Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಗೌಡ ಜನಾಂಗ ಬಾಂಧವರಿಗಾಗಿ 27ನೇ ವರ್ಷದ ಕ್ರೀಡಾಕೂಟ “ಕುಟುಂಬ 2026” : ಮೇ 1ರಿಂದ ಆರಂಭ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಗೌಡ ಜನಾಂಗ ಬಾಂಧವರಿಗಾಗಿ 27ನೇ ವರ್ಷದ ಕ್ರೀಡಾಕೂಟ “ಕುಟುಂಬ 2026” : ಮೇ 1ರಿಂದ ಆರಂಭ

ಏಪ್ರಿಲ್ 17, 20264 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ NEWS DESK ಏ.17 : ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ 27ನೇ ವರ್ಷದ ಕ್ರೀಡಾಕೂಟ “ಕುಟುಂಬ 2026” ಇದೇ ಮೇ 1ರಿಂದ 16ರ ವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಗೌಡ ಯುವ ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ 2000ನೇ ಇಸವಿಯಲ್ಲಿ ಕೆದಂಬಾಡಿ ಕುಟುಂಬಸ್ಥರ ನೇತೃತ್ವದಲ್ಲಿ ಆರಂಭವಾದ ಗೌಡ ಜನಾಂಗದ ಕ್ರೀಡಾಕೂಟ ನಂತರದ ವರ್ಷಗಳಲ್ಲಿ ತುಮ್ತಜೆ ಗಣೇಶ್ ಅವರ ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ಸಾಗಿ ಬಂತು. ನಂತರ 2013ನೇ ಇಸವಿಯಿಂದ ಕೊಡಗು ಗೌಡ ಯುವ ವೇದಿಕೆ ಗೌಡ ಸಮುದಾಯಕ್ಕಾಗಿ ಈ ಕ್ರೀಡಾಕೂಟವನ್ನು ಮುಂದುವರಿಸುತ್ತಾ ಬಂದಿದೆ ಎಂದರು. ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ ಜಿಪಿಎಲ್ ಗೌಡ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಅತ್ಯಂತ ಯಶಸ್ಸನ್ನು ಕಂಡಿದೆ. ಕೊಡಗು ಗೌಡ ಯುವ ವೇದಿಕೆಯ ನೂತನ ಸಮಿತಿ ಬಾಳಾಡಿ ಮನೋಜ್ ಅವರ ಅಧ್ಯಕ್ಷತೆಯಲ್ಲಿ ಜನಾಂಗದ ಮಹತ್ವಾಕಾಂಕ್ಷೆಯ “ಗೌಡ ಒಲಿಂಪಿಕ್ಸ್ 2027” ರ ತಯಾರಿಯ ಪೂರ್ವಭಾವಿಯಾಗಿ ಈ ಬಾರಿ 2026 ರ ಕ್ರೀಡಾಕೂಟ ನಡೆಯಲಿದೆ. ವಿಶೇಷವಾಗಿ ಮೇ 1ರಂದು ಗಾಳಿಬೀಡಿನಲ್ಲಿ ಕ್ರೀಡಾಕೂಟವನ್ನು ಉದ್ಘಾಟಿಸಲಾಗುವುದು, ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.ಮೊದಲಿಗೆ ಒಲಿಂಪಿಕ್ ನ ಸಾಂಪ್ರದಾಯಿಕ ಕ್ರೀಡೆಯಾದ ಕ್ರಾಸ್ ಕಂಟ್ರಿ ಮೂಲಕ ಈ ವರ್ಷದ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಮಕ್ಕಳಿಗೆ 3 ಕಿ.