Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಐಮಂಗಲ, ಮಗ್ಗುಲ ಮತ್ತು ವೈಪಡ ಗ್ರಾಮಗಳ ಭದ್ರಕಾಳಿ ದೇವಿಯ ಬೋಡ್ ನಮ್ಮೆ ಆರಂಭ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಐಮಂಗಲ, ಮಗ್ಗುಲ ಮತ್ತು ವೈಪಡ ಗ್ರಾಮಗಳ ಭದ್ರಕಾಳಿ ದೇವಿಯ ಬೋಡ್ ನಮ್ಮೆ ಆರಂಭ

ಮೇ 16, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ವಿರಾಜಪೇಟೆ ಮೇ 16 NEWS DESK : ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ, ಮಗ್ಗುಲ ಮತ್ತು ವೈಪಡ ಗ್ರಾಮಗಳ ಗ್ರಾಮ ದೇವತೆಗಳಾಗಿ ನೆಲೆನಿಂತ ಶ್ರೀ ಭದ್ರಕಾಳಿಯ ಬೋಡ್ ನಮ್ಮೆ ಆರಂಭಗೊಂಡಿದೆ. ಐಮಂಗಲ ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ಆವರಣದಲ್ಲಿ ಮೂರು ಗ್ರಾಮಗಳ ದೇವತಕ್ಕರು, ಗ್ರಾಮಗಳ ಅಧ್ಯಕ್ಷರುಗಳು, ಗ್ರಾಮಸ್ಥರ ಸಮ್ಮುಖದಲ್ಲಿ ಕೊಟ್ಟಿಯಂಡ ಜೀವನ್ ಅವರು ಕಟ್ಟು ವಿಧಿ ಅನುಸರಿಸುವ ವಿಧಾನಗಳು ದೇವ ನೆಲೆಯಲ್ಲಿ ಓದಿ ತಿಳಿಸುವ ಮೂಲಕ ಬೋಡ್ ನಮ್ಮೆಗೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಕೊಟ್ಟಿಯಂಡ ಜೀವನ್ ಅವರು ಐಮಂಗಲ ಗ್ರಾಮದಲ್ಲಿ ಹಿರಿಯ ಅಕ್ಕ ಎರಡನೇಯವರು ವೈಪಡ ಗ್ರಾಮದಲ್ಲಿ ಕೊನೆ ತಂಗಿಯಾಗಿ ಮಗ್ಗುಲ ಗ್ರಾಮದಲ್ಲಿ ಶ್ರೀ ಭದ್ರಕಾಳಿಯಾಗಿ ನೆಲೆ ನಿಂತಿದ್ದಾರೆ, ಎರಡು ವರ್ಷಗಳಿಗೊಮ್ಮೆ ಮೂರು ಗ್ರಾಮಗಳು ಸೇರಿ ಹಬ್ಬ ಆಚರಣೆ ಮಾಡಲಾಗುತ್ತದೆ ಎಂದರು. ಮೇ  16, 17, 18 ರಂದು ಮೂರು ದಿನಗಳ ಕಾಲ ಸಂಜೆ ವೇಳೆಯಲ್ಲಿ 1101 ಸುತ್ತು ಪೀಲಿ ಆಟ್ ಮತ್ತು ತಾಲಿಪಾಟ್ ಕಾರ್ಯಕ್ರಮ ನಡೆಯುತ್ತದೆ. ತಾ.19 ರಂದು ಪಟ್ಟಣಿ ಮತ್ತು ಸಂಜೆ 7 ರ ನಂತರ ಮೂರು ಗ್ರಾಮಗಳ ದೇವತೆಗಳನ್ನು ದೇಗುಲಕ್ಕೆ ಕರೆತರಲಾಗುತ್ತದೆ ಬಳಿಕ ರಾತ್ರಿ 11 