
ಮಡಿಕೇರಿ ಜೂ.28 : ತುಮಕೂರು ಸ್ನಾತಕೋತ್ತರ ವ್ಯವಹಾರ ಆಡಳಿತ ಮಂಡಳಿ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿನಿ, ಮಡಿಕೇರಿ ತಾಲ್ಲೂಕಿನ ಅರ‍್ವತ್ತೊಕ್ಲು ಗ್ರಾಮದ ದಿವ್ಯ ಎ. ಅವರು ತುಮಕೂರು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ ಪಡೆದಿದ್ದಾರೆ. Impact of Work Flexibility on Employee Performance in Selected Private hospitals- With Special reference to Nurses in Mangalore & Udupi City ವಿಷಯದ ಮೇಲೆ ಪ್ರೊ.ಶಿವಶಂಕರ್ ಕೆ.ಸಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ. ದಿವ್ಯ ಎ. ಅವರಿಗೆ ಪತಿ ಸಂತು ಟಿ.ಪಿ ಹಾಗೂ ಪುತ್ರ ಕುಶ್ ಟಿ.ಎಸ್ ಶುಭ ಕೋರಿದ್ದಾರೆ.








