Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮೂರ್ನಾಡು : ಜೂ.16 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*
  • *ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಶಾಸಕ ಡಾ.ಮಂತರ್ ಗೌಡ : ಕೊಡಗು ಅಭಿವೃದ್ಧಿ ಕುರಿತು ಚರ್ಚೆ*
  • *ಕಡಗದಾಳು ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ : ಪರಿಶೀಲನೆ*
  • *ವಿ.ಬಾಡಗ ಗ್ರಾಮದಲ್ಲಿ ಕ್ರೀಡಾ ತರಬೇತಿ ಕೇಂದ್ರ ಮತ್ತು ವಸತಿ ನಿಲಯ ನಿರ್ಮಾಣ : ರೂ.45 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ : ಶಾಸಕ ಎ.ಎಸ್.ಪೊನ್ನಣ್ಣ*
  • *ಫಾತಿಮಾ ಕಾನ್ವೆಂಟ್ ಶಾಲೆಯ ಸುವರ್ಣ ಸಂಭ್ರಮಕ್ಕೆ ನಿರ್ಧಾರ*
  • *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಕಾರುಣ್ಯ ಕಾರ್ಯಕ್ರಮ : ಸ್ನೇಹಿತರ ಒಕ್ಕೂಟದ ಕಾರ್ಯವನ್ನು ಶ್ಲಾಘಿಸಿದ ಗಣ್ಯರು*
  • *ಈಜುಕೊಳಕ್ಕೆ ಇಳಿದ ಪ್ರವಾಸಿಗ ಸಾವು : ವಿರಾಜಪೇಟೆಯಲ್ಲಿ ಘಟನೆ*
  • *ಜೂ.17 ರಂದು ಯೋಗ ಭಾರತಿ ರಜತ ಮಹೋತ್ಸವ*
  • *ಮಡಿಕೇರಿಯಲ್ಲಿ ಎಸ್‍ಐಆರ್ ವಿರುದ್ಧ ಜನಜಾಗೃತಿ ಅಭಿಯಾನ : ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ : ಪ್ರಗತಿಪರರ ಆರೋಪ*
  • *ಕೊಡಗಿನ ರಸ್ತೆಗಳ ಅವ್ಯವಸ್ಥೆಗೆ ಶಾಸಕರುಗಳ ನಿರ್ಲಕ್ಷ್ಯವೇ ಕಾರಣ : ಸೋಮವಾರಪೇಟೆ ಬಿಜೆಪಿ ಟೀಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡ್ಲಿಪೇಟೆಯಲ್ಲಿ ಜನಮನ ರಂಜಿಸಿದ ಸಾಂಸ್ಕೃತಿಕ ವೈಭವ : ವಿದ್ಯಾರ್ಥಿಗಳು ಸಾಹಿತ್ಯಾಸಕ್ತರಾಗಬೇಕು : ಕೆ.ಕೆ.ಗೋಪಾಲಕೃಷ್ಣ ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡ್ಲಿಪೇಟೆಯಲ್ಲಿ ಜನಮನ ರಂಜಿಸಿದ ಸಾಂಸ್ಕೃತಿಕ ವೈಭವ : ವಿದ್ಯಾರ್ಥಿಗಳು ಸಾಹಿತ್ಯಾಸಕ್ತರಾಗಬೇಕು : ಕೆ.ಕೆ.ಗೋಪಾಲಕೃಷ್ಣ ಕರೆ*

ಜೂನ್ 8, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜೂ.8 NEWS DESK : ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆ ಬೆಳೆಸಿಕೊಂಡು ಸಾಹಿತ್ಯಾಸಕ್ತರಾಗಬೇಕು ಎಂದು ಭಾರತ ಸರ್ಕಾರದ ದಕ್ಷಿಣ ವಲಯ ಸಾಂಸ್ಕೃತಿಕ ನಿರ್ದೇಶಕರಾದ ಕೆ.ಕೆ.ಗೋಪಾಲಕೃಷ್ಣ ಅವರು ಕರೆ ನೀಡಿದರು. ಕೇಂದ್ರ ಸಂಸ್ಕೃತಿ ಸಚಿವಾಲಯ, ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ, ತಂಜಾವೂರು ಹಾಗೂ ಕುಶಾಲನಗರ ದಕ್ಷಿಣ ಸಿರಿ ಸ್ನೇಹ ಬಳಗದ ವತಿಯಿಂದ ಕೊಡ್ಲಿಪೇಟೆಯ ಎಸ್‍ಜಿಎಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ‘ಮಾನ್ಸೂನ್ ಸಾಂಸ್ಕøತಿಕ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿ ಸನಾತನ ಸಂಸ್ಕೃತಿ ಹೊಂದಿದ್ದು, ಸಮಾನತೆ, ಭಾತೃತ್ವ, ಏಕತೆ ಹೊಂದಿದೆ. ವಿಶ್ವದಲ್ಲಿಯೇ ಭಾರತೀಯ ಸಂಸ್ಕøತಿಗೆ ಹೆಚ್ಚಿನ ಸ್ಥಾನಮಾನ ಇದೆ ಎಂದರು.
ಭಾರತ ಸರ್ಕಾರದ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ತಂಜಾವೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ದಕ್ಷಿಣ ರಾಜ್ಯಗಳಲ್ಲಿ ಆಯಾಯ ಜಿಲ್ಲೆ, ರಾಜ್ಯಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಅದೇ ರೀತಿ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಕಲಾವಿದರುಗಳಿಗೆ ಹಾಗೂ ಅಕ್ಕಪಕ್ಕದ ಜಿಲ್ಲೆಯ ಕಲಾವಿದರು ಒಂದೆಡೆ ಸೇರಿ ಎರಡು ದಿನಗಳ ಕಾರ್ಯಕ್ರಮ “ಮಾನ್ಸೂನು ಉತ್ಸವ” ಎಂಬ ಹೆಸರಿನಡಿ ನಡೆಸಲು ಕನ್ನಡ ಸಿರಿ ಸ್ನೇಹ ಬಳಗ ನಮಗೆ ಸಹಕಾರ ನೀಡುತ್ತಿದೆ ಎಂದು ಶ್ಲಾಘಿಸಿದರು. ಮುಂದೆಯೂ ಸಹ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮ ನಡೆಸಲಾಗುವುದು ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿಜೀ ಮಾತನಾಡಿ ನಮ್ಮ ವಿದ್ಯಾಸಂಸ್ಥೆಯಲ್ಲಿ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದರು. ಸಮಾಜ ಇಂದು ಸಾಂಸ್ಕøತಿಕ ಕಾರ್ಯಕ್ರಮವನ್ನು ಸ್ವೀಕರಿಸಿ ಇಂದಿನ ಪೀಳಿಗೆಗೆ ಪರಿಚಯಿಸಬೇಕೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕ ಹಾಗೂ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ ಜಿಲ್ಲೆಯಲ್ಲಿ ಮಾನ್ಸೂನ್ ಮಳೆಯನ್ನು ಆಹ್ವಾನ ಮಾಡಿಕೊಳ್ಳುವ ಈ ಸಂದರ್ಭದಲ್ಲಿ ಮಾನ್ಸೂನ್ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೊಡ್ಲಿಪೇಟೆಯಲ್ಲಿ ನಡೆಸಲು ಸಂತೋಷವಾಗುತ್ತಿದ್ದು, ತಾವೆಲ್ಲರೂ ಸಂಸ್ಕೃತಿ ಸಾಹಿತ್ಯದ ಸದಭಿರುಚಿ ಬೆಳೆಸಿಕೊಳ್ಳಬೇಕು ಎಂದರು. ನಾಡು ನುಡಿ ಭಾಷೆಗಾಗಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದರು. ಇದಕ್ಕಾಗಿ ಅನೇಕ ಶರಣರು ಸಮಾಜದ ಏಳಿಗೆಗೆ ದುಡಿದು ಕೊಡುಗೆ ನೀಡಿದ್ದಾರೆ ಎಂದರು. ವಿದ್ಯಾರ್ಥಿಗಳು ಸಂಸ್ಕøತಿಯ ಕಡೆಗೆ ಮಾರುಹೋಗುವುದರೊಂದಿಗೆ ಕಲೆಗೆ ಪ್ರೋತ್ಸಾಹ ನೀಡಬೇಕು. ಇಂದು ಅನೇಕ ಜನಪದ ಕಲೆಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಇಂತಹ ಇಲಾಖೆ ಬಾಹ್ಯ ಪ್ರಪಂಚಕ್ಕೆ ಕಲೆಯನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ವೇದಿಕೆಯಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ರಾಣಿ ಮಾಚಯ್ಯ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ರವೀಂದ್ರ ಕುಮಾರ್, ಎಸ್.ಜಿ.ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ತನುಜ, ಕಾರ್ಯದರ್ಶಿ ನಂಜುಂಡ, ಮಣಜೂರು ಮಂಜುನಾಥ್, ಪತ್ರಕರ್ತ ನಾಗರಾಜ, ಕೆ.ಅಶ್ವಥ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎರಡು ದಿನಗಳ ಕಾಲ ಮಾನ್ಸೂನ್ ಉತ್ಸವ ಕಾರ್ಯಕ್ರಮ ನಡೆಸಲು ಕಾರಣರಾದ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ನಿರ್ದೇಶಕ ಕೆ.ಕೆ.ಗೋಪಾಲಕೃಷ್ಣ ಸೇರಿದಂತೆ ಶಾಲೆಯಲ್ಲಿ ಎಸ್‍ಎಸ್ ಎಲ್‍ಸಿಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬರಲು ಶ್ರಮಿಸಿದ ಪ್ರಾಂಶುಪಾಲರಾದ ತನುಜ ಹಾಗೂ ಕಾರ್ಯದರ್ಶಿ ನಂಜುಂಡ ಅವರನ್ನು ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅವರು ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಗೌರವಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕೊಡಗಿನ ಉಮ್ಮತ್ತಾಟ್, ಊರೋಟ್ಟಿಕೋಟ್, ಬಾಳೋಪಾಟ್, ಕಂಸಾಳೆ, ಡೊಳ್ಳು ಕುಣಿತ, ಜೇನುಕುರುಬ ನೃತ್ಯ, ಜಾನಪದ ಹಾಡುಗಳು, ಜಾನಪದ ನೃತ್ಯ, ಕೋಲಾಟ್, ಮುಂತಾದ ಕಲೆಗಳು ಪ್ರದರ್ಶಿಸಿ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು. ಶಾಲೆಯ ಕನ್ನಡ ಭಾಷಾ ಪ್ರಾಧ್ಯಾಪಕರಾದ ಚಂದ್ರಶೇಖರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮೂರ್ನಾಡು : ಜೂ.16 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಜೂನ್ 15, 2026

*ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಶಾಸಕ ಡಾ.ಮಂತರ್ ಗೌಡ : ಕೊಡಗು ಅಭಿವೃದ್ಧಿ ಕುರಿತು ಚರ್ಚೆ*

ಜೂನ್ 15, 2026

*ಕಡಗದಾಳು ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ : ಪರಿಶೀಲನೆ*

ಜೂನ್ 15, 2026

*ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಶಾಸಕ ಡಾ.ಮಂತರ್ ಗೌಡ : ಕೊಡಗು ಅಭಿವೃದ್ಧಿ ಕುರಿತು ಚರ್ಚೆ*

ಜೂನ್ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜೂ.15 NEWS DESK : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು…

*ಕಡಗದಾಳು ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ : ಪರಿಶೀಲನೆ*

ಜೂನ್ 15, 2026

*ವಿ.ಬಾಡಗ ಗ್ರಾಮದಲ್ಲಿ ಕ್ರೀಡಾ ತರಬೇತಿ ಕೇಂದ್ರ ಮತ್ತು ವಸತಿ ನಿಲಯ ನಿರ್ಮಾಣ : ರೂ.45 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ : ಶಾಸಕ ಎ.ಎಸ್.ಪೊನ್ನಣ್ಣ*

ಜೂನ್ 15, 2026

*ಫಾತಿಮಾ ಕಾನ್ವೆಂಟ್ ಶಾಲೆಯ ಸುವರ್ಣ ಸಂಭ್ರಮಕ್ಕೆ ನಿರ್ಧಾರ*

ಜೂನ್ 15, 2026

*ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಕಾರುಣ್ಯ ಕಾರ್ಯಕ್ರಮ : ಸ್ನೇಹಿತರ ಒಕ್ಕೂಟದ ಕಾರ್ಯವನ್ನು ಶ್ಲಾಘಿಸಿದ ಗಣ್ಯರು*

ಜೂನ್ 15, 2026

*ಈಜುಕೊಳಕ್ಕೆ ಇಳಿದ ಪ್ರವಾಸಿಗ ಸಾವು : ವಿರಾಜಪೇಟೆಯಲ್ಲಿ ಘಟನೆ*

ಜೂನ್ 15, 2026

*ಜೂ.17 ರಂದು ಯೋಗ ಭಾರತಿ ರಜತ ಮಹೋತ್ಸವ*

ಜೂನ್ 15, 2026

*ಮಡಿಕೇರಿಯಲ್ಲಿ ಎಸ್‍ಐಆರ್ ವಿರುದ್ಧ ಜನಜಾಗೃತಿ ಅಭಿಯಾನ : ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ : ಪ್ರಗತಿಪರರ ಆರೋಪ*

ಜೂನ್ 15, 2026

*ಕೊಡಗಿನ ರಸ್ತೆಗಳ ಅವ್ಯವಸ್ಥೆಗೆ ಶಾಸಕರುಗಳ ನಿರ್ಲಕ್ಷ್ಯವೇ ಕಾರಣ : ಸೋಮವಾರಪೇಟೆ ಬಿಜೆಪಿ ಟೀಕೆ*

ಜೂನ್ 15, 2026

*ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ : ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ*

ಜೂನ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.