Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮೇ 5ರಂದು ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ*
  • *ಮದೆಮಹೇಶ್ವರ ವಿದ್ಯಾಸಂಸ್ಥೆಯಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ*
  • ಸಂಸ್ಥೆಯ ಬೆಳವಣಿಗೆ ಸಿಬ್ಬಂದಿಗಳ ನಿಷ್ಠಾವಂತ ಸೇವೆ ಮುಖ್ಯ : ಎಂ.ಎಸ್.ಮುತ್ತಣ್ಣ
  • *ನಿಶಾನಿ ಮೇಲೇರಿ ಸಂಭ್ರಮಿಸಿದ ಚಿಣ್ಣರು*
  • *ಬಿಳಿಗೇರಿ ಶ್ರೀ ಅರ್ಧನಾರೀಶ್ವರ ದೇಗುಲದ ವಾರ್ಷಿಕ ಉತ್ಸವ : ಪೂಜಾ ಕಾರ್ಯಗಳೊಂದಿಗೆ ಉತ್ಸವಕ್ಕೆ ಚಾಲನೆ*
  • *ಕ್ಷೇತ್ರ ಪುನರ್ ವಿಂಗಡಣೆಯ ಹಿಂದೆ ಕೇಂದ್ರದ ದುರುದ್ದೇಶವಿದೆ : ಎಂ.ಲಕ್ಷ್ಮಣ್ ಟೀಕೆ*
  • *ಜಿಸಿಎಲ್ ಕ್ರಿಕೆಟ್ ಪಂದ್ಯಾವಳಿಯ 6ನೇ ಆವೃತ್ತಿ : ಬಿಡ್ಡಿಂಗ್ ಪ್ರಕ್ರಿಯೆ*
  • *ಮೇ 1 ಕ್ಕೆ ಬಂಟರ ಭವನಕ್ಕೆ ಶಂಕು ಸ್ಥಾಪನೆ : ರೂ.15 ಕೋಟಿಯ ಯೋಜನೆ*
  • *ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಬ್ಯಾರಿ ಮೊದಲ ಸಾಹಿತ್ಯ ಸಮ್ಮೇಳನ : ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ : ಸ್ಪೀಕರ್ ಯು.ಟಿ.ಖಾದರ್*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.29 ರಂದು ನಡೆಯುವ ಪುರುಷರ ಹಾಗೂ ಮಹಿಳೆಯರ ಸೆಮಿಫೈನಲ್ ಪಂದ್ಯಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮೇ 5ರಂದು ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮೇ 5ರಂದು ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ*