ರ ಸಮಯದಲ್ಲಿ ಕಳಿ ( ವಿವಿಧ ವೇಷಭೂಷಣ ) ಧಾರಿಗಳು ಮನೆ ಮನೆಗೆ ತೆರಳುವುದು ಮರುದಿನದ ಮಧ್ಯಾಹ್ನದ ವರೆಗೆ ನಡೆಯಲಿದೆ. ಮೇ 20 ರಂದು ಸಂಜೆ 4 ಗಂಟೆಯ ವೇಳೆಗೆ ವಿವಿಧ ವೇಷಾಧಾರಿಗಳು ಹರಿಕೆಯೊಂದಿಗೆ ದೇವಾಲಯಕ್ಕೆ ಆಗಮನವಾಗಿ ಹರಿಕೆ ಸಮರ್ಪಿಸುವುದು, ಮಾಹಾಪೂಜೆ ನಡೆಯಲಿದೆ. ಮೇ 21 ರಂದು ಬೆಳಿಗ್ಗೆ 11 ಗಂಟೆಗೆ ಕುದುರೆ ಕಟ್ಟುವುದು, ಮದ್ಯಾಹ್ನ 2 ಗಂಟೆಗೆ ಮೂರು ಗ್ರಾಮಗಳಿಂದ ಹೊರಟ ಕುದುರೆಗಳು ಮಗ್ಗುಲ ಗ್ರಾಮದ ಮಾಚೆಟ್ಟಿಪಾರೆ ಎಂಬಲ್ಲಿ ಕುದುರೆಆಟ್ ನಡೆಯುತ್ತದೆ. ಬಳಿಕ ಸಂಜೆ ದೇಗುಲಕ್ಕೆ ಆಗಮನವಾಗುತ್ತದೆ. ದೇವಿಗೆ ವಿಶೇಷ ಪೂಜೆ ನಡೆದು ರಾತ್ರಿ ಭದ್ರಕಾಳಿ ತೆರೆ ಹಾಗೂ ಮೇಲೇರಿ ನಡೆಯುತ್ತದೆ.ನಂತರ ಮಧ್ಯರಾತ್ರಿ ತೆರೆಯು ದೇವಾಲಯಕ್ಕೆ ಆಗಮನವಾಗುತ್ತದೆ. ಮೇ 22 ರಂದು ಮಧ್ಯಾಹ್ನ ಕುಂದನೂ ಚೂಳೆ ಹೊರಟು ಸಂಜೆ ದೇವಾಲಯ ಪ್ರವೇಶವಾಗುತ್ತದೆ ತಾ.23 ರಂದು ಕಳ ಮಡ್‍ಕ್ಕ್ ನಡೆಯಲಿದೆ. ಎಂದು ಊರು ಹಬ್ಬದ ಬಗ್ಗೆ ಮಾಹಿತಿ ನೀಡಿದರು. ಮೂರು ದೇವಲಯಗಳಲ್ಲಿ ನಡೆಯುವ ಬೋಡ್ ನಮ್ಮೆಗೆ ನಾಡಿನ ಸಮಸ್ತ ಭಕ್ತರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಐಮಂಗಲ ಗ್ರಾಮದ ದೇವತಕ್ಕರಾದ ಬೊಳ್ಳಚಂಡ ತಮ್ಮಯ್ಯ, ವೈಪಡ ಗ್ರಾಮದ ದೇವತಕ್ಕರಾದ ಪುಲಿಯಂಡ ನವೀನ್ ಮತ್ತು ಶ್ರೀ ಭದ್ರಕಾಳಿ ಸೇವಾ ಸಮಿತಿ ಐಮಂಗಲ ದೇವಲಾಯದ ಅದ್ಯಕ್ಷರಾದ ಬೊಳ್ಳಚಂಡ ಪ್ರಕಾಶ್ ಉಪದ್ಯಕ್ಷರಾದ ಬೊಳ್ಳಚಂಡ ಸೋಮಣ್ಣ ಕಾರ್ಯದರ್ಶಿ ಮೇಕತಂಡ ಟೀಶ ಬೋಪಯ್ಯ, ,ವಾಟೇರಿರ ಶಂಕರಿ ಪೂವಯ್ಯ, ವಾಟೇರಿರ ಕುಟ್ಟಪ್ಪ, ಪುಲಿಯಂಡ ಜಿಮ್ಮಿ, ಚೋಕಂಡ ರಮೇಶ್, ಕಿರಣ್ ಕುಮಾರ್, ಸೇರಿದಂತೆ ಮೂರು ಗ್ರಾಮಗಳ ಹಬ್ಬ ಆಚರಿಸುವ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ : ಕಿಶೋರ್ ಕುಮಾರ್ ಶೆಟ್ಟಿ 

