
ಮಡಿಕೇರಿ ಏ.16 NEWS DESK : ಮಡಿಕೇರಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಏ. 18 ಮತ್ತು 19 ರಂದು ನಗರದ ಗಾಂಧಿ ಮೈದಾನದಲ್ಲಿ “ಅರೆಭಾಭಾಷೆ ಗೌಡ ಕ್ರೀಡಾ ಹಬ್ಬ” ನಡೆಯಲಿದೆ ಎಂದು ಅಕಾಡೆಮಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿ ಪದಾಧಿಕಾರಿ ಪೊನ್ನಚ್ಚನ ಶ್ರೀನಿವಾಸ್, ಕ್ರೀಡಾ ಹಬ್ಬಕ್ಕೆ ಬಿಡ್ಡಿಂಗ್ ಮೂಲಕ ಆಟಗಾರರನ್ನು ವಿವಿಧ ತಂಡಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಕ್ರೀಡಾ ಹಬ್ಬದಲ್ಲಿ ಪ್ರಮುಖವಾಗಿ ಫುಟ್ಬಾಲ್ ಚಾಂಪಿಯನ್ ಲೀಗ್, 45 ವರ್ಷ ಮೇಲ್ಪಟ್ಟವರ ಲೆಜೆಂಡ್ಸ್ ಫುಟ್ಬಾಲ್ ಚಾಂಪಿಯನ್ ಟ್ರೋಫಿ, 16ವರ್ಷ ಒಳಗಿನವರ ಜೂನಿಯರ್ ಫುಟ್ಬಾಲ್ ಚಾಂಪಿಯನ್ ಟ್ರೋಫಿ, ಬಾಲಕಿಯರ ಫುಟ್ಬಾಲ್ ಚಾಂಪಿಯನ್ ಟ್ರೋಫಿ ಸ್ಪರ್ಧೆಗಳು ಬೆಳಿಗ್ಗಿನಿಂದ ಆರಂಭವಾಗಲಿದ್ದು, ಹೊನಲು ಬೆಳಕಿನಲ್ಲಿಯೂ ಪಂದ್ಯ ಮುಂದುವರೆಯಲಿದೆ. ಮಹಿಳಾ ಹಗ್ಗಜಗ್ಗಾಟ ಸ್ಪರ್ಧೆಯೂ ನಡೆಯಲಿದೆ. ವಿವಿಧ ಸ್ಪರ್ಧೆಗಳಲ್ಲಿ ಒಟ್ಟು 29 ತಂಡಗಳು ಪಾಲ್ಗೊಳ್ಳಲಿವೆಯೆಂದು ತಿಳಿಸಿದರು. ಏ.19 ರಂದು ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಅಂದು ನಡೆಯಲಿರುವ ಸಮಾರೋಪದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಸೇರಿದಂತೆ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆಂದಉ ಮಾಹಿತಿಯನ್ನಿತ್ತರು. ನರದಲ್ಲಿ ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಕುಡೆಕಲ್ಲು ಸಂತೋಷ, ಆರ್.ಆರ್. ಮನೋಜ್, ಕುಕ್ಕೇರ ನಯನ ಹಾಜರಿದ್ದರು.









