
ಮಡಿಕೇರಿ ಏ.24 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.24 ರಂದು ಗೆಲುವು ಸಾಧಿಸಿದ ಮಹಿಳಾ ತಂಡಗಳು. *ಮೈದಾನ 3* (ಮಹಿಳಾ ಕ್ರಿಕೆಟ್)ಸರಕಾರಿ ಪ್ರೌಢ ಶಾಲಾ ಮೈದಾನ ಮಾಚಿಮಂಡ ಮತ್ತು ಪಾಸುರ ತಂಡಗಳ ನಡುವಿನ ಪಂದ್ಯದಲ್ಲಿ ಪಾಸುರ 9 ವಿಕೆಟ್ ಗಳಿಂದ ಜಯ ಸಾಧಿಸಿತು. ಮಾಚಿಮಂಡ 5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 35 ರನ್ ಗಳನ್ನು ಗಳಿಸಿತು. ಪಾಸುರ 3.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 36 ರನ್ ಗಳನ್ನು ಸೇರಿಸಿ ಗೆಲುವು ಕಂಡಿತು. ಮುಕ್ಕಾಟಿರ (ಹರಿಹರ) ಮತ್ತು ಮಾಚಮಾಡ ನಡುವಿನ ಹಣಾಹಣಿಯಲ್ಲಿ ಮುಕ್ಕಾಟಿರ 24 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಮುಕ್ಕಾಟಿರ 5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 47 ರನ್ ಗಳನ್ನು ಸೇರಿಸಿತು. ಮಾಚಮಾಡ 5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 23 ರನ್ ಗಳನ್ನು ಗಳಿಸಿ ಸೋಲು ಕಂಡಿತು. ಮೇವಡ ಮತ್ತು ಓಡಿಯಂಡ ನಡುವಿನ ಪಂದ್ಯದಲ್ಲಿ ಓಡಿಯಂಡ ತಂಡಕ್ಕೆ 60 ರನ್ ಗಳ ಜಯ ಲಭಿಸಿತು. ಓಡಿಯಂಡ ತಂಡ 5 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 95 ರನ್ ಗಳನ್ನು ಗಳಿಸಿತು. ಮೇವಡ 5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 35 ರನ್ ಗಳನ್ನಷ್ಟೇ ಸೇರಿಸಿ ಸೋಲು ಕಂಡಿತು. ಚೆಕ್ಕೇರ ಮತ್ತು ಕಂಬೀರಂಡ ನಡುವಿನ ಪಂದ್ಯದಲ್ಲಿ ಚೆಕ್ಕೇರ ತಂಡಕ್ಕೆ 9 ವಿಕೆಟ್‍ಗಳ ಜಯ ದೊರೆಯಿತು. ಕಂಬೀರಂಡ ತಂಡ 5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 13 ರನ್ ಗಳನ್ನು ಸೇರಿಸಿತು. ಚೆಕ್ಕೇರ 3.5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 15 ರನ್ ಗಳನ್ನು ಗಳಿಸಿ ಗೆಲುವಿನ ನಗೆ ಬೀರಿತು.








