
ಮಡಿಕೇರಿ ಏ.20 NEWS DESK : ಅಕ್ಕಪಡೆ ವತಿಯಿಂದ ಮಡಿಕೇರಿಯ ವಿವಿಧೆಡೆ ತುರ್ತು ಸಹಾಯವಾಣಿಯ ಕುರಿತು ಅರಿವು ಮೂಡಿಸಲಾಯಿತು. ಅಕ್ಕಪಡೆ ಸಿಬ್ಬಂದಿಗಳು ನಗರದ ಕೋಟೆ ಆವರಣದಲ್ಲಿ ಪ್ರವಾಸಿಗರಿಗೆ ಅಕ್ಕಪಡೆ ಕರ್ತವ್ಯ, ವಿವಿಧ ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮೊಗೇರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಅಕ್ಕಪಡೆಯ ಬಗ್ಗೆ ಮತ್ತು ತುರ್ತು ಸಹಾಯವಾಣಿಗಳ ಬಗ್ಗೆ ಅರಿವು ಮೂಡಿಸಿದರು.









