
ಮಡಿಕೇರಿ ಮೇ 1 NEWS DESK : ಖ್ಯಾತ ಅಂತರಾಷ್ಟ್ರೀಯ ಹಾಕಿ ಪಟು, ಮಾಜಿ ಒಲಂಪಿಯನ್, ಭಾರತ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಎ.ಬಿ.ಸುಬ್ಬಯ್ಯನವರ ನಿವಾಸಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು. ಎ.ಬಿ.ಸುಬ್ಬಯ್ಯ ಅವರು ತಂದೆ ಅಂಜಪರವಂಡ ಬೋಪಯ್ಯ ತಮ್ಮ 92 ವರ್ಷ ಪ್ರಾಯದಲ್ಲಿ ನಿಧನರಾಗಿದ್ದ ಹಿನ್ನಲೆಯಲ್ಲಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂಧರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ನಿವೃತ್ತ ಡಿ.ಸಿ.ಎಫ್ ವಾಟೇರಿರ ಕಾರ್ಯಪ್ಪ, ಪ್ರಮುಖರಾದ ಸೂರಜ್ ಹೊಸೂರು ಹಾಜರಿದ್ದರು.









