Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಅತೀ ಶೀಘ್ರದಲ್ಲಿ ಕಾರ್ಡಿಯಾಲಜಿ ಯೂನಿಟ್ ಲಭ್ಯ: ಶಾಸಕ ಡಾ.ಮಂತರ್ ಗೌಡ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಅತೀ ಶೀಘ್ರದಲ್ಲಿ ಕಾರ್ಡಿಯಾಲಜಿ ಯೂನಿಟ್ ಲಭ್ಯ: ಶಾಸಕ ಡಾ.ಮಂತರ್ ಗೌಡ

ಜೂನ್ 28, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಕುಶಾಲನಗರ ಜೂ.28 NEWS DESK : ಜಿಲ್ಲೆಯಲ್ಲಿ ಕಾರ್ಡಿಯಾಲಜಿ ಯೂನಿಟ್ ತೆರೆಯಲು ಸರ್ಕಾರದ ಆದೇಶವಾಗಿದ್ದು, ಆದಷ್ಟು ಬೇಗನೇ ಜಿಲ್ಲೆಯಲ್ಲಿ ಕಾರ್ಡಿಯಾಲಜಿ ಯೂನಿಟ್ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡರವರು ತಿಳಿಸಿದರು. ಕುಶಾಲನಗರ ಸೈರಸ್ ಆಸ್ಪತ್ರೆಯಲ್ಲಿ ಮಾಧ್ಯಮ ಸ್ಪಂದನದ ವತಿಯಿಂದ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾರಕ್ಕೆ 400-450ರೋಗಿಗಳು ಚಿಕಿತ್ಸೆಗಾಗಿ ಹೊರಗೆ ತೆರಳುತ್ತಿದ್ದಾರೆ. ಆದ್ದರಿಂದ ಜಿಲ್ಲೆಯ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಹಂತಹಂತವಾಗಿ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಕೊಡುವ ಕೆಲಸಕ್ಕೆ ಸರ್ಕಾರ ಮುಂದಾಗಲಿದೆ ಎಂದರು.  ಮಾಧ್ಯಮ ಸ್ಪಂದನದಿಂದ ಯಶಸ್ವಿ ರಕ್ತದಾನ ಶಿಬಿರ ಆಯೋಜಿಸಿದ್ದಾರೆ‌. ರಕ್ತದಾನ ಮಾಡುವ ಮೂಲಕ ಅದೆಷ್ಟೋ ಜೀವಗಳನ್ನು ಉಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದೀರಾ. ಮಾಧ್ಯಮ ಮಿತ್ರರ ಸಮಾಜಮುಖಿ ಕೆಲಸಗಳಿಗೆ ಸದಾ ನನ್ನ ಸಹಕಾರ ಇರಲಿದೆ ಎಂದರು. ಮಾಧ್ಯಮ ಸ್ಪಂದನದ ಸಂಸ್ಥಾಪಕರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಸುವ ಜವಾಬ್ದಾರಿ ಶಾಸಕರ ಹೆಗಲ ಮೇಲಿದೆ. ಈ ದಿಸೆಯಲ್ಲಿ ಯುವ ಶಾಸಕ ಡಾ.ಮಂತರ್ ಗೌಡರವರು ಕಾರ್ಯೋನ್ಮುಖರಾಗಬೇಕು ಎಂದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಬಿ‌.ಆರ್‌.ಸವಿತಾ ರೈ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಎಲ್ಲರಿಗೂ ಸಮಾನವಾದ ಚಿಕಿತ್ಸೆ ದೊರೆಯುತ್ತಿಲ್ಲ. ಇದರ ಬಗ್ಗೆ ಶಾಸಕರು ಗಮನಹರಿಸಬೇಕು ಎಂದರು. ಸೈರಸ್ ಆಸ್ಪತ್ರೆಯ ಮೂಳೆ ಶಸ್ತ್ರ ಚಿಕಿತ್ಸೆ ತಜ್ಞರಾದ ಟಿ.ಪಿ.ಜಿನಾಶ್ ಮಾತನಾಡಿ, ಮಾಧ್ಯಮ ಸ್ಪಂದನದ ರಕ್ತದಾನ ಶಿಬಿರದಲ್ಲಿ ಸೈರಸ್ ಆಸ್ಪತ್ರೆಯ ಸಹಯೋಗವಿರುವುದು ಸಂತಸದ ಸಂಗತಿ. ಸೈರಸ್ ಆಸ್ಪತ್ರೆ ಸಮಾಜಮುಖಿ ಕೆಲಸಗಳಿಗೆ ಸದಾ ಸಿದ್ಧವಿರಲಿದೆ ಎಂದರು.
ಈ ಸಂದರ್ಭ ಸೈರಸ್ ಆಸ್ಪತ್ರೆ ವತಿಯಿಂದ ಶಾಸಕರನ್ನು ಗೌರವಿಸಲಾಯಿತು. ಶಾಸಕರು ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿಸಿದರು. ೪೨ ಬಾರಿ ರಕ್ತದಾನ ಮಾಡಿದ ಮಾಧ್ಯಮ ಸ್ಪಂದನದ ಸದಸ್ಯ ಅರುಣ್ ಕುಮಾರ್ ಅವರನ್ನು ಶಾಸಕರು ಅಭಿನಂದಿಸಿದರು. ಈ ಸಂದರ್ಭ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ.ಕೆ.ಪಿ.ಕರುಂಬಯ್ಯ, ಕುಶಾಲನಗರ ತಾಲ್ಲುಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಮ್.ಎನ್.ಚಂದ್ರಮೋಹನ್, ರಕ್ತದಾನ ಶಿಬಿರದ ಸಂಚಾಲಕರಾದ ಕೆ.ಬಿ.ಶಂಶುದ್ಧೀನ್, ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್, ತಾಲ್ಲೂಕು ಸಂಘದ ಉಪಾಧ್ಯಕ್ಷ ಮುಸ್ತಫಾ, ನಿರ್ದೇಶಕರಾದ ರಘು ಹೆಬ್ಬಾಲೆ, ಎಚ್.ಸಿ‌.ಜಯಪ್ರಕಾಶ್, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕರಾದ ಸಂತೋಷ್, ಪತ್ರಕರ್ತರಾದ ಪ್ರದೀಪ್, ಕಿಶೋರ್, ವಿಜಯ್ ಹಾಗೂ ಇನ್ನಿತರರು ಇದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

