊಂಡಿದ್ದು ಸಾರ್ವಜನಿಕರು ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.









