Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕುಶಾಲನಗರದಲ್ಲಿ 186ನೇ ಕಾವೇರಿ ನದಿಗೆ ಮಹಾ ಆರತಿ : ನದಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ : ಕಿರಣ್ ಜಿ.ಗೌರಯ್ಯ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರದಲ್ಲಿ 186ನೇ ಕಾವೇರಿ ನದಿಗೆ ಮಹಾ ಆರತಿ : ನದಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ : ಕಿರಣ್ ಜಿ.ಗೌರಯ್ಯ

ಜೂನ್ 1, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಕುಶಾಲನಗರ ಜೂ.1 NEWS DESK :  ನದಿ ಪರಿಸರ ಸಂರಕ್ಷಣೆ ಬಗ್ಗೆ ಗಮನಹರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ  ತಾಲೂಕು ತಹಸಿಲ್ದಾರ್ ಕಿರಣ್ ಜಿ.ಗೌರಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.  ಕುಶಾಲನಗರ ಕಾವೇರಿ ಮಹಾ ಆರತಿ ಬಳಗ ಮತ್ತು ನಮಾಮಿ ಕಾವೇರಿ ಆಶ್ರಯದಲ್ಲಿ ನಡೆದ 186 ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  ನದಿ ಕೆರೆ ತಟಗಳಲ್ಲಿ ಯಾವುದೇ ಶಾಶ್ವತ ಕಟ್ಟಡಗಳ  ನಿರ್ಮಾಣ ಸಂದರ್ಭ ಸರ್ಕಾರದ ಅಗತ್ಯ ನಿಯಮಗಳನ್ನು ಪಾಲಿಸುವ ಮೂಲಕ ನದಿ ತಟಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಕಳೆದ ಹಲವು ವರ್ಷಗಳಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಮೂಲಕ ಸ್ವಚ್ಛಕಾವೇರಿಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.  ಈ ಸಂದರ್ಭ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ವಿಠ್ಠಲ್ ಸಾಲಿಯಾನ್ ಮಾತನಾಡಿ, ಯೋಜನೆಯ ಸದಸ್ಯರು ಕಾರ್ಯಕರ್ತರು ಧಾರ್ಮಿಕ ಮತ್ತು ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನದಲ್ಲಿ ಕೆಲವು ವರ್ಷಗಳಿಂದ  ಪಾಲ್ಗೊಳ್ಳುತ್ತಿದ್ದು ಸ್ವಚ್ಛ ಕಾವೇರಿಯ ಕಾರ್ಯಕ್ರಮಗಳು, ಚಟುವಟಿಕೆಗಳು ನಿರಂತರವಾಗಿ ಮುಂದುವರಿಯಲಿದೆ ಎಂದರು. ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು  ಕುಂಕುಮಾರ್ಚನೆ, ಅಷ್ಟೋತ್ತರ ನಂತರ ಕಾವೇರಿಗೆ ಆರತಿ ಬೆಳಗಿದರು.  ಇದೇ ಸಂದರ್ಭ ಸೇವಾ ನಿವೃತ್ತಿ ಹೊಂದಿದ ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ  ಮತ್ತು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಜಿಲ್ಲಾ ನಿರ್ದೇಶಕರಾದ ವಿಠ್ಠಲ್ ಸಾಲಿಯಾನ್ ಅವರುಗಳನ್ನು ಆರತಿ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ ಎನ್ ಚಂದ್ರ ಮೋಹನ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಡೆಪಂಡ ಬೋಸ್ ಮೊಣ್ಣಪ್ಪ, ಉಪಾಧ್ಯಕ್ಷರಾದ ಡಿ ಆರ್ ಸೋಮಶೇಖರ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಧರಣಿ ಸೋಮಯ್ಯ, ಕ್ಷೇತ್ರ ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಸೇವಾ ಪ್ರತಿನಿಧಿ ಜಯಲಕ್ಷ್ಮಿ, ನಿರ್ಮಲ ಮತ್ತಿತರರು ಇದ್ದರು. ಹುಣ್ಣಿಮೆ ಅಂಗವಾಗಿ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆಗೆ ಅಭಿಷೇಕ ಮತ್ತು ಆರತಿ ಕಾರ್ಯಕ್ರಮ ಜರುಗಿದವು. ಅರ್ಚಕರಾದ ಪುರುಷೋತ್ತಮ ಭಟ್ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಭಕ್ತಾದಿಗಳಿಗೆ ಪ್ರಸಾದ ಮತ್ತು ಅನ್ನದಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಆಯೋಜಕರಾದ ರವೀಂದ್ರ ಪ್ರಸಾದ್, ಬಬಿಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್ ಎಸ್ಎಲ್ಎನ್ ವ್ಯವಸ್ಥಾಪಕ ನಿರ್ದೇಶಕರಾದ  ಸಾತಪ್ಪನ್ ಮತ್ತಿತರರು ಇದ್ದರು. ಕುಶಾಲನಗರ ಸಾಯಿ ಮಂದಿರದಲ್ಲಿ ಸತ್ಯನಾರಾಯಣ ಪೂಜೆ ಮತ್ತು ವಿಶೇಷ ಆರತಿ ಕಾರ್ಯಕ್ರಮಗಳು ಜರುಗಿದವು.

Follow us Follow us
Share. WhatsApp Facebook Twitter Email Telegram Copy Link

Related Posts

ಬಾಲ್ಯದಿಂದಲೇ ಸ್ವಚ್ಛತೆಯ ಹವ್ಯಾಸ ಬೆಳೆಸುವುದು ಅವಶ್ಯ: ಸೀತಾಲಕ್ಷ್ಮಿ

ನವೆಂಬರ್ 4, 2026

ಪೇರಿಯಂಡ ಪೆಮ್ಮಯ್ಯ ದಂಪತಿ ಸ್ಥಾಪಿಸಿದ ಪ್ರಥಮ ವರ್ಷದ ಸಾಹಿತ್ಯ ಪ್ರಶಸ್ತಿಗೆ ಡಾ. ಕೋರನ ಸರಸ್ವತಿ ಆಯ್ಕೆ

ನವೆಂಬರ್ 3, 2026

ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಸಾಹಿತಿ ಉಳುವಂಗಡ ಕಾವೇರಿ ಉದಯ್ ಆಯ್ಕೆ

ನವೆಂಬರ್ 3, 2026

ಪೇರಿಯಂಡ ಪೆಮ್ಮಯ್ಯ ದಂಪತಿ ಸ್ಥಾಪಿಸಿದ ಪ್ರಥಮ ವರ್ಷದ ಸಾಹಿತ್ಯ ಪ್ರಶಸ್ತಿಗೆ ಡಾ. ಕೋರನ ಸರಸ್ವತಿ ಆಯ್ಕೆ

ನವೆಂಬರ್ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.3: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲೆಯ ವಕೀಲರಾದ ಪೇರಿಯಂಡ ಪಿ. ಪೆಮ್ಮಯ್ಯ ಮತ್ತು…

ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಸಾಹಿತಿ ಉಳುವಂಗಡ ಕಾವೇರಿ ಉದಯ್ ಆಯ್ಕೆ

ನವೆಂಬರ್ 3, 2026

ಸಾಹಿತಿ ನಾ. ಡಿಸೋಜಾ ವಿಶ್ವಮಾನವತ್ವ ಮೇಳೈಸಿದ ದಾರ್ಶನಿಕ: ಎಸ್.ಐ. ಮುನೀರ್ ಅಹಮದ್

ನವೆಂಬರ್ 3, 2026

ಸರ್ವದೈವತ ಪದವಿ ಪೂರ್ವ ಕಾಲೇಜಿನ ಮೂರು ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆ

ನವೆಂಬರ್ 3, 2026

ಶಿಕ್ಷಣ ಇಲಾಖೆಯ ವಿಶೇಷ ಸಭೆ ಹಾಗೂ ಸಂವಾದಕ್ಕೆ ಜ್ಞಾನಗಂಗಾ ಶಾಲೆಯ ಬಿ.ಎಸ್. ನಿಂಗಪ್ಪ ಆಯ್ಕೆ

ನವೆಂಬರ್ 3, 2026

ತಂತ್ರಜ್ಞಾನ ಆಧಾರಿತ ಕೃಷಿ ಮಾರುಕಟ್ಟೆ ಕುರಿತು ರೈತ ಕ್ಷೇತ್ರ ಪಾಠಶಾಲೆ

ನವೆಂಬರ್ 3, 2026

2027ರ ಕೊಡವ ಜಮ್ಮ ಮುಸ್ಲಿಂ ಕುಟುಂಬಗಳ ಕ್ರೀಡಾ ಸಂಭ್ರಮಕ್ಕೆ ಸಿದ್ಧತೆ; ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾಟದ ಧ್ವಜ ಹಸ್ತಾಂತರ: ಎರಡು ಕುಟುಂಬಗಳಿಗೆ ಆತಿಥ್ಯದ ಜವಾಬ್ದಾರಿ

ನವೆಂಬರ್ 3, 2026

ಮಡಿಕೇರಿ ದಸರಾ ಜನೋತ್ಸವಕ್ಕೆ ಹೊಸ ವೈಭವ ತಂದುಕೊಟ್ಟ ಶಾಸಕ ಡಾ.ಮಂತರ್ ಗೌಡ : ಪ್ರಕಾಶ್ ಆಚಾರ್ಯ ಬಣ್ಣನೆ : ನಾಲ್ಕು ವರ್ಷಗಳ ದಸರಾ ಯಶಸ್ಸಿನ ಹಿಂದೆ ಶಾಸಕರ ಇಚ್ಛಾಶಕ್ತಿ ಮತ್ತು ವಿಶೇಷ ಆಸಕ್ತಿ : ದಸರಾ ಆರ್ಥಿಕ ವ್ಯವಸ್ಥೆಗೆ ಹೊಸ ಚೈತನ್ಯ

ನವೆಂಬರ್ 3, 2026

ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಅರಿಯೋಣ: ಉ.ರಾ. ನಾಗೇಶ್

ನವೆಂಬರ್ 3, 2026

ಕುಶಾಲನಗರದಲ್ಲಿ ಸ್ವಚ್ಛತಾ ಜಾಗೃತಿ: ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಇನ್ನರ್ ವೀಲ್ ಸಂಸ್ಥೆಯಿಂದ ಕಸದ ಬುಟ್ಟಿ ಕೊಡುಗೆ

ನವೆಂಬರ್ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.