
ಮಡಿಕೇರಿ ಜೂ.4 NEWS DESK : ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಮಡಿಕೇರಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೌತಿಕ ಸೌಲಭ್ಯಗಳು ಉತ್ತಮವಾಗಿದ್ದರು ಸಹ ದಾಖಲಾತಿ ಕುಂಠಿತಗೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಎಸ್.ಡಿ ಎಂ.ಸಿ ಅಧ್ಯಕ್ಷರು, ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಪೋಷಕರುಗಳ ಸಭೆ ಕರೆದು ದಾಖಲಾತಿ ಹೆಚ್ಚಿಸುವುದರ ಬಗ್ಗೆ ಚರ್ಚಿಸಿದರು. ಶಾಲೆಯ ಸಭಾಂಗಣಕ್ಕೆ ಇಂಟರ್ ಲಾಕ್ ಅಳವಡಿಸಲು ಊರಿನ ದಾನಿಗಳ ಸಹಾಯವನ್ನು ಪಡೆದುಕೊಳ್ಳುವಂತೆಯು, ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸುವ ಜವಾಬ್ದಾರಿ ಊರಿನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ತಿಳಿ ಹೇಳಿದರು. ಪ್ರಭಾರ ಮುಖ್ಯಶಿಕ್ಷಕರಾದ .ಕೆ.ಎಂ.ಅಶ್ರಫ್, ಸಹಶಿಕ್ಷಕರುಗಳಾದ ಕೆ.ಆರ್.ದನಿತ, ಪಿ.ಎಲ್.ಗಾನವಿ ಹಾಜರಿದ್ದರು.









