Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ನಾಪೋಕ್ಲು ಹಿಂದೂ ಮಲಯಾಳಿ ಸಂಘದಿಂದ ವಿಷು ಹಬ್ಬ ಸಂಭ್ರಮ*
  • *ಮೈತಾಡಿ ಗ್ರಾಮದಲ್ಲಿ ವಿಶ್ವ ಕಲಾ ದಿನ ಆಚರಣೆ*
  • *ಕೆದಮುಳ್ಳೂರಿನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಹರಿಸೇವೆ ಹಾಗೂ 101 ಕೋಲ*
  • *ಏ.18 ಮತ್ತು 19 ರಂದು ಅರೆಭಾಷೆ ಗೌಡ ಕ್ರೀಡಾ ಹಬ್ಬದ ಸಂಭ್ರಮ : ವಿವಿಧ ವಿಭಾಗಗಳಲ್ಲಿ ಫುಟ್ಬಾಲ್-ಮಹಿಳೆಯರ ಹಗ್ಗಜಗ್ಗಾಟ*
  • *ಏ.17 ರಿಂದ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಆರಂಭ*
  • *ಶುಭ ಅಕ್ಷಯ ತೃತೀಯ : ಕುಶಾಲನಗರದ ಜಿ.ಆಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಚಿನ್ನ ಖರೀದಿಗೆ ಶುಭ ಸಮಯ : ಆಕರ್ಷಕ ಕೊಡುಗೆಗಳು ನಿಮಗಾಗಿ*
  • *ಏ.18 ಮತ್ತು 19 ರಂದು ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವ : ಸಾಧಕರಿಗೆ ಸನ್ಮಾನ*
  • *ಕೊಡಗು ವಿಶ್ವವಿದ್ಯಾಲಯದಲ್ಲಿ “ಕೊಡವ ಸಂಸ್ಕೃತಿ ಅಧ್ಯಯನ ಪೀಠ”ದ ಸ್ಥಾಪನೆ : ಸಂಶೋಧನೆ ಸಂರಕ್ಷಣೆ-ಸಂವರ್ಧನೆಗೆ ವಿಶೇಷ ಕಾರ್ಯಯೋಜನೆ : ಅಶೋಕ ಸಂಗಪ್ಪ ಆಲೂರ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.16 ರಂದು ಗೆಲುವು ಸಾಧಿಸಿದ ತಂಡಗಳು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.17 ರಂದು ನಡೆಯುವ ಪಂದ್ಯಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ವಿಶ್ವವಿದ್ಯಾಲಯದಲ್ಲಿ “ಕೊಡವ ಸಂಸ್ಕೃತಿ ಅಧ್ಯಯನ ಪೀಠ”ದ ಸ್ಥಾಪನೆ : ಸಂಶೋಧನೆ ಸಂರಕ್ಷಣೆ-ಸಂವರ್ಧನೆಗೆ ವಿಶೇಷ ಕಾರ್ಯಯೋಜನೆ : ಅಶೋಕ ಸಂಗಪ್ಪ ಆಲೂರ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ವಿಶ್ವವಿದ್ಯಾಲಯದಲ್ಲಿ “ಕೊಡವ ಸಂಸ್ಕೃತಿ ಅಧ್ಯಯನ ಪೀಠ”ದ ಸ್ಥಾಪನೆ : ಸಂಶೋಧನೆ ಸಂರಕ್ಷಣೆ-ಸಂವರ್ಧನೆಗೆ ವಿಶೇಷ ಕಾರ್ಯಯೋಜನೆ : ಅಶೋಕ ಸಂಗಪ್ಪ ಆಲೂರ*