Follow us Follow us
Share. WhatsApp Facebook Twitter Email Telegram Copy Link

Related Posts

ಬಾಲ್ಯದಿಂದಲೇ ಸ್ವಚ್ಛತೆಯ ಹವ್ಯಾಸ ಬೆಳೆಸುವುದು ಅವಶ್ಯ: ಸೀತಾಲಕ್ಷ್ಮಿ

ನವೆಂಬರ್ 4, 2026

ಪೇರಿಯಂಡ ಪೆಮ್ಮಯ್ಯ ದಂಪತಿ ಸ್ಥಾಪಿಸಿದ ಪ್ರಥಮ ವರ್ಷದ ಸಾಹಿತ್ಯ ಪ್ರಶಸ್ತಿಗೆ ಡಾ. ಕೋರನ ಸರಸ್ವತಿ ಆಯ್ಕೆ

ನವೆಂಬರ್ 3, 2026

ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಸಾಹಿತಿ ಉಳುವಂಗಡ ಕಾವೇರಿ ಉದಯ್ ಆಯ್ಕೆ

ನವೆಂಬರ್ 3, 2026

ಪೇರಿಯಂಡ ಪೆಮ್ಮಯ್ಯ ದಂಪತಿ ಸ್ಥಾಪಿಸಿದ ಪ್ರಥಮ ವರ್ಷದ ಸಾಹಿತ್ಯ ಪ್ರಶಸ್ತಿಗೆ ಡಾ. ಕೋರನ ಸರಸ್ವತಿ ಆಯ್ಕೆ

ನವೆಂಬರ್ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.3: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲೆಯ ವಕೀಲರಾದ ಪೇರಿಯಂಡ ಪಿ. ಪೆಮ್ಮಯ್ಯ ಮತ್ತು…

ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಸಾಹಿತಿ ಉಳುವಂಗಡ ಕಾವೇರಿ ಉದಯ್ ಆಯ್ಕೆ

ನವೆಂಬರ್ 3, 2026

ಸಾಹಿತಿ ನಾ. ಡಿಸೋಜಾ ವಿಶ್ವಮಾನವತ್ವ ಮೇಳೈಸಿದ ದಾರ್ಶನಿಕ: ಎಸ್.ಐ. ಮುನೀರ್ ಅಹಮದ್

ನವೆಂಬರ್ 3, 2026

ಸರ್ವದೈವತ ಪದವಿ ಪೂರ್ವ ಕಾಲೇಜಿನ ಮೂರು ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆ

ನವೆಂಬರ್ 3, 2026

ಶಿಕ್ಷಣ ಇಲಾಖೆಯ ವಿಶೇಷ ಸಭೆ ಹಾಗೂ ಸಂವಾದಕ್ಕೆ ಜ್ಞಾನಗಂಗಾ ಶಾಲೆಯ ಬಿ.ಎಸ್. ನಿಂಗಪ್ಪ ಆಯ್ಕೆ

ನವೆಂಬರ್ 3, 2026

ತಂತ್ರಜ್ಞಾನ ಆಧಾರಿತ ಕೃಷಿ ಮಾರುಕಟ್ಟೆ ಕುರಿತು ರೈತ ಕ್ಷೇತ್ರ ಪಾಠಶಾಲೆ

ನವೆಂಬರ್ 3, 2026

2027ರ ಕೊಡವ ಜಮ್ಮ ಮುಸ್ಲಿಂ ಕುಟುಂಬಗಳ ಕ್ರೀಡಾ ಸಂಭ್ರಮಕ್ಕೆ ಸಿದ್ಧತೆ; ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾಟದ ಧ್ವಜ ಹಸ್ತಾಂತರ: ಎರಡು ಕುಟುಂಬಗಳಿಗೆ ಆತಿಥ್ಯದ ಜವಾಬ್ದಾರಿ

ನವೆಂಬರ್ 3, 2026

ಮಡಿಕೇರಿ ದಸರಾ ಜನೋತ್ಸವಕ್ಕೆ ಹೊಸ ವೈಭವ ತಂದುಕೊಟ್ಟ ಶಾಸಕ ಡಾ.ಮಂತರ್ ಗೌಡ : ಪ್ರಕಾಶ್ ಆಚಾರ್ಯ ಬಣ್ಣನೆ : ನಾಲ್ಕು ವರ್ಷಗಳ ದಸರಾ ಯಶಸ್ಸಿನ ಹಿಂದೆ ಶಾಸಕರ ಇಚ್ಛಾಶಕ್ತಿ ಮತ್ತು ವಿಶೇಷ ಆಸಕ್ತಿ : ದಸರಾ ಆರ್ಥಿಕ ವ್ಯವಸ್ಥೆಗೆ ಹೊಸ ಚೈತನ್ಯ

ನವೆಂಬರ್ 3, 2026

ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಅರಿಯೋಣ: ಉ.ರಾ. ನಾಗೇಶ್

ನವೆಂಬರ್ 3, 2026

ಕುಶಾಲನಗರದಲ್ಲಿ ಸ್ವಚ್ಛತಾ ಜಾಗೃತಿ: ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಇನ್ನರ್ ವೀಲ್ ಸಂಸ್ಥೆಯಿಂದ ಕಸದ ಬುಟ್ಟಿ ಕೊಡುಗೆ

ನವೆಂಬರ್ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.