ಏಪ್ರಿಲ್ 29, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಏ.29 : ಮಡಿಕೇರಿ ನಗರದ ಹೊರವಲಯದ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ ಮೇ 5ರಂದು ಶ್ರದ್ಧಾಭಕ್ತಿಯಿಂದ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಜರಾಜೇಶ್ವರಿ ದೇವಾಲಯದ ಧರ್ಮದರ್ಶಿ ಗೋವಿಂದ ಸ್ವಾಮಿ ಅವರು ದೇವಾಲಯಕ್ಕೆ ಸುಮಾರು 80 ವರ್ಷಗಳ ಇತಿಹಾಸವಿದೆ. ವಾರ್ಷಿಕೋತ್ಸವ ಹಾಗೂ ರಥೋತ್ಸವದಲ್ಲಿ ರಾಜ್ಯ ಮತ್ತು ಹೊರ ರಾಜ್ಯದ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು. ಭಕ್ತರ, ದಾನಿಗಳ, ವಿವಿಧ ಸಂಘ ಸಂಸ್ಥೆಗಳ, ಸ್ವಯಂಸೇವಕರ ಸಹಕಾರದಿಂದ ಪ್ರತಿವರ್ಷ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ದೇವಾಲಯದಲ್ಲಿ ಪ್ರತಿದಿನ ಭಕ್ತರಿಗಾಗಿ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಾರ್ಷಿಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವುದರೊಂದಿಗೆ ತನು ಮನ ಧನದ ಸಹಕಾರ ನೀಡುವಂತೆ ಮನವಿ ಮಾಡಿದರು.
ದೇವಾಲಯ ಸಮಿತಿಯ ಸದಸ್ಯ ಕಿರಣ್ ಕುಮಾರ್ ಅವರು ಮಾತನಾಡಿ ವಾರ್ಷಿಕೋತ್ಸವ ಹಾಗೂ ರಥೋತ್ಸವದ ಮಾಹಿತಿ ನೀಡಿದರು.
ಮೇ 5 ರಂದು ಬೆಳಿಗ್ಗೆ 6 ಗಂಟೆಗೆ ಧ್ವಜಾರೋಹಣ, 6.30ಕ್ಕೆ ಗಣಪತಿ ಹೋಮ, 7.30ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ ನಂತರ ತೀರ್ಥಸ್ನಾನ, 9.20ಕ್ಕೆ ಕಳಸ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾ ಮಂಗಳಾರತಿಯಾಗಲಿದೆ. 11.45ಕ್ಕೆ ಶುಭ ಕಾಲದಂದು ದೇವಿಯ ರಥೋತ್ಸವವು ದೇವಸ್ಥಾನದ ಆವರಣದ ಸುತ್ತಲೂ ನಡೆಯಲಿದೆ. ರಥ ಎಳೆಯುವ ಭಕ್ತರು ಮೂರು ದಿನಗಳ ಕಾಲ ಶುದ್ಧದಲ್ಲಿರಬೇಕು. ನಂತರ ತುಲಾಭಾರ, ತಲೆಮುಡಿ ತೆಗೆಯುವುದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮ ಅರ್ಚನೆ ಮತ್ತು ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಯಿoದ ಅನ್ನಸಂತರ್ಪಣೆಯಾಗಲಿದ್ದು, 12.30ಕ್ಕೆ ತಾಯಿಯ ದರ್ಶನವಿರುತ್ತದೆ. ಸಂಜೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೀಪಾಲಂಕಾರ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಗುವುದು. ರಾತ್ರಿ 9 ಗಂಟೆಗೆ ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ ಪೂಜಾ ಕಾರ್ಯಕ್ರಮ ಜರುಗಲಿದೆ. ಜಾತ್ರೋತ್ಸವ ದಿನದಂದು ನೈವೇದ್ಯ ಪ್ರಸಾದ, ಅನ್ನದಾನ, ರಥ ಅಲಂಕಾರ, ದೇವಸ್ಥಾನದ ಹೂವಿನ ಆಲಂಕಾರ, ವಿದ್ಯುತ್ ದೀಪಾಲಂಕಾರಗಳನ್ನು ಮಾಡಲು ಇಚ್ಛಿಸುವವರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವವರು ಖುದ್ದಾಗಿ ದೇವಾಲಯದ ಆಡಳಿತ ಕಛೇರಿಯನ್ನು ಸಂಪರ್ಕಿಸುವoತೆ ಕಿರಣ್ ಕುಮಾರ್ ತಿಳಿಸಿದರು. ಶ್ರೀರಾಜರಾಜೇಶ್ವರಿ ದೇವಾಲಯದ ಭಕ್ತ ಚುಮ್ಮಿ ದೇವಯ್ಯ ಅವರು ಮಾತನಾಡಿ ದೇವಾಲಯವು ರಾಜ್ಯ ಹಾಗೂ ಹೊರ ರಾಜ್ಯದ ಅಪಾರ ಭಕ್ತ ಸಮೂಹವನ್ನು ಹೊಂದಿದ್ದು, ಸರ್ವ ಭಕ್ತರು ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು, ಮಳೆಗಾಗಿ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಭಕ್ತರಾದ ಹರೀಶ್ ಉಪಸ್ಥಿತರಿದ್ದರು. ವಾರ್ಷಿಕೋತ್ಸವಕ್ಕೆ ಸಹಕಾರ ನೀಡುವ ಭಕ್ತರು 9480730523, 9481959080, 9448647161, 9060646676 ಮತ್ತು 08272-295668 ನ್ನು ಸಂಪರ್ಕಿಸಬಹುದಾಗಿದೆ. 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮದೆಮಹೇಶ್ವರ ವಿದ್ಯಾಸಂಸ್ಥೆಯಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ*

ಏಪ್ರಿಲ್ 28, 2026

ಸಂಸ್ಥೆಯ ಬೆಳವಣಿಗೆ ಸಿಬ್ಬಂದಿಗಳ ನಿಷ್ಠಾವಂತ ಸೇವೆ ಮುಖ್ಯ : ಎಂ.ಎಸ್.ಮುತ್ತಣ್ಣ

ಏಪ್ರಿಲ್ 28, 2026

*ನಿಶಾನಿ ಮೇಲೇರಿ ಸಂಭ್ರಮಿಸಿದ ಚಿಣ್ಣರು*

ಏಪ್ರಿಲ್ 28, 2026

*ಮದೆಮಹೇಶ್ವರ ವಿದ್ಯಾಸಂಸ್ಥೆಯಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ*

ಏಪ್ರಿಲ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.28 NEWS DESK : 1995-96ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಮದೆನಾಡಿನ ಮದೆಮಹೇಶ್ವರ…

ಸಂಸ್ಥೆಯ ಬೆಳವಣಿಗೆ ಸಿಬ್ಬಂದಿಗಳ ನಿಷ್ಠಾವಂತ ಸೇವೆ ಮುಖ್ಯ : ಎಂ.ಎಸ್.ಮುತ್ತಣ್ಣ

ಏಪ್ರಿಲ್ 28, 2026

*ನಿಶಾನಿ ಮೇಲೇರಿ ಸಂಭ್ರಮಿಸಿದ ಚಿಣ್ಣರು*

ಏಪ್ರಿಲ್ 28, 2026

*ಬಿಳಿಗೇರಿ ಶ್ರೀ ಅರ್ಧನಾರೀಶ್ವರ ದೇಗುಲದ ವಾರ್ಷಿಕ ಉತ್ಸವ : ಪೂಜಾ ಕಾರ್ಯಗಳೊಂದಿಗೆ ಉತ್ಸವಕ್ಕೆ ಚಾಲನೆ*

ಏಪ್ರಿಲ್ 28, 2026

*ಕ್ಷೇತ್ರ ಪುನರ್ ವಿಂಗಡಣೆಯ ಹಿಂದೆ ಕೇಂದ್ರದ ದುರುದ್ದೇಶವಿದೆ : ಎಂ.ಲಕ್ಷ್ಮಣ್ ಟೀಕೆ*

ಏಪ್ರಿಲ್ 28, 2026

*ಜಿಸಿಎಲ್ ಕ್ರಿಕೆಟ್ ಪಂದ್ಯಾವಳಿಯ 6ನೇ ಆವೃತ್ತಿ : ಬಿಡ್ಡಿಂಗ್ ಪ್ರಕ್ರಿಯೆ*

ಏಪ್ರಿಲ್ 28, 2026

*ಮೇ 1 ಕ್ಕೆ ಬಂಟರ ಭವನಕ್ಕೆ ಶಂಕು ಸ್ಥಾಪನೆ : ರೂ.15 ಕೋಟಿಯ ಯೋಜನೆ*

ಏಪ್ರಿಲ್ 28, 2026

*ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಬ್ಯಾರಿ ಮೊದಲ ಸಾಹಿತ್ಯ ಸಮ್ಮೇಳನ : ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ : ಸ್ಪೀಕರ್ ಯು.ಟಿ.ಖಾದರ್*

ಏಪ್ರಿಲ್ 28, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.29 ರಂದು ನಡೆಯುವ ಪುರುಷರ ಹಾಗೂ ಮಹಿಳೆಯರ ಸೆಮಿಫೈನಲ್ ಪಂದ್ಯಗಳು*

ಏಪ್ರಿಲ್ 28, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.28 ರಂದು ನಡೆದ ಪುರುಷರ ಕ್ವಾರ್ಟರ್ ಫೈನಲ್ಸ್ ನಲ್ಲಿ ಗೆಲುವು ಸಾಧಿಸಿದ ತಂಡಗಳು*

ಏಪ್ರಿಲ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.