
ಮಡಿಕೇರಿ NEWS DESK ಮೇ 29 : ಚೆನ್ನೈನ ಮನೋಗಾನಂ ಸಂಗೀತ ವಿದ್ಯಾ ಸಂಸ್ಥೆ ಮಡಿಕೇರಿ ಹಾಗೂ ತಲಕಾವೇರಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮೇ 30ರಂದು ತಲಕಾವೇರಿಯಲ್ಲಿ ಬೆಳಿಗ್ಗೆ 8.30 ಕ್ಕೆ ಹಾಗೂ ಮೇ 31ರಂದು ಮಡಿಕೇರಿಯ ಗೌಳಿ ಬೀದಿಯ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಬೆಳಿಗ್ಗೆ 7 ಗಂಟೆಗೆ ಕಾರ್ಯಕ್ರಮಗಳು ನಡೆಯಲಿದೆ. ಈ ಸಂಗೀತ ವಿದ್ಯಾ ಸಂಸ್ಥೆ ಪ್ರತಿ ವರ್ಷ ತನ್ನ ವಿದ್ಯಾರ್ಥಿಗಳನ್ನು ದೇಶದ ವಿವಿಧ ದೇವಾಲಯಗಳಿಗೆ ಕರೆದುಕೊಂಡು ಹೋಗಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಸಂಸ್ಥೆಯ ಆರು ಮತ್ತು ಏಳನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಕೊಡಗಿನಲ್ಲಿ ಸಂಗೀತ ಸುಧೆ ನಡೆಯಲಿದ್ದು, ಮಕ್ಕಳ ಸಂಗೀತದೊoದಿಗೆ ಪಿಟೀಲು ವಾದನ ಕೂಡ ಇರಲಿದೆ. ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಅವರ ಸಹಕಾರದಿಂದ ಈ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ರಮಶ್ರೀ ತಿಳಿಸಿದ್ದಾರೆ.