ಕಳೆದ 8 ತಿಂಗಳಿನಿoದ ಪೌಷ್ಟಿಕ ಆಹಾರ ನೀಡದ ಸರಕಾರ : ಚುನಾವಣೆ ಬಹಿಷ್ಕಾರಕ್ಕೆ ಕೊಡಗು ಬುಡಕಟ್ಟು ಜನಾಂಗಗಳ ನಿರ್ಧಾರ : ಅಭಿವೃದ್ಧಿ ಕಾರ್ಯಗಳಿಗೆ ಆಗ್ರಹ

ನವೆಂಬರ್ 3, 2026

ಕಳೆದ 8 ತಿಂಗಳಿನಿoದ ಪೌಷ್ಟಿಕ ಆಹಾರ ನೀಡದ ಸರಕಾರ : ಚುನಾವಣೆ ಬಹಿಷ್ಕಾರಕ್ಕೆ ಕೊಡಗು ಬುಡಕಟ್ಟು ಜನಾಂಗಗಳ ನಿರ್ಧಾರ : ಅಭಿವೃದ್ಧಿ ಕಾರ್ಯಗಳಿಗೆ ಆಗ್ರಹ

ನವೆಂಬರ್ 3, 2026

ನ.6 ರಂದು ವಿಷ್ಣುಮೂರ್ತಿ ಕೋಲ

ನವೆಂಬರ್ 2, 2026

ಕಳೆದ 8 ತಿಂಗಳಿನಿoದ ಪೌಷ್ಟಿಕ ಆಹಾರ ನೀಡದ ಸರಕಾರ : ಚುನಾವಣೆ ಬಹಿಷ್ಕಾರಕ್ಕೆ ಕೊಡಗು ಬುಡಕಟ್ಟು ಜನಾಂಗಗಳ ನಿರ್ಧಾರ : ಅಭಿವೃದ್ಧಿ ಕಾರ್ಯಗಳಿಗೆ ಆಗ್ರಹ

ನವೆಂಬರ್ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ನ.3 : ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗಗಳಿಗೆ ಕಳೆದ 8 ತಿಂಗಳಿನಿoದ ಸರಕಾರ…

ನ.6 ರಂದು ವಿಷ್ಣುಮೂರ್ತಿ ಕೋಲ

ನವೆಂಬರ್ 2, 2026

ಬಾಳಲೆ-ದೇವನೂರು : ನ.3 ರಂದು ವಿದ್ಯುತ್ ವ್ಯತ್ಯಯ

ನವೆಂಬರ್ 2, 2026

ವಿರಾಜಪೇಟೆ ಕರ್ನಾಟಕ ಸಂಘದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

ನವೆಂಬರ್ 2, 2026

ಪ್ರಸವ ವೇದನೆಯಿಂದ ಬಳಲುತ್ತಿದ್ದ ಗರ್ಭಿಣಿಗೆ ನೆರವು: ‘ರಾಣಿ’ ಬಸ್ ಸಿಬ್ಬಂದಿಗೆ ಸನ್ಮಾನ

ನವೆಂಬರ್ 2, 2026

ಕುಶಾಲನಗರದ ನೂತನ ತಹಶೀಲ್ದಾರ್ ಆಗಿ ರಮೇಶ್ ಬಾಬು ಅಧಿಕಾರ ಸ್ವೀಕಾರ; ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯಿಂದ ಆತ್ಮೀಯ ಸ್ವಾಗತ ಹಾಗೂ ಗೌರವ ಸನ್ಮಾನ

ನವೆಂಬರ್ 2, 2026

ಕುಲಾಲ ಕ್ರಿಕೆಟ್ ಚಾಂಪಿಯನ್ ಟ್ರೋಫಿ ಸೀಸನ್-2: ಗೆಳೆಯರ ಬಳಗ ಕುಶಾಲನಗರ ತಂಡ ಚಾಂಪಿಯನ್

ನವೆಂಬರ್ 2, 2026

ಹಾಲಿನ ದರ ಏರಿಕೆ ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ; ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹ

ನವೆಂಬರ್ 2, 2026

ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಕಲರವಕ್ಕೆ ಸಚಿವ ಪಿ.ಎಂ. ನರೇಂದ್ರಸ್ವಾಮಿ ಚಾಲನೆ

ನವೆಂಬರ್ 2, 2026

ಚೆಯ್ಯಂಡಾಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಥಿಲ ಕಟ್ಟಡ: ತಕ್ಷಣ ದುರಸ್ತಿಗೆ ಆಗ್ರಹ

ನವೆಂಬರ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.