ಏಪ್ರಿಲ್ 16, 20265 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.16 NEWS DESK : ಕೊಡಗು ವಿಶ್ವವಿದ್ಯಾಲಯವು 2023 ರಲ್ಲಿ ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯವಾಗಿ ಕೊಡಗಿನ ಚಿಕ್ಕ ಅಳುವಾರದಲ್ಲಿ ಸ್ಥಾಪನೆಯಾಗಿದ್ದು, ವಿಶಿಷ್ಟವಾಗಿ ಗಡಿ ಮತ್ತು ಗ್ರಾಮೀಣ ಜಿಲ್ಲೆಯ ಉನ್ನತ ಶಿಕ್ಷಣ ಆಕಾಂಕ್ಷೆ ಪ್ರತಿನಿಧಿಸುತ್ತದೆ. ಕೊಡಗು ವಿಶ್ವವಿದ್ಯಾಲಯವು ಒಂಬತ್ತು ಸ್ನಾತಕೋತ್ತರ ವಿಭಾಗಗಳು ಮತ್ತು ಇಪ್ಪತ್ತೈದು ಸಂಯೋಜಿತ ಪದವಿ ಕಾಲೇಜುಗಳನ್ನು ಹೊಂದಿದ್ದು, ಅತ್ಯಲ್ಪ ಅವಧಿಯಲ್ಲಿ ಪಾರದರ್ಶಕ ಆಡಳಿತ, ಪರಿಣಾಮಕಾರಿ ಪರೀಕ್ಷಾ ನಿರ್ವಹಣೆ, ಸಂಪನ್ಮೂಲ ಕ್ರೋಢೀಕರಣ ಮತ್ತು ಆರ್ಥಿಕ ಶಿಸ್ತು ಇತ್ಯಾದಿ ಮಾನದಂಡಗಳಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದೆ. ಕೊಡವ ಸಾಮೂದಾಯಿಕ ಅಸ್ಮಿತೆ: ಕೊಡಗು ಜಿಲ್ಲೆಯಲ್ಲಿ ಹೇರಳವಾಗಿ ಕಂಡುಬರುವ ಕೊಡವ ಸಂಸ್ಕøತಿಯು ಭಾರತದ ಇತರ ಸಂಸ್ಕೃತಿಗಳಿಗಿಂತ ಭಿನ್ನವಾಗಿರುವ ಸಾಂಸ್ಕøತಿಕ ಅಸ್ಮಿತೆಯಾಗಿದ್ದು, ವಿಶಿಷ್ಟ ಸಂಪ್ರದಾಯ ಆಚರಣೆಗಳನ್ನು ಒಳಗೊಂಡಿರುವ ಪಶ್ಚಿಮ ಘಟ್ಟ ಪ್ರದೇಶದ ಸ್ಥಳೀಯ ಕೊಡವ ಸಮುದಾಯಗಳ ಜೀವನ ಕ್ರಮವಾಗಿದೆ. ಕೊಡವ ಸಂಸ್ಕøತಿಯು ಪ್ರಾಚೀನ ಪರಂಪರೆ, ಸಮರ ಕೌಶಲ್ಯ, ಕೃಷಿ, ಪ್ರಕೃತಿ ಮತ್ತು ಕುಟುಂಬ ನೆಲೆಗಟ್ಟಿನೊಂದಿಗೆ ಸಂಯೋಜನೆ ಹೊಂದಿರುವ ಸಾಮೂದಾಯಿಕ ಜೀವನ ಪದ್ಧತಿಯಾಗಿದೆ ಮತ್ತು ಹೇರಳವಾದ ಮೌಖಿಕ ಸಾಹಿತ್ಯವನ್ನು ಹೊಂದಿರುವ ಶ್ರೀಮಂತ ಜಾನಪದ ಸಂಸ್ಕøತಿಯಾಗಿದೆ. ಕೊಡವರು ಮತ್ತು ಇತರ 21 ಕೊಡವ ಸಹ-ಸಾಂಸ್ಕೃತಿಕ ಕೊಡಗು ಜಿಲ್ಲೆಯ ಮೂಲನಿವಾಸಿಗಳಾಗಿದ್ದು, ಸಮಾನ ಸಾಂಸ್ಕೃತಿಕ ಗುಣಧರ್ಮ, ಮೌಲ್ಯಗಳು ಮತ್ತು ಪಾರಿವಾರಿಕ ಸಮನ್ವಯತೆಯನ್ನು ಹೊಂದಿರುವುದು ಕಂಡುಬಂದಿದೆ. ಮೂಲ ಅಧ್ಯಯನದ ಸಂಕೀರ್ಣತೆ ಮತ್ತು ಸವಾಲುಗಳು: ಕೊಡವ ಸಂಸ್ಕøತಿಯ ವೈವಿದ್ಯತೆಗಳು, ಸಾಮಾಜಿಕ ಸ್ಥಿತಿಗತಿಗಳು, ಪಾರಂಪಾರಿಕ ನೆಲೆಗಟ್ಟು, ನಾಗರಿಕತೆ ಮತ್ತು ಜೀವನಪದ್ಧತಿಗಳ ವಿಕಾಸದ ಸಂಕೀರ್ಣತೆ-ಇತ್ಯಾದಿಗಳನ್ನು ಅರಿಯುವ ನಿಟ್ಟಿನಲ್ಲಿ ಸಮಗ್ರ ಅಧ್ಯಯನವನ್ನು ಕುಲಶಾಸ್ತ್ರೀಯ, ಪ್ರಾಥಮಿಕ ಸಂಶೋಧನೆಯ ಮೂಲಕ ಕೈಗೊಳ್ಳುವ ಅಗತ್ಯವಿದೆ. ಅಧ್ಯಯನದ ಪ್ರಮುಖ ಭಾಗವಾಗಿ ಪೂರ್ವೋತಿಹಾಸಿಕ ಮತ್ತು ಐತಿಹಾಸಿಕ ಅಧ್ಯಯನ, ಶಾಸನಗಳು ಮತ್ತು ಸ್ಮಾರಕಗಳು, ಸಮಾಜಶಾಸ್ತ್ರ-ಮಾನವಶಾಸ್ತ್ರ-ಪುರಾತತ್ವ ಮೂಲಗಳು, ವಿವಿಧ ಕೊಡವ ಸಹ-ಸಾಂಸ್ಕøತಿಕ ಪರಿವಾರಗಳ ಕುಲಶಾಸ್ತ್ರ, ಪಾರಿವಾರಿಕ ಜಾನಪದ ಸಂಪ್ರದಾಯಗಳು, ಧಾರ್ಮಿಕ ನೆಲೆಗಟ್ಟು ಮತ್ತು ಸ್ಥಿತ್ಯಂತರ, ಬದಲಾದ ಕಾಲಘಟ್ಟದಲ್ಲಿ ಭಾಷೆ, ಸಂಸ್ಕೃತಿ, ಆರಾಧನೆ, ಆಚರಣೆಗಳ ಸ್ಥಿತ್ಯಂತರ, ಪ್ರಾದೇಶಿಕ ಪರಿಸರ ಸಂಪತ್ತು ಮತ್ತು ಜೀವವೈವಿಧ್ಯ, ಜನಜೀವನ, ಜೀವನೋಪಾಯ, ಆರ್ಥಿಕತೆ ಮತ್ತು ಅಭಿವೃದ್ಧಿಯ ಸವಾಲುಗಳು-ಇತ್ಯಾದಿಗಳ ಆಮೂಲಾಗ್ರ ಅಧ್ಯಯನದ ಅಗತ್ಯವಿದೆ. ಅಲ್ಲದೆ, ಪ್ರಸಕ್ತ ಕಾಲಘಟ್ಟದಲ್ಲಿ ಕೊಡವ ಭಾಷೆ, ಸಂಸ್ಕೃತಿಯ ಅಳಿಯುಳಿವಿನ ಆತಂಕವನ್ನು ಪರಿಹರಿಸುವ ವಿಧಿವಿಧಾನಗಳನ್ನು ಸ್ಥಾಪಿಸುವ ಜರೂರು ಕೂಡ ಇದೆ. ಕೊಡವ ಸಂಸ್ಕೃತಿ ಅಧ್ಯಯನ ಪೀಠ: ಕೊಡವ ಸಂಸ್ಕೃತಿಯನ್ನು ದಾಖಲಿಸುವ ಮತ್ತು ಸಂರಕ್ಷಿಸುವ ಪ್ರಯತ್ನಗಳ ಹೊರತಾಗಿಯೂ, ಹಲವಾರು ವಿಚಾರಗಳಲ್ಲಿ ಮೂಲ ಮತ್ತು ಪೂರಕ ಸಂಶೋಧನೆಗಳ ಕೊರತೆಯಿರುವ ಕಾರಣ ಮತ್ತು ಈ ಕಾರ್ಯದಲ್ಲಿ ಅನಿರ್ದಿಷ್ಟ ವಿಳಂಬವಾಗಿರುವ ಕಾರಣದಿಂದ ಅಧ್ಯಯನಕ್ಕೆ ಮೂಲ ಪುರಾವೆಗಳ ಅಲಭ್ಯತೆ ಮತ್ತು ಪೂರಕ ಕಾಲ ಗತಿಸಿಹೋಗುವ ಆತಂಕವಿರುವ ಹಿನ್ನಲೆಯಲ್ಲಿ ಸಮರೋಪಾದಿಯಲ್ಲಿ ಅಧ್ಯಯನ ಮತ್ತು ಸಂಶೋಧನೆಯನ್ನು ಆರಂಭಿಸಬೇಕಾದ ಅಗತ್ಯತೆಯನ್ನು ಪರಿಗಣಿಸಿರುವ ಕೊಡಗು ವಿಶ್ವವಿದ್ಯಾಲಯವು, ಈ ಪ್ರದೇಶದ ಮೇಲೆ ಕಾರ್ಯ ವ್ಯಾಪ್ತಿ ಹೊಂದಿರುವುದರಿಂದ, ಪ್ರಸ್ತಾಪಿತ ಅಧ್ಯಯನದ ಉದ್ದೇಶಕ್ಕಾಗಿ ಸರ್ಕಾರ ಮತ್ತು ಕೊಡಗಿನ ಪ್ರಾಜ್ಞರು ಮತ್ತು ಅಭಿಮಾನಿಗಳ ಸಹಯೋಗದೊಂದಿಗೆ ವಿಶ್ವವಿದ್ಯಾಲಯದಲ್ಲಿ ‘ಕೊಡವ ಸಂಸ್ಕøತಿ ಅಧ್ಯಯನ ಪೀಠ’ ಎಂಬ ದತ್ತಿ ಪೀಠವನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 2000 ರ ಅಡಿಯಲ್ಲಿ ಪೀಠಕ್ಕೆ ಶಾಸನಬದ್ಧ ಆಧಾರವನ್ನು ನೀಡುವ ಸಲುವಾಗಿ ಪೂರಕ ಅಧಿನಿಯಮವನ್ನು ಸಿದ್ದಪಡಿಸಿ ಸರ್ಕಾರದ ಅನುಮೋದನೆಗಾಗಿ ಸೂಕ್ತ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಈ ಅಧ್ಯಯನ ಪೀಠವು ಶೈಕ್ಷಣಿಕ ಜಗತ್ತು ಮತ್ತು ಕೊಡವ ಸಮುದಾಯದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ, ಸಂವಾದವನ್ನು ಸುಲಭಗೊಳಿಸುತ್ತದೆ. ಸಾಂಸ್ಕøತಿಕ ವಿನಿಮಯವನ್ನು ಉತ್ತೇಜಿಸುತ್ತದೆ ಮತ್ತು ಸಮುದಾಯದ ಸದಸ್ಯರು ತಮ್ಮ ಪರಂಪರೆಯನ್ನು ಸಂರಕ್ಷಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸುತ್ತದೆ. ಅಧ್ಯಯನ ಪೀಠವು ಸಂಶೋಧನೆ, ದಾಖಲೀಕರಣ, ಪ್ರಕಟಣೆ ಮತ್ತು ಶೈಕ್ಷಣಿಕ ತರಬೇತಿ ಕಾರ್ಯಕ್ರಮಗಳನ್ನು ಸುಗಮಗೊಳಿಸುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ಕೊಡವ ಸಂಪ್ರದಾಯಗಳ ಪ್ರಾಮುಖ್ಯತೆಯನ್ನು ಸಾದರಪಡಿಸುವಲ್ಲಿ ಪಾಲುದಾರಿಕೆಯನ್ನು ವಹಿಸಿಕೊಳ್ಳುತ್ತದೆ. ಸಂಶೋಧನೆ ಮತ್ತು ಅಧ್ಯಯನದ ರೂಪುರೇμÉ: ಸಂಶೋಧನಾ ದೃಷ್ಟಿಕೋನದಿಂದ ಆಮೂಲಾಗ್ರ ಅಧ್ಯಯನಕ್ಕಾಗಿ ಕೊಡವ ಸಂಸ್ಕøತಿಯ ವಿವಿಧ ಆಯಾಮಗಳ ಗುರುತಿಸಲಾಗಿದೆ.
ಇತಿಹಾಸ ಮತ್ತು ಮೂಲ, ಸಂಸ್ಕೃತಿ, ಪರಂಪರೆ, ಸಂಪ್ರದಾಯ ಮತ್ತು ಸಮುದಾಯಗಳು, ಧಾರ್ಮಿಕ, ಆಧ್ಯಾತ್ಮಿಕ ನಂಬಿಕೆಗಳು ಮತ್ತು ವಿಧಿ-ವಿಧಾನಗಳು, ಸಾಮಾಜಿಕ ವ್ಯವಸ್ಥೆ ಮತ್ತು ಜೀವನಕ್ರಮ, ಹಬ್ಬಗಳು ಮತ್ತು ಆಚರಣೆಗಳು, ಜಾನಪದ, ಕಲೆ, ಕ್ರೀಡೆ ಮತ್ತು ಸಾಹಿತ್ಯ, ಶೌರ್ಯ, ಸಮರ ಕೌಶಲ್ಯ ಮತ್ತು ಸೈನಿಕ ಪರಂಪರೆ, ಭಾಷೆ ಮತ್ತು ಸಂವರ್ಧನೆ, ಉಡುಗೆ ಮತ್ತು ಆಹಾರ ಪದ್ಧತಿ, ಪರಿಸರ ಮತ್ತು ಕೃಷಿ, ಸವಾಲುಗಳು ಮತ್ತು ಪರಿವರ್ತನೆ, ಬದಲಾವಣೆ ಮತ್ತು ಆಧುನಿಕತೆ. ಪೀಠದ ಧ್ಯೇಯ ಸೂಚಕಗಳು; ಕೊಡವ ಸಂಸ್ಕøತಿ, ಪರಂಪರೆ ಮತ್ತು ಸಂಪ್ರದಾಯಗಳ ಆಮೂಲಾಗ್ರ ಅಧ್ಯಯನ, ಸಂಶೋಧನೆ, ದಾಖಲೀಕರಣ ಮತ್ತು ಪ್ರಚಾರದ ಮೂಲಕ ಶೈಕ್ಷಣಿಕ ಜಗತ್ತು ಮತ್ತು ವಿಸ್ತøತ ಕೊಡವ ಪರಿವಾರಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು.
ಕೊಡವ ಸಂಸ್ಕøತಿಯ ಸಂಪನ್ನತೆ, ಉತ್ಥಾನ, ಸಂರಕ್ಷಣೆಯ ಶಕ್ತಿ ಕೇಂದ್ರವಾಗಿ ಕೊಡವ ಸಂಸ್ಕೃತಿಯ ಪ್ರಸ್ತುತತೆ ಮತ್ತು ನಿರಂತರತೆಗೆ ಬೌದ್ಧಿಕ ಸಂಪನ್ಮೂಲ ಒದಗಿಸುವುದು ಮತ್ತು ಯುವ/ಮುಂದಿನ ಪೀಳಿಗೆಯನ್ನು ಸಂಸ್ಕೃತಿಯ ಬೇರಿನೊಂದಿಗೆ ಬೆಳೆಸುವಲ್ಲಿ ಜ್ಞಾನದ ಪಾಲುದಾರಿಕೆ. ಪೀಠದ ಕಾರ್ಯಯೋಜನೆಗಳು: ಕೊಡವ ಸಂಸ್ಕೃತಿ, ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳ ಸಮಗ್ರ ಸಂಶೋಧನೆ ಮತ್ತು ದಾಖಲೀಕರಣ. ಕೊಡವ ಮೂಲ, ಸಂಸ್ಕøತಿ, ಪರಂಪರೆ, ಶಾಸನಗಳು, ಸ್ಮಾರಕಗಳು, ಸಂಪ್ರದಾಯಗಳ ಅಸ್ತಿತ್ವ, ವಿಕಾಸ, ಸ್ಥಿತ್ಯಂತರಗಳ, ಪ್ರಾಥಮಿಕ ಸಂಶೋಧನೆ ಮತ್ತು ವಿಶ್ಲೇಷಣೆಗೆ ಸೈದಾಂತಿಕ ಕಾಯಕಲ್ಪ ಮತ್ತು ವಿಧಿ-ವಿಧಾನಗಳನ್ನು ಸಂರಚನೆ. ಕೊಡವ ಸಮುದಾಯ ಮತ್ತು ಇತರ ಸಹ-ಸಾಂಸ್ಕøತಿಕ ಪಾರಿವಾರಿಕ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನಗಳಿಗೆ ಆದ್ಯತೆ. ಕೊಡವ ಭಾಷೆ ಮತ್ತು ದ್ರಾವಿಡ/ ದಕ್ಷಿಣ ಭಾರತೀಯ ಭಾಷೆಗಳ ತುಲನಾತ್ಮಕ ಅಧ್ಯಯನಕ್ಕೆ ಉತ್ತೇಜನ ಮತ್ತು ಕೊಡವ ಭಾμÉಗೆ ಆಂಗ್ಲ ಸೇರಿದಂತೆ ಈ ಭಾಷೆಗಳ ಪ್ರಮುಖ ಕೃತಿಗಳ ಅನುವಾದ/ ಭಾμÁಂತರ.
ಕೊಡವ ಭಾಷೆಗೆ ನಾಡಿನ ಆಡಳಿತ ಭಾಷೆಯ ಮಾನ್ಯತೆಗೆ, ಜೀವಂತ ಭಾಷೆಯ ಸಕ್ರಿಯತೆಗೆ ಜ್ಞಾನದ ಪಾಲುದಾರಿಕೆ. ಕೊಡವ ಭಾμÉಗೆ ಸಂವಿಧಾನದ ಎಂಟನೆಯ ಪರಿಚ್ಛೇಧದಲ್ಲಿ ಸಾಂವಿಧಾನಿಕ ಮಾನ್ಯತೆ ಪಡೆಯಲು ಜ್ಞಾನದ ಪಾಲುದಾರಿಕೆ. ಜಾಗತಿಕ ಮಟ್ಟದ ಸಂಶೋಧನಾ ಚಟುವಟಿಕೆಗಳು, ಪ್ರಕಟಣೆಗಳು ಮತ್ತು ಜನಸಂಪರ್ಕ ಕಾರ್ಯಕ್ರಮಗಳ ಮೂಲಕ ಕೊಡವ ಸಂಸ್ಕøತಿಯ ಪ್ರಸ್ತುತತೆ ಮತ್ತು ನಿರಂತರತೆಗೆ ಸಹಯೋಗ.
ಕೊಡವ ಸಂಸ್ಕøತಿಯನ್ನು ಶಿಕ್ಷಣ, ಅಧ್ಯಯನ ಮತ್ತು ನಿತ್ಯಜೀವನದಲ್ಲಿ ಸಂಯೋಜಿಸುವುದು ಮತ್ತು ತನ್ಮೂಲಕ ಯುವ ಮತ್ತು ಮುಂದಿನ ಪೀಳಿಗೆಯಲ್ಲಿ ಸಂಸ್ಕøತಿಯ ಬೇರಿನೊಂದಿಗೆ ಸಂಪರ್ಕವನ್ನು ಬೆಳೆಸುವಲ್ಲಿ ಪಾಲುದಾರಿಕೆ. ಸಾಹಿತ್ಯ ಪಠ್ಯಗಳ ಗ್ರಂಥಾಲಯ ಮತ್ತು ಡಿಜಿಟಲ್ ಸಂಗ್ರಹವನ್ನು (ಆರ್ಕೈವ್) ಸ್ಥಾಪಿಸುವುದು. ಆಡಳಿತಾತ್ಮಕ ರಚನೆ: ಸಂಯೋಜಕರು: ಪೀಠದ ಕಾರ್ಯ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ವಿಶ್ವವಿದ್ಯಾಲಯದ ವಿಭಾಗಗಳ ಸೇವಾ ನಿರತ ಶಿಕ್ಷಕರನ್ನು ನಿಯಮಾನುಸಾರ ನೇಮಿಸಲಾಗುವುದು. ಸಂಶೋಧನಾ ಸಹಾಯಕರು: ಪೀಠದ ಉದ್ದೇಶಗಳಿಗೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳನ್ನು ನಿರ್ವಹಿಸಲು ಪರಿಣತ ಸಂಶೋಧನಾ ಸಹಾಯಕರ ನೇಮಕಾತಿ. ಮಾರ್ಗದರ್ಶನ ಮತ್ತು ಪರಿಶೀಲನಾ ಸಮಿತಿ: ನೀತಿ-ನಿಯಮಗಳ ಅನುμÁ್ಠನಕ್ಕೆ ಮಾರ್ಗದರ್ಶನ ನೀಡಲು ಮತ್ತು ಪೀಠದ ಕೆಲಸದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ಕುಲಪತಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ಇರಲಿದೆ. ಇದು ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತರಿಪಡಿಸುತ್ತದೆ. ಶಾಶ್ವತ ದತ್ತಿ ನಿಧಿ: ಕೊಡಗು ವಿಶ್ವವಿದ್ಯಾಲಯವು ಕೊಡವ ಸಂಸ್ಕøತಿ ಅಧ್ಯಯನ ಪೀಠಕ್ಕಾಗಿ 10 ಕೋಟಿ ರೂಪಾಯಿಗಳ ಶಾಶ್ವತ ದತ್ತಿ ನಿಧಿ ಸ್ಥಾಪಿಸುವ ಗುರಿ ಹೊಂದಿದೆ. ಪೀಠದ ದತ್ತಿ ನಿಧಿಯ ಮೂಲ ಮೊತ್ತವನ್ನು ಖರ್ಚು ಮಾಡದೆ, ಆದ್ದರಿಂದ ಬರುವ ಸಂಚಿತ ಬಡ್ಡಿ ಮತ್ತು ಇತರ ವಾರ್ಷಿಕ ಅನುದಾನಗಳನ್ನು ಮಾತ್ರ ಪೀಠದ ದೈನಂದಿನ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಇದು ಪೀಠವು ದೀರ್ಘಕಾಲದವರೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಿರಲು ಸಹಾಯ ಮಾಡುತ್ತದೆ. ಸಂಶೋಧನೆ ಮತ್ತು ಪ್ರಕಟಣೆ, ಪುಸ್ತಕ ಪ್ರಕಟಣೆ, ಸಂಶೋಧನಾ ಸಹಾಯಕರಿಗೆ ವಿದ್ಯಾರ್ಥಿ ವೇತನ/ ಸಂಶೋಧನಾ ಭತ್ಯೆ, ಅನುವಾದ ಕಾರ್ಯ, ಸೆಮಿನಾರ್ ಮತ್ತು ಕಾರ್ಯಾಗಾರ, ಸಾಂಸ್ಕøತಿಕ ಉತ್ಸವಗಳು, ಉಪನ್ಯಾಸ ಮಾಲೆ, ಡಿಜಿಟಲ್ ಆರ್ಕೈವ್, ಗ್ರಂಥಾಲಯ, ಕ್ಷೇತ್ರ ಕಾರ್ಯ, ಡಿಜಿಟಲ್ ಸಂಪನ್ಮೂಲ, ಜ್ಞಾನದ ಪಾಲುದಾರಿಕೆ, ದೈನಂದಿನ ಕಚೇರಿ ನಿರ್ವಹಣೆ ನಿಯಮಿತವಾಗಿ ಬಳಸಿಕೊಳ್ಳಲಾಗುತ್ತದೆ. ನಿಧಿಯ ಕ್ರೋಢೀಕರಣ: ಸರ್ಕಾರದಿಂದ ನಿಧಿಯ ಸ್ಥಾಪನೆಗೆ ಅನುದಾನದ ನಿರೀಕ್ಷೆ, ದಾನಿಗಳಿಗೆ ಅವಕಾಶ: ವೈಯಕ್ತಿಕವಾಗಿ ಅಥವಾ ಸಂಸ್ಥೆಗಳ ಮೂಲಕ ಈ ನಿಧಿಗೆ ದೇಣಿಗೆ ನೀಡಬಹುದು.
ಪ್ರಾಯೋಜಕತ್ವ: ನಿರ್ದಿಷ್ಟ ಸಂಶೋಧನಾ ಯೋಜನೆಗಳಿಗೆ ಅಥವಾ ಪುಸ್ತಕ ಪ್ರಕಟಣೆಗೆ ಪ್ರಾಯೋಜಕತ್ವ ನೀಡಲು ಮುಕ್ತ ಅವಕಾಶವಿದೆ.