ಮೀ ಓಟ, ಮಹಿಳೆಯರಿಗೆ 5 ಕಿ.ಮೀ ಓಟ ಹಾಗೂ ಪುರುಷರಿಗೆ 8 ಕಿಲೋ ಮೀಟರ್ ಓಟವನ್ನು ಹಮ್ಮಿಕೊಳ್ಳಲಾಗಿದೆ. ಇದರ ವಿಶೇಷ ಏನೆಂದರೆ ಈ ಎಂಟು ಕಿಲೋ ಮೀಟರ್ ಓಟದಲ್ಲಿ ಗಾಳಿಬೀಡಿನ ಗೌಡ ಸಮುದಾಯದ 8 ಐನ್‌ಮನೆಗಳಾದ ಕೋಚನ, ಪೂಜಾರಿರ, ಉಡುದೋಳಿ, ಕೋಳುಮುಡಿಯನ, ಕರ್ಕರನ, ಕೊಂಬಾರನ, ಯಾಲದಾಳು, ಅಚ್ಚಪಟ್ಟಿರ ಕುಟುಂಬದ ಐನ್‌ಮನೆಗಳ ಮೂಲಕ ಸಾಗುವಂತೆ ದಾರಿಯನ್ನು ಸಜ್ಜುಗೊಳಿಸಲಾಗಿದೆ. ನಂತರ ಗೌಡ ಜನಾಂಗದ ಸಾಂಪ್ರದಾಯಿಕ ಕ್ರೀಡೆಯಾದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. 12 ಬೋರ್, 0.22 ರೈಫಲ್ ಹಾಗೂ ಏರ್ ರೈಫಲ್ ನ ಸ್ಪರ್ಧೆ ನಡೆಯಲಿದೆ. ಅದಾದ ನಂತರ ಮೇ 2ನೇ ತಾರೀಖಿನಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಕುಟುಂಬವಾರು ಸೂಪರ್ 9 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಆರಂಭವಾಗಲಿದೆ. ದಾಖಲೆ ಮಟ್ಟದಲ್ಲಿ ಅಂದರೆ 250 ರಿಂದ 300 ಕುಟುಂಬಗಳು ಭಾಗವಹಿಸುವ ನಿರೀಕ್ಷೆಯಿದೆ. ಮೇ 7ನೇ ತಾರೀಖಿನಿಂದ ಗೌಡ ಜನಾಂಗದ ಪ್ರಪ್ರಥಮ ಹಾಕಿ ಪಂದ್ಯಾಟ ಕುಟುಂಬವಾರು ರಿಂಕ್ ಹಾಕಿ ಆರಂಭವಾಗಲಿದೆ. ರಿಂಕ್ ಹಾಕಿ ಐದು ಜನರು ಆಡುವಂತಹ ಕ್ರೀಡೆಯಾಗಿದೆ. ಪ್ರಥಮ ವರ್ಷದಲ್ಲಿ ಬಹಳಷ್ಟು ಕುಟುಂಬಗಳು ಭಾಗವಹಿಸುವ ನಿರೀಕ್ಷೆಯಲ್ಲಿದ್ದೇವೆ. ಮೇ 15 ಮತ್ತು 16ರಂದು ಇನ್ನೂ ಬಹಳಷ್ಟು ಇತರ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗುವುದು. ಅಲ್ಲದೆ ಮೇ 16 ರಂದು ಕೇರಂ ಪಂದ್ಯಾಟ ಕೂಡ ನಡೆಯಲಿದೆ.
ಒಟ್ಟಿನಲ್ಲಿ 2027ರ ಮೊದಲ ಗೌಡ ಒಲಿಂಪಿಕ್ ನ ಪ್ರಾಯೋಗಿಕ ತಯಾರಿಯಾಗಿ 2026ನೇ ಕ್ರೀಡಾಕೂಟ ಹೊರಹೊಮ್ಮಲಿದೆ. 2027ರಲ್ಲಿ ಇನ್ನೂ ಹೆಚ್ಚಿನ ಕ್ರೀಡಾಕೂಟಗಳನ್ನು ಒಳಗೊಂಡು ಮೊದಲ “ಗೌಡ ಒಲಿಂಪಿಕ್ ಕ್ರೀಡಾಕೂಟ”ವನ್ನು ಪ್ರಸ್ತುತ ಪಡಿಸಲಾಗುವುದು. ಮೂರು ವರ್ಷ ಯಶಸ್ಸನ್ನು ಕಂಡಿರುವ ಜಿಪಿಎಲ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಅನ್ನು ಈ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಜನಾಂಗ ಬಾಂಧವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.ಸಾಂಸ್ಕೃತಿಕÀ ಕಲರವಕ್ಕಾಗಿ ಒಂದು ಹೊಸ ಪ್ರಯತ್ನವಾಗಿ “ಮಿಸ್ಟರ್ ಗೌಡ ಮತ್ತು ಮಿಸ್ ಗೌಡತಿ” ಎಂಬ ಅದ್ಭುತ ಕಾರ್ಯಕ್ರಮವನ್ನು ಮೇ 15 ಮತ್ತು 16 ರಂದು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮ ಪುರುಷರು ಹಾಗೂ ಮಹಿಳೆಯರು ವೈಯಕ್ತಿಕವಾಗಿ ಭಾಗವಹಿಸಬಹುದಾದ ಕಾರ್ಯಕ್ರಮವಾಗಿದೆ. ಇದು ಅಥ್ಲೆಟಿಸಂ, ಗ್ಲಾಮರ್, ಉಡುಪು, ಭಾಷೆ, ಆಚಾರ ವಿಚಾರ, ಜನಾಂಗದ ಇತಿಹಾಸ ಮತ್ತು ತಂತ್ರಜ್ಞಾನ ಗಳನ್ನು ಒಳಗೊಂಡ ಪೈಪೋಟಿಯಾಗಿರುತ್ತದೆ.
*ಬಹುಮಾನ* ಕುಟುಂಬವಾರು ಕ್ರಿಕೆಟ್ ಪಂದ್ಯಾಟಕ್ಕೆ ಆಕರ್ಷಕ ನಗದು ಹಾಗೂ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು. ರಿಂಕ್ ಹಾಕಿ ಪಂದ್ಯಾಟಕ್ಕೂ ಕೂಡ ಆಕರ್ಷಕ ನಗದು ಹಾಗೂ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು. ಗಾಳಿಬೀಡಿನಲ್ಲಿ ನಡೆಯುವ ಮೆರಥಾನ್ ಮತ್ತು ಶೂಟಿಂಗ್ ಪೈಪೋಟಿಗೆ ಕೂಡ ಆಕರ್ಷಕ ನಗದು ಹಾಗೂ ಟ್ರೋಫಿ ನೀಡಲಾಗುವುದು. ವಿಶೇಷ ಕಾರ್ಯಕ್ರಮ “ಮಿಸ್ಟರ್ ಗೌಡ ಹಾಗೂ ಮಿಸ್ ಗೌಡತಿ” ಸ್ಪರ್ಧೆಯಲ್ಲಿ ಕೂಡ ಆಕರ್ಷಕ ಪಾರಿತೋಷಕದಿಂದ ಗೌರವಿಸಿ 2026 ನೇ ಸಾಲಿನ ಗೌಡ ಜನಾಂಗದ ಶ್ರೇಷ್ಠ ಪುರುಷ ಮತ್ತು ಮಹಿಳೆ ಎಂಬ ಬಿರುದನ್ನು ನೀಡಲಾಗುವುದು. ಇನ್ನುಳಿದ ಎಲ್ಲಾ ಕ್ರೀಡಾಕೂಟಕ್ಕೂ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಪುದಿಯನೆರವನ ರಿಶಿತ್ ಮಾದಯ್ಯ ವಿವರಿಸಿದರು.
*ತಯಾರಿ*ಈಗಾಗಲೇ ಕುಟುಂಬವಾರು ಕ್ರಿಕೆಟ್ ಪಂದ್ಯಾಟ ಮತ್ತು ರಿಂಕ್ ಹಾಕಿ ಆಟದ ನೋಂದಾವಣಿ ಕಾರ್ಯ ಪ್ರಗತಿಯಲ್ಲಿದೆ. ಹೆಸರು ನೋಂದಾಯಿಸಲು ಇಚ್ಛಿಸುವ ಕುಟುಂಬಗಳು 8105160547, 9353521877, 9663253025 ಅವರನ್ನು ಸಂಪರ್ಕಿಸಬಹುದಾಗಿದೆ. ಏಪ್ರಿಲ್ 15ರಿಂದ “ಮಿಸ್ಟರ್ ಗೌಡ ಮತ್ತು ಮಿಸ್ ಗೌಡತಿ” ಯ ನೋಂದಾವಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಹೆಸರು ನೋಂದಾಯಿಸಲು 9008198955, 7676452107 ನ್ನು ಸಂಪರ್ಕಿಸಬಹುದಾಗಿದೆ.
ಗಾಳಿಬೀಡಿನಲ್ಲಿ ನಡೆಯುವ ಉದ್ಘಾಟನೆ ಕಾರ್ಯಕ್ರಮಕ್ಕೆ ಈಗಾಗಲೇ ಸ್ಥಳೀಯ ಗ್ರಾಮಸ್ಥರು ಉತ್ಸಾಹದಿಂದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮೇ 2 ರಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕುಟುಂಬವಾರು ಕ್ರಿಕೆಟ್ ಪಂದ್ಯಾಟಕ್ಕೆ ಎರಡು ಮೈದಾನಗಳನ್ನು ಮಾಡಲಾಗುವುದು ಹಾಗೂ ರಿಂಕ್ ಹಾಕಿ ಪಂದ್ಯಾಟ ಒಂದು ಮೈದಾನದಲ್ಲಿ ನಡೆಯಲಿದೆ. ಪ್ರೇಕ್ಷಕರ ಅನುಕೂಲಕ್ಕಾಗಿ ಸುಸಜ್ಜಿತ ಆಸನ, ಕ್ಯಾಂಟೀನ್ ಮತ್ತು ಮಳಿಗೆಗಳ ವ್ಯವಸ್ಥೆ ಮಾಡಲಾಗುವುದು. ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.ಸಮಾರೋಪ ಸಮಾರಂಭಕ್ಕೆ ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ಉತ್ತಮ ವೇದಿಕೆಯನ್ನು ಸಜ್ಜುಗೊಳಿಸಲಾಗುವುದು ಮತ್ತು ಅದೇ ವೇದಿಕೆಯಲ್ಲಿ “ಮಿಸ್ಟರ್ ಗೌಡ ಮತ್ತು ಮಿಸ್ ಗೌಡತಿ”ಯ ಕೊನೆಯ ಹಂತದ ಪೈಪೋಟಿಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲೆಯ ಗಣ್ಯಾತಿಗಣ್ಯರು, ಕ್ರೀಡಾಪಟುಗಳು ಹಾಗೂ ಜನಾಂಗದ ಮೇರು ವ್ಯಕ್ತಿಗಳು ಭಾಗವಹಿಸಲಿದ್ದಾರೆ.
*ಅನುದಾನದ ಕೊರತೆ* ಕೊಡಗಿನ ಗೌಡ ಜನಾಂಗದ ಕ್ರೀಡಾಕೂಟಕ್ಕೆ ಕಳೆದ ಮೂರು ವರ್ಷಗಳಿಂದ ಸರಕಾರದ ಅನುದಾನ ಬಂದಿರುವುದಿಲ್ಲ, ಇದು ನಮಗೆ ತುಂಬಾ ನೋವನ್ನುಂಟುಮಾಡಿದೆ. 2022ರಲ್ಲಿ ಕೊನೆಯದಾಗಿ ಗೌಡ ಜನಾಂಗದ ಕ್ರೀಡಾಕೂಟಕ್ಕೆ ಸರಕಾರದಿಂದ ಅನುದಾನ ಬಂದಿರುತ್ತದೆ. ಆದರೆ ಕಳೆದ ಮೂರು ವರ್ಷಗಳಿಂದ ಸರಕಾರದ ಅನುದಾನಕ್ಕಾಗಿ ಸತತ ಪ್ರಯತ್ನಪಟ್ಟರು ಯಾವುದೇ ಸ್ಪಂದನೆ ದೊರೆತ್ತಿಲ್ಲ.ಸರಕಾರದ ಅನುದಾನ ಸಿಗದಿದ್ದರೂ ಧೃತಿಗೆಡದೆ ಕೊಡಗಿನ ಗೌಡ ಜನಾಂಗದ ಯುವಶಕ್ತಿಯು ಸ್ವಾವಲಂಬಿಯಾಗಿ ಹಣ ಕ್ರೋಢೀಕರಣ ಮಾಡಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ಮುಂದುವರಿಸುತ್ತಾ ಬಂದಿದ್ದಾರೆ. ಆಡಂಬರಕ್ಕೆ ಅಡ್ಡಿಯಾದರೂ ಕ್ರೀಡಾಕೂಟ ಸಾಗುತ್ತಲೇ ಬಂದಿದೆ. ಕೊಡಗಿನ ಗೌಡ ಜನಾಂಗ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯನ್ನು ಹೊಂದಿದ್ದರೂ ಕೂಡ ಅನುದಾನ ಬಾದಿರುವುದು ಆಶ್ಚರ್ಯವೇ ಸರಿ. ಮುಂದಿನ ದಿನಗಳಲ್ಲಿ ಶಾಸಕರುಗಳ ಪ್ರಯತ್ನದಿಂದ ಅನುದಾನ ಬರುವುದೆಂಬ ಭರವಸೆಯಲ್ಲಿದ್ದೇವೆ. ಗೌಡ ಜನಾಂಗದ ಹಿರಿಯರ ಹಾಗೂ ಹಿತೈಷಿಗಳ ಸಹಕಾರದಿಂದ ಕ್ರೀಡಾಕೂಟ ಸಾಗುತ್ತಾ ಬಂದಿದೆ. ಅವರಿಗೆ ನಾವು ಕೊಡಗು ಗೌಡ ಯುವ ವೇದಿಕೆ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇವೆ.ಕಳೆದ ವರ್ಷದ ಕ್ರೀಡಾಕೂಟಕ್ಕೆ ಸುಮಾರು 25 ಲಕ್ಷ ರೂ. ಖರ್ಚಾಗಿದ್ದು, ಸರಕಾರದಿಂದ ಯಾವುದೇ ನೆರವು ದೊರೆತ್ತಿಲ್ಲ. ಈ ಬಾರಿಯ ಕ್ರೀಡಾಕೂಟ ಒಲಿಂಪಿಕ್ ಮಾದರಿಯಲ್ಲಿ ನಡೆಯುವುದರಿಂದ ಸುಮಾರು 50 ಲಕ್ಷ ರೂ. ಖರ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಸರಕಾರ ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹೆಚ್ಚಿನ ಅನುದಾನ ಮಂಜೂರು ಮಾಡುವ ಅಗತ್ಯವಿದೆ ಎಂದು ತಿಳಿಸಿದರು. 16 ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಕ್ರೀಡಾಕೂಟದಲ್ಲಿ ಗೌಡ ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.ಕ್ರೀಡಾಕೂಟ ಹಾಗೂ ಪ್ರಾಯೋಜಕತ್ವದ ಹೆಚ್ಚಿನ ಮಾಹಿತಿಗೆ +91 9483780634, 9972376151 ನ್ನು ಸಂಪರ್ಕಿಸಬಹುದಾಗಿದೆ ಎಂದು ರಿಶಿತ್ ಮಾದಯ್ಯ ಹೇಳಿದರು.ಕೊಡಗು ಗೌಡ ಯುವ ವೇದಿಕೆಯ ಉಪಾಧ್ಯಕ್ಷ ಎಡಿಕೇರಿ ಪ್ರಸನ್ನ ಮಾತನಾಡಿ ಕಳೆದ 3 ವರ್ಷಗಳಿಂದ ಗೌಡ ಕ್ರೀಡಾಕೂಟದ ಅನುದಾನಕ್ಕಾಗಿ ಸರಕಾರದ ಬಳಿ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಇಲ್ಲಿಯವರೆಗೆ ಅನುದಾನ ನೀಡಿಲ್ಲ, ಇನ್ನಾದರು ಶಾಸಕರು ಎಚ್ಚೆತ್ತುಕೊಂಡು ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪರಿಚನ ಸತೀಶ್, ಕೋಶಾಧಿಕಾರಿ ದೇರಳ ನವೀನ್, ಕ್ರೀಡಾಧ್ಯಕ್ಷ ಕುಟ್ಟನ ಪ್ರಶಾಂತ್ ಹಾಗೂ ನಿರ್ದೇಶಕ ಕಲ್ಲುಮುಟ್ಲು ಅನುದೀಪ್ ಉಪಸ್ಥಿತರಿದ್ದರು.

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಚೇಲಾವರದಲ್ಲಿ ಕಾಳಿಂಗ ಸರ್ಪದ ರಕ್ಷಣೆ

ಅಕ್ಟೋಬರ್ 9, 2026

ಕಡಗದಾಳಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಅಕ್ಟೋಬರ್ 9, 2026

ಮಡಿಕೇರಿ ದಸರಾ ಮಹೋತ್ಸವ ಪ್ರಯುಕ್ತ ಒಂದು ದಿನದ ವಿಶೇಷ ಪ್ಯಾಕೇಜ್

ಅಕ್ಟೋಬರ್ 9, 2026

ಕಡಗದಾಳಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಅಕ್ಟೋಬರ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.9 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕಗಳ…

ಮಡಿಕೇರಿ ದಸರಾ ಮಹೋತ್ಸವ ಪ್ರಯುಕ್ತ ಒಂದು ದಿನದ ವಿಶೇಷ ಪ್ಯಾಕೇಜ್

ಅಕ್ಟೋಬರ್ 9, 2026

ಮಡಿಕೇರಿಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ : ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

ಅಕ್ಟೋಬರ್ 9, 2026

ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರೂ.1.75 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ : ಶಾಸಕ ಎ.ಎಸ್.ಪೊನ್ನಣ್ಣರಿಂದ ಭೂಮಿಪೂಜೆ

ಅಕ್ಟೋಬರ್ 9, 2026

ಅ.10ರಂದು ವಿರಾಜಪೇಟೆ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಅಕ್ಟೋಬರ್ 9, 2026

ಕೊಡಗು : ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ಅಕ್ಟೋಬರ್ 9, 2026

ಸಿಜೆಪಿ ಪ್ರತಿಭಟನೆ ಹಿನ್ನೆಲೆ: ದೆಹಲಿಯಲ್ಲಿ ಹೈ ಅಲರ್ಟ್, 24 ಗಂಟೆ ಮೊಬೈಲ್ ಇಂಟರ್ನೆಟ್ ಸ್ಥಗಿತ; 57 ಮೆಟ್ರೋ ನಿಲ್ದಾಣಗಳ ಪ್ರವೇಶ–ನಿರ್ಗಮನ ದ್ವಾರ ಬಂದ್; 20 ವಲಯಗಳಾಗಿ ವಿಂಗಡಣೆ, 20 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ

ಅಕ್ಟೋಬರ್ 9, 2026

ಅ.11ರಿಂದ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ

ಅಕ್ಟೋಬರ್ 9, 2026

ಕೊಡವ ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಸಿಎನ್‌ಸಿ ಸತ್ಯಾಗ್ರಹ

ಅಕ್ಟೋಬರ್ 9, 2026

2027ರ SSLC, ದ್ವಿತೀಯ PUC ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಫೆಬ್ರವರಿ 27ರಿಂದ ಪಿಯುಸಿ, ಮಾರ್ಚ್ 22ರಿಂದ SSLC ಪರೀಕ್ಷೆ ಆರಂಭ

ಅಕ್ಟೋಬರ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.