
ಗೋಣಿಕೊಪ್ಪ ಮೇ 6 NEWS DESK : ಅಕ್ಷಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಮತ್ತು ಅಂಗಾಂಗ ದಾನ ಶಿಬಿರ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರ, ಇಂಡಿಯನ್‍ರೆಡ್‍ಕ್ರಾಸ್ ಸೊಸೈಟಿ ಪೊನ್ನಂಪೇಟೆ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಅಂಗಾಂಗ ದಾನ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಯಿತು. ಅಕ್ಷಯ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಕೆ.ಕೆ.ಸೋಮಯ್ಯ ಸಭಾಧ್ಯಕ್ಷತೆಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮತ್ತು ಪತ್ರಕರ್ತ, ಸಮಾಜ ಸೇವಕ ಜಗದೀಶ್ ಜೋಡಬೀಟಿ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಕುಲ್ಲಚಂಡ ಪ್ರಮೋದ್ ಗಣಪತಿ, ರಕ್ತದಾನದ ಶ್ರೇಷ್ಠತೆಯನ್ನು ಸಮಾಜಕ್ಕೆ ತಿಳಿಸುವ ಮೂಲಕ ಯುವ ಸಮುದಾಯದಲ್ಲಿ ಪ್ರೇರಣೆಯನ್ನು ತುಂಬಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕಾರ್ಯೋನ್ಮುಖವಾಗಿ ಜನರಡೆಗೆ ರಕ್ತದಾನ ಶಿಬಿರವನ್ನು ಕೊಂಡೊಯ್ಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು. ಕಥೆಗಾರ, ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ರಕ್ತದಾನ ಮತ್ತು ಅಂಗಾಂಗ ದಾನ ಎರಡೂ ಜೀವ ಉಳಿಸುವ ಮಹಾದಾನಗಳಾಗಿವೆ. ಒಂದು ತಾತ್ಕಾಲಿಕ ಸಹಾಯವಾದರೆ, ಇನ್ನೊಂದು ದೀರ್ಘಕಾಲದ ಚೇತನ, ಇಂತಹ ಚೈತನ್ಯ ಪ್ರಧಾನವಾದ ದಿವಟ್ಟಿಗೆಯನ್ನು ಹೊತ್ತಿಸುತ್ತ ಜನರಡೆಗೆ ತಲುಪಿಸುವ ಮಾರ್ಗವನ್ನು ಕಂಡುಕೊಂಡ ಅಕ್ಷಯಚಾರಿ ಟೇಬಲ್ ಟ್ರಸ್ಟ್ ಸಮಾಜ ಸೇವೆ ಮಾದರಿಯ ನಡೆ ಎಂದು ಹೇಳಿದರು. ಹಿರಿಯ ನಾಗರಿಕ ಸೇವಾ ಪ್ರಶಸ್ತಿ ವಿಜೇತೆ ಹಾಗೂ ದಾನಿ ಕೈಬುಲಿರ ಪಾರ್ವತಿ ಬೋಪಣ್ಣ ಮಾತನಾಡಿ, ರಕ್ತದಾನ ಮತ್ತು ಅಂಗಾಂಗ ದಾನಗಳ ಬಗ್ಗೆ ಯುವಕರು ಪ್ರೇರಣೆಯಾಗಬೇಕು. ಈ ಮೂಲಕ ಮತ್ತೊಂದು ಜೀವವನ್ನು ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಅಕ್ಷಯ ಚಾರಿಟೇಬಲ್ ಟ್ರಸ್ಟ್‍ನ ಸ್ಥಾಪಕ ಅಧ್ಯಕ್ಷ ಕೆ.ಕೆ.ಸೋಮಯ್ಯ ಮಾತನಾಡಿ, ಹಣಗಳಿಸುವುದಷ್ಟೇ ಮನುಷ್ಯನ ಜೀವನದ ಉದ್ದೇಶವಾಗಿರಬಾರದು. ತನ್ನ ಸುತ್ತಮುತ್ತಲಿನವರಿಗೆ ಮತ್ತು ಸಮಾಜಕ್ಕೆ ಮಾದರಿಯಾಗಿ ಸೇವೆ ನೀಡುವುದು ಕೂಡ ಒಂದು ಪುಣ್ಯದ ಕಾರ್ಯವಾಗಿದೆ. ಈ ಉದ್ದೇಶದೊಂದಿಗೆ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕಿ ಕೆ.ಆರ್.ಬಿಂದು, ರಕ್ತದಾನದ ಮಹತ್ವದ ಬಗ್ಗೆ ಅರಿವು ನೀಡಿದರು. ಸಮಾಜ ಸೇವಕಿ, ಪತ್ರಕರ್ತೆರೇಖಾ ಶ್ರೀಧರ್, ಉದ್ಯಮಿಕುಮಾರ್, ಸಮಾಜ ಸೇವಕ ಪುಳಿಂಜನ ಪೂವಯ್ಯಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿದರು. ಕೊಡವ ಅಕಾಡಮಿ ಸದಸ್ಯ ಹಾಗೂ ಗೋಣಿಕೊಪ್ಪ ಸವಿತ ಸಮಾಜಅಧ್ಯಕ್ಷನಾಯಂದಿರಶಿವಾಜಿ, ಖ್ಯಾತಉದ್ಯಮಿ ಲಕ್ಷ್ಮಿರೆಡ್ಡಿ, ಮಡಿಕೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕರಂಬಯ್ಯ, ದೈಹಿಕಶಿಕ್ಷಣ ಮತ್ತುಯೋಗ ಶಿಕ್ಷಕಿ ಅಲೀಮಾ ಪಿ.ಹೆಚ್, ಸಮುದಾಯಆರೋಗ್ಯಕೇಂದ್ರದ ವೈದ್ಯರಾದ ಡಾ. ಸುರೇಶ್, ಡಾ.ಗ್ರೀಷ್ಮ ಬೋಜಮ್ಮ, ಕಾಪ್ಸ್ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಸೋಮಯ್ಯ ಇದ್ದರು. ಇದೇ ಸಂದರ್ಭ ಹಲವು ಬಾರಿ ರಕ್ತದಾನ ಮಾಡಿದ ಕೊಡಗು ಬ್ಲಡ್‍ಡೋನರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಎ.ಅಶ್ರಫ್, ಪತ್ರಕರ್ತ ಅರುಣ್‍ಕುಮಾರ್ ವಿ.ವಿ, ಕಾಫಿ ಬೆಳೆಗಾರ ತೆಲಚಂಡ ಲೋಹಿತ್ ಸುಬ್ಬಯ್ಯ, ಧನಲಕ್ಷ್ಮಿ ಗೋಣಿಕೊಪ್ಪ, ಪ್ರಿಯಾ ಟಿ.ಎಂ ಮತ್ತು ರಕ್ತದಾನ ಮತ್ತು ಅಂಗಾಂಗದಾನ ಮಾಡಿದ ಪತ್ರಕರ್ತ ಜಗದೀಶ್ ಜೋಡಬೀಟಿ ಅವರುಗಳನ್ನು ಸನ್ಮಾನಿಸಲಾಯಿತು.