ಪಾರದರ್ಶಕತೆ: ಸರಕಾರ/ವಿಶ್ವವಿದ್ಯಾಲಯದ ನಿಯಮಾವಳಿಯಂತೆ ಹಣಕಾಸಿನ ಲೆಕ್ಕಪತ್ರ ಪಾರದರ್ಶಕವಾಗಿರುತ್ತದೆ. ದಾನಿಗಳಿಗೆ ಸ್ಮರಣೀಯ ಪುರಸ್ಕಾರಗಳು: ಮಹಾ ಪೆÇೀಷಕರು (1 ಕೋಟಿ ಮತ್ತು ಅದಕ್ಕಿಂತ ಹೆಚ್ಚು), ಪೆÇೀಷಕರು (₹50 ಲಕ್ಷದಿಂದ ₹1 ಕೋಟಿ), ಸಹ ಪೆÇೀಷಕರು (₹25 ಲಕ್ಷದಿಂದ ₹50 ಲಕ್ಷ), ವಿಶೇಷ ದಾನಿಗಳು (₹10 ಲಕ್ಷದಿಂದ ₹25 ಲಕ್ಷ ), ದತ್ತಿ ದಾನಿಗಳು (₹1 ಲಕ್ಷದಿಂದ ₹10 ಲಕ್ಷ), ಹಿತೈಷಿಗಳು (₹25 ಸಾವಿರದಿಂದ ₹1 ಲಕ್ಷ) ಅಧ್ಯಯನದ ಪ್ರಮುಖ ಕ್ಷೇತ್ರಗಳ (ಇತಿಹಾಸ ಮತ್ತು ಕುಲಶಾಸ್ತ್ರೀಯ ಅಧ್ಯಯನ, ಭಾಷೆ ಸಂರಕ್ಷಣೆ-ಸಂವರ್ಧನೆ, ಪರಂಪರೆ ಮತ್ತು ಸಾಂಪ್ರದಾಯಿಕ ಜೀವನಶೈಲಿ ಅಧ್ಯಯನ, ಸಮುದಾಯದ ಸಬಲೀಕರಣ ಇತ್ಯಾದಿ) ಶೀರ್ಷಿಕೆಗಳಿಗೆ ದಾನಿಗಳ ಹೆಸರನ್ನು ಜೋಡಿಸಲಾಗುವುದು, ನಿರ್ದಿಷ್ಟ ಸಂಶೋಧನಾ ವಿದ್ಯಾರ್ಥಿ ವೇತನವನ್ನು ದಾನಿಗಳ ಹೆಸರನ್ನು ಸೇರಿಸಲಾಗುವುದು. ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ದಾನಿ ಕುಟುಂಬಗಳ ಅಥವಾ ‘ಓಕ್ಕ’ಗಳ ಹೆಸರುಗಳನ್ನು ದಾಖಲಿಸಲಾಗುವುದು. ಕೊಡಗಿನ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಮತ್ತು ಮುತ್ಸದ್ದಿಗಳು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕೊಡವ ಸಮಾಜಗಳು, ಕೊಡವ ಸಹ ಪಾರಿವಾರಿಕ ಸಮಾಜಗಳು, ಸಾಂಸ್ಕø್ಕತಿಕ ಮತ್ತು ಸಾಮಾಜಿಕ ಸಂಸ್ಥೆಗಳು, ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದ ಗಣ್ಯರು, ನಿವೃತ್ತ ಸೇನಾಧಿಕಾರಿಗಳು, ಕ್ರೀಡಾ ಸಾಧಕರು, ಸ್ಥಳೀಯ ಪತ್ರಿಕೆ ಮತ್ತು ಮಾಧ್ಯಮದ ಪ್ರಮುಖರು, ಬುದ್ಧಿಜೀವಿಗಳು ಹಾಗೂ ಲೇಖಕರು ಮತ್ತು ಸಮುದಾಯದ ಇತರ ಪ್ರಮುಖರು, ಕೊಡಗು ವಿಶ್ವವಿದ್ಯಾಲಯದಲ್ಲಿ ‘ಕೊಡವ ಸಂಸ್ಕøತಿ ಅಧ್ಯಯನ ಪೀಠ’ದ ಸ್ಥಾಪನೆಗೆ ಸಹಯೋಗ ಮತ್ತು ಅಗತ್ಯ ಬೆಂಬಲ ನೀಡುವಂತೆ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅವರು ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ನಾಪೋಕ್ಲು ಹಿಂದೂ ಮಲಯಾಳಿ ಸಂಘದಿಂದ ವಿಷು ಹಬ್ಬ ಸಂಭ್ರಮ*

