
ಮಡಿಕೇರಿ NEWS DESK ಮೇ 14 : ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಮೇ 15 ರಂದು ನಗರದ ವಿವಿಧ ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ವಾರ್ಡ್ ಸಂಖ್ಯೆ 22 ಬ್ಲಾಕ್ ಸಂಖ್ಯೆ 16ರಲ್ಲಿ ರೋಶ್ನಿ ಕಾವೇರಪ್ಪ ಅವರ ಮನೆಯ ಮುಂಭಾಗ ತಡಗೋಡೆ ಕಾಮಗಾರಿ, ವಾರ್ಡ್ ಸಂಖ್ಯೆ 15 ಬ್ಲಾಕ್ ಸಂಖ್ಯೆ 13 ರಲ್ಲಿ ರೆಡ್ ಫರ್ನ್ ಬಳಿ ತಡಗೋಡೆ ನಿರ್ಮಾಣ, ಕ್ರಿಸ್ಟಲ್ ಹಾಲ್ ಮುಂಭಾಗ ಹಾದು ಹೋಗುವ ರಸ್ತೆ ಅಭಿವೃದ್ಧಿ, ಕೊಡವ ರುದ್ರಭೂಮಿಗೆ ಹೋಗುವ ರಸ್ತೆ, ಗೌಡ ಸಮಾಜದಿಂದ ಚೈನ್‌ಗೇಟ್ ರಸ್ತೆ, ಜ್ಯೂನಿಯರ್ ಕಾಲೇಜ್ ನಿಂದ ಮೇಲಿನ ಗೌಡಸಮಾಜ ರಸ್ತೆ, ಸಂಪಿಗೆಕಟ್ಟೆಯಿAದ ಮಹದೇವಪೇಟೆ ರಸ್ತೆ, ಅಬ್ಬಿಫಾಲ್ಸ್ ರಸ್ತೆ, ಸಂತ ಜೋಸೆಫರ ಶಾಲೆಗೆ ಹೋಗುವ ರಸ್ತೆ, ಗ್ರಾಮಾಂತರ ಪೋಲಿಸ್ ಠಾಣೆ ಮುಂಭಾಗ ಮೋರಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿಗಳಾದ ಕೋಚನ ಎಂ.ಚೇತನ್ ಹಾಗೂ ಸಂಪತ್ ರಾಜ್ ತಿಳಿಸಿದ್ದಾರೆ. ಬೆಳಿಗ್ಗೆ 9 ಗಂಟೆಗೆ ರಾಜಾಸೀಟು ಬಳಿಯಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪಕ್ಷದ ಎಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.








