
ವಿರಾಜಪೇಟೆ ಏ.16 NEWS DESK : ಮೈತಾಡಿ ಗ್ರಾಮದ ಐಚೆಟ್ಟಿರ ಐನ್‍ಮನೆಯ ಅಂಗಳದಲ್ಲಿ ವಿಶ್ವ ಕಲಾದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಚಿತ್ರಕಲಾವಿದ ಬಿ.ಆರ್.ಸತೀಶ್ ಅವರು ದೈವ ಕೋಲದ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿಶ್ವದ ಶ್ರೇಷ್ಠ ಚಿತ್ರ ಕಲಾವಿದರಲ್ಲಿ ಒಬ್ಬರಾದ ಲಿಯೊನಾರ್ಡ್ ಡಾವಿನ್ಸಿಯ ಹುಟ್ಟು ಹಬ್ಬದ ಗೌರವಾರ್ಥವಾಗಿ ಆ ದಿನವನ್ನು ಎಲ್ಲಾ ಚಿತ್ರಕಲಾವಿದರು ಸೇರಿ ವಿಶ್ವ ಕಲಾದಿನ ಎಂದು ಘೋಷಿಸಲಾಯಿತು. ಕಲೆಯ ಪ್ರಾಮುಖ್ಯತೆಯು ಇಡೀ ವಿಶ್ವದ ಜನರಿಗೂ, ಎಲ್ಲಾ ವಯೋಮಾನದವರಿಗೂ, ಸರ್ವಜನಾಂಗದವರಿಗೂ ತಲುಪಿಸುವ ಪ್ರಯತ್ನವಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ ವಿಶ್ವ ಕಲಾದಿನವನ್ನು ಐಚೆಟ್ಟೀರ ಕುಟುಂಬದವರು ಐನ್‍ಮನೆಯಲ್ಲಿ ನಡೆಸಲು ಅವಕಾಶ ಕಲ್ಪಿಸಿದ್ದು, ಕುಟುಂಬದ ಸದಸ್ಯರಿಗೆ ವಿಶ್ವ ಕಲಾದಿನ ಶುಭಾಶಯಗಳನ್ನು ತಿಳಿಸಿ ಬಿಡಿಸಿದ ದೈವಕೊಲದ ಚಿತ್ರವನ್ನು ಐಚೆಟ್ಟೀರ ಕುಟುಂಬಸ್ಥರಿಗೆ ನೀಡಿದರು. ಈ ಸಂದರ್ಭ ಐಚೆಟಿರ ಕುಟುಂಬದ ಸದಸ್ಯರು ಹಾಜರಿದ್ದರು.