ಏಪ್ರಿಲ್ 16, 2026

*ಮೈತಾಡಿ ಗ್ರಾಮದಲ್ಲಿ ವಿಶ್ವ ಕಲಾ ದಿನ ಆಚರಣೆ*

ಏಪ್ರಿಲ್ 16, 2026

*ಕೆದಮುಳ್ಳೂರಿನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಹರಿಸೇವೆ ಹಾಗೂ 101 ಕೋಲ*

ಏಪ್ರಿಲ್ 16, 2026

*ಮೈತಾಡಿ ಗ್ರಾಮದಲ್ಲಿ ವಿಶ್ವ ಕಲಾ ದಿನ ಆಚರಣೆ*

ಏಪ್ರಿಲ್ 16, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಏ.16 NEWS DESK : ಮೈತಾಡಿ ಗ್ರಾಮದ ಐಚೆಟ್ಟಿರ ಐನ್‍ಮನೆಯ ಅಂಗಳದಲ್ಲಿ ವಿಶ್ವ ಕಲಾದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಚಿತ್ರಕಲಾವಿದ…

*ಕೆದಮುಳ್ಳೂರಿನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಹರಿಸೇವೆ ಹಾಗೂ 101 ಕೋಲ*

ಏಪ್ರಿಲ್ 16, 2026

*ಏ.18 ಮತ್ತು 19 ರಂದು ಅರೆಭಾಷೆ ಗೌಡ ಕ್ರೀಡಾ ಹಬ್ಬದ ಸಂಭ್ರಮ : ವಿವಿಧ ವಿಭಾಗಗಳಲ್ಲಿ ಫುಟ್ಬಾಲ್-ಮಹಿಳೆಯರ ಹಗ್ಗಜಗ್ಗಾಟ*

ಏಪ್ರಿಲ್ 16, 2026

*ಏ.17 ರಿಂದ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಆರಂಭ*

ಏಪ್ರಿಲ್ 16, 2026

*ಶುಭ ಅಕ್ಷಯ ತೃತೀಯ : ಕುಶಾಲನಗರದ ಜಿ.ಆಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಚಿನ್ನ ಖರೀದಿಗೆ ಶುಭ ಸಮಯ : ಆಕರ್ಷಕ ಕೊಡುಗೆಗಳು ನಿಮಗಾಗಿ*

ಏಪ್ರಿಲ್ 16, 2026

*ಏ.18 ಮತ್ತು 19 ರಂದು ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವ : ಸಾಧಕರಿಗೆ ಸನ್ಮಾನ*

ಏಪ್ರಿಲ್ 16, 2026

*ಕೊಡಗು ವಿಶ್ವವಿದ್ಯಾಲಯದಲ್ಲಿ “ಕೊಡವ ಸಂಸ್ಕೃತಿ ಅಧ್ಯಯನ ಪೀಠ”ದ ಸ್ಥಾಪನೆ : ಸಂಶೋಧನೆ ಸಂರಕ್ಷಣೆ-ಸಂವರ್ಧನೆಗೆ ವಿಶೇಷ ಕಾರ್ಯಯೋಜನೆ : ಅಶೋಕ ಸಂಗಪ್ಪ ಆಲೂರ*

ಏಪ್ರಿಲ್ 16, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.16 ರಂದು ಗೆಲುವು ಸಾಧಿಸಿದ ತಂಡಗಳು*

ಏಪ್ರಿಲ್ 16, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.17 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 16, 2026

*ನಮ್ಮ ಗಣತಿ ನಮ್ಮ ಅಭಿವೃದ್ಧಿ ಮನೆ ಮನೆ ಗಣತಿ ಕಾರ್ಯ ಆರಂಭ*

ಏಪ್ರಿಲ್ 16, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.