
ಚೆಟ್ಟಳ್ಳಿ NEWS DESK ಜೂ.12 : ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ಮುಖ್ಯಸ್ಥರಾಗಿ ಕಾಫಿ ಮಂಡಳಿಯ ಜಂಟಿ ನಿರ್ದೇಶಕರಾದ(ಸಂಶೋಧನೆ) ಡಾ.ಸಿ.ವಬಾಬು ಅಧಿಕಾರ ಸ್ವೀಕಾರಿಸಿದ್ದಾರೆ. ಈ ಹಿಂದೆ ಉಪನಿರ್ದೇಶಕ ಡಾ.ಜೀನಾ ದೇವಸಿಯಾ ಅವರು ಕೇಂದ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಚಿಕ್ಕಮಗಳೂರಿಗೆ ವರ್ಗಾವಣೆಗೊಂಡ ನಂತರ ಡಾ.ಸಿ. ಬಾಬು ರವರನ್ನು ನೇಮಕ ಮಾಡಲಾಗಿದೆ. 2012ರಲ್ಲಿ ಚಿಕ್ಕಮಂಗಳೂರಿನ ಕಾಫಿ ಸಂಶೋದನಾ ಕೇಂದ್ರದಲ್ಲಿ ವಿಜ್ಞಾನಿಗಳಾಗಿ ಸೇವೆ ಸಲ್ಲಿಸಿದ. ಡಾ. ಬಾಬೋವು ಅವರು 2017ರಲ್ಲಿ ಹಿರಿಯ ವಿಜ್ಞಾನಿಗಳಾಗಿ ಕೇರಳದ ವೈನಾಡಿನಲ್ಲಿ ಸೇವೆ ಸಲ್ಲಿಸಿದರು. 2019ರಲ್ಲಿ ತಮಿಳುನಾಡಿನ ಕಾಫಿ ಸಂಶೋದನಾ ಕೇಂದ್ರದಲ್ಲಿ ಉಪನಿದೇಶಕರಾಗಿ ಸೇವೆಸಲ್ಲಿಸಿ 2022ರಲ್ಲಿ ಕೇಂದ್ರದ ಬೇಸಾಯ ಶಾಸ್ತ್ರ ವಿಭಾಗಿಯ ಮುಖ್ಯಸ್ಥರಾಗಿ 2025ಯಲ್ಲಿ ಚಿಕ್ಕಮಗಳೂರಿನ ಕಾಫಿ ಮಂಡಳಿಯಲ್ಲಿ ಜಂಟಿ ನಿದೇಶಕರಾಗಿ ಸೇವೆಸಿದ್ದು ಚೆಟ್ಟಳ್ಳಿ ಕಾಫಿ ಸಂಶೋದನಾ ಉಪಕೇಂದ್ರವನ್ನು ಅಭಿವ್ರದ್ದಿ ಪಡಿಸುವ ನಿಟ್ಟಿನಲ್ಲಿ ಕೇಂದ್ರದ ಮುಖ್ಯಸ್ಥರಾಗಿ ಕಾಫಿಮಂಡಳಿ ನೇಮಕ ಮಾಡಿದೆ.








