
ಮಡಿಕೇರಿ ಜು.9 NEWS DESK : ವಿರಾಜಪೇಟೆಯ ಆರ್ಜಿ ಗ್ರಾಮದ ‘ಶಕ್ತಿ ವೃದ್ಧಾಶ್ರಮ’ದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಹಾಕತ್ತೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯರು ಹಾಗೂ ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಪಿಯೂಷ್ ಪೆರೇರಾ ಮತ್ತು ಕುಟುಂಬಸ್ಥರು ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ನಿರಾಶ್ರಿತರೊಂದಿಗೆ ಶಾಸಕರ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ಇದೇ ಸಂದರ್ಭ ವೃದ್ಧಾಶ್ರಮದ ನಿರಾಶ್ರಿತರ ಅನುಕೂಲಕ್ಕಾಗಿ ಪಿಯೂಷ್ ಪೆರೇರಾ ಕುಟುಂಬದ ವತಿಯಿಂದ 25 ಕಂಬಳಿಗಳನ್ನು ವಿತರಿಸಿ, ಮಾನವೀಯತೆ ಮೆರೆದರು.









