
ಮಡಿಕೇರಿ ಜೂ.24 NEWS DESK : ಅತ್ಯುತ್ತಮ ಸಾಮಾಜಿಕ ಸೇವಾ ಕಾಯ೯ಗಳಿಗಾಗಿ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯುವ ರೋಟರಿ ಜಿಲ್ಲಾ ಮಟ್ಟದ ಡೈಮಂಡ್ ಪ್ಲಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮೈಸೂರಿನ ಮೈಸೂರು ಯೂನಿಯನ್ ಸಭಾಂಗಣದಲ್ಲಿ ರೋಟರಿ ಜಿಲ್ಲೆ 3181 ನ ವಾಷಿ೯ಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಿಯ ವಿವಿಧ ಜಿಲ್ಲಾ ಯೋಜನೆಗಳ ಅತ್ಯುತ್ತಮ ಕಾಯ೯ನಿವ೯ಹಣೆಗಾಗಿ ಮಡಿಕೇರಿಯ ಮಿಸ್ಟಿ ಹಿಲ್ಸ್ ಸಂಸ್ಥೆಗೆ ಡೈಮಂಡ್ ಪ್ಲಸ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ ಪ್ರಶಸ್ತಿಯನ್ನು ರೋಟರಿ ಜಿಲ್ಲಾ ರಾಜ್ಯಪಾಲ ಪಿ.ಕೆ. ರಾಮಕೖಷ್ಣ ಅವರಿಂದ ಪಡೆದುಕೊಂಡರು. ರೋಟರಿಯ ಮುಂದಿನ ಸಾಲಿನ ಗವನ೯ರ್ ಸತೀಶ್ ಬೋಳಾರ್, ನಿಯೋಜಿತ ಗವನ೯ರ್ ಯಶಸ್ವಿನಿ ಸೋಮಶೇಖರ್, ಪ್ರಶಸ್ತಿ ಸಮಿತಿ ಪ್ರಮುಖರಾದ ವಿಕ್ರಂದತ್ತ, ಅರವಿಂದ್ ಭಟ್, ರಿತೇಶ್ ಭಾಳಿಗ, ಉಮೇಶ್ ಹಾಜರಿದ್ದರು. ರೋಟರಿ ಮಿಸ್ಟಿ ಹಿಲ್ಸ್ ನ ನಿದೇ೯ಶಕರು ಪ್ರಶಸ್ತಿ ಸ್ವೀಕಾರ ಸಂದಭ೯ ಇದ್ದರು